ಪ್ರಸಿದ್ಧ ಪಬ್ ಜಿ ಗೇಮಿಗೆ ಸೆಡ್ಡು ಹೊಡೆಯುತ್ತಿದೆ ಬೆಂಗಳೂರು ಮೂಲದ ಮೊಬೈಲ್ ಗೇಮ್

ಚೀನಾದ ಪಬ್ ಜಿ ಗೇಮ್ಗೆ ಪರ್ಯಾಯವಾಗಿ ಭಾರತದ ಅದರಲ್ಲೂ ಬೆಂಗಳೂರಿನ ಸಂಸ್ಥೆಯೊಂದು ಆಕ್ಷನ್ ಗೇಮ್ ಆಪ್ ತಯಾರಿಸಿದೆ! ಹೌದು ಭಧ್ರತಾ ನಿಯಮಗಳ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಚೀನಾದ ಬಹುತೇಕ ಆಪ್ ಗಳನ್ನು ಭಾರತ ದೇಶದಲ್ಲಿ ನಿಷೇಧ ಮಾಡಲಾಗಿದೆ. ಈ ಪಬ್ ಜಿ ಗೇಮ್ ಗೆ ಭಾರತದ ಬಹುತೇಕ ಯುವಕರು ಇದಕ್ಕೆ ಅಡಿಕ್ಟ್ ಆಗಿದ್ದರು ಎನ್ನಬಹುದು, ಅಷ್ಟರ ಮಟ್ಟಿಗೆ ಪಬ್ ಜಿ ಆವರಿಸಿಕೊಂಡಿತ್ತು. ಈ ಆಪ್ ಬ್ಯಾನ್ ಆದ ನಂತರ ಟಿಕ್ ಟಾಕ್ ಮನರಂಜನೆಯ ಆಪ್ ಕೂಡ ಬ್ಯಾನ್ ಆಯಿತು, ಹೀಗೇ ಒಂದಾದ ಒಂದರ ನಂತರ ಚೀನಾದ ಆಪ್ ಗಳನ್ನು ಕಿತ್ತೇಸೆದ ಮೋದಿ ಸರ್ಕಾರ ಸ್ವದೇಶಿ ಆಪ್ ಗಳ ಅಭಿವೃದ್ದಿಗೆ ಮತ್ತು ಬಳಕೆಗೆ ಪ್ರೋತ್ಸಾಹ ನೀಡಲು ಆರಂಭಿಸಿದೆ.

ಇದೀಗ ಭಾರತದ ಅದರಲ್ಲಿಯೂ ಕರ್ನಾಟಕದ ರಾಜಧಾನಿ ಬೆಂಗಳೂರಿನ ಎನ್ಕೋರ್ ಗೇಮ್ ಎಂಬ ಸಂಸ್ಥೆಯು ಆಕ್ಷನ್ ಗೇಮ್ ಆಪ್ ಒಂದನ್ನು ಅಭಿವೃದ್ದಿ ಪಡಿಸಿದೆ. ಈ ಆಪ್ ಗೆ ರಾಯಭಾರಿಯಾಗಿ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರನ್ನು, ಅವರ ಭಾವಚಿತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ಜನವರಿ 26ರ ಗಣರಾಜ್ಯೋತ್ಸವ ದಿನದಂದು ಅಕ್ಷಯ್ ಕುಮಾರ್ ಈ ಆಪ್ ಅನ್ನು ಬಿಡುಗಡೆ ಗೊಳಿಸಿದ್ದಾರೆ. ಅಂದ್ಹಾಗೆ ಈ ಆಪ್ನ ಹೆಸರು ಫೌಜಿ ಎಂದು ಕರೆಯಲಾಗಿದೆ. ಈ ಆಪ್ ಭಾರತೀಯ ಸೈನಿಕರ ಜೀವನದ ಕಥೆಯನ್ನು ಹೇಳುವಂತಾಗಿದ್ದು, ಗಡಿಯಲ್ಲಿ ರಾಷ್ಟ್ರದ ರಕ್ಷಣೆಗೆ ಚಳಿ, ಮಳೆ, ಗಾಳಿ ಎನ್ನದೆ ಹಗಲಿರುಳು ಶ್ರಮಿಸುವ ನಮ್ಮ ಯೋಧರ ಬಗ್ಗೆ ಅವರ ಮಹತ್ವದ ಬಗ್ಗೆ ನಮ್ಮ ಯುವಕರಿಗೆ ತಿಳಿಸುತ್ತದೆ.

ಈಗಾಗಲೇ ಈ ಫೌಜಿ ಆಕ್ಷನ್ ಆಪ್ ಬಿಡುಗಡೆಯಾಗಿದ್ದು ಗೂಗಲ್ ಪ್ಲೇ ಸ್ಟೋರ್ ಗಳಲ್ಲಿ ಮತ್ತು ಆಪ್ ಸ್ಟೋರ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಈ ಆಪ್ ಅನ್ನು ಆಂಡ್ರಾಯ್ಡ್ 8.0 ಓರಿಯಾ ಅಥವಾ ಯಾವುದೇ ಸುಧಾರಿತ ಮೊಬೈಲ್ ಗಳಲ್ಲಿ ಗೇಮ್ ಆಡಬಹುದಾಗಿದ್ದು, ಈ ಆಪ್ ನ ಒಟ್ಟಾರೆ ಸಾಮರ್ಥ್ಯ 500 ಎಂಬಿ ಅಷ್ಟಿದೆ ಎಂದು ಸಂಸ್ಥೆ ತಿಳಿಸಿದೆ. ದೇಶದ ಪ್ರತಿಯೊಬ್ಬರು ಕೂಡ ಪ್ರಧಾನಿ ಮೋದಿಯವರ ಆತ್ಮನಿರ್ಭರ ದೃಷ್ಟಿಕೋನದ ಬಗ್ಗೆ ಕಡ್ಡಾಯವಾಗಿ ಅರಿತುಕೊಳ್ಳಬೇಕಾಗಿದೆ. ಇನ್ನು ಈ ಗೇಮ್ ನಿಂದ ಬರುವ ವರಮಾನದಲ್ಲಿ ಶೇಕಡಾ 20ರಷ್ಟು ಭಾರತ್ಕೆ ವೀರ್ ಟ್ರಸ್ಟ್ ಗೆ ನೀಡುತ್ತೇನೆ ಎಂದು ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

%d bloggers like this: