ಧಾರಾವಾಹಿಗಳು ನಮ್ಮ ಜೀವನದಲ್ಲಿ ಎಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿವೆ ಎಂದರೆ ಧಾರಾವಾಹಿಗಳನ್ನು ನೋಡದೆ ಇದ್ದರೆ ದಿನವೇ ಮುಗಿಯುವುದಿಲ್ಲ ಎಂಬ ಸ್ಥಿತಿಗೆ ಬಂದು ನಿಂತಿದ್ದೇವೆ. ಅದರಲ್ಲೂ ಈ ಲಾಕ್ ಡೌನ್ ಸಮಯದಲ್ಲಂತೂ ಹೊಸಹೊಸ ದಾರವಾಹಿಗಳ ಅಬ್ಬರ ಜೋರಾಗಿಯೆ ಇತ್ತು. ಸಂಜೆ 5 ಅಥವಾ 6 ಗಂಟೆಗೆ ಟಿವಿ ಪ್ರಾರಂಭವಾದರೆ ಸಾಕು ರಾತ್ರಿ ಮಲಗುವವರೆಗೂ ಒಂದರ ಹಿಂದೆ ಒಂದರಂತೆ ದಾರವಾಹಿಗಳು ಟಿವಿ ಪರದೆ ಮೇಲೆ ನೋಡುಗರನ್ನು ಹಿಡಿದುಕೊಂಡು ಕೂತಿರುತ್ತದೆ. ಈ ನಡುವೆ ಇತ್ತೀಚಿಗೆ ಹೊಸದಾಗಿ ಬಂದ ಒಂದು ಧಾರಾವಾಹಿ ತುಂಬಾ ವಿಶೇಷವಾಗಿ ಮೂಡಿ ಬಂದಿದ್ದು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅತೀ ಕಡಿಮೆ ಸಮಯದಲ್ಲಿ ಪಡೆದುಕೊಂಡಿದೆ.

ಹೌದು ಎಲ್ಲರ ಮೆಚ್ಚುಗೆಗೆ ಪಾತ್ರವಾದ ಧಾರಾವಾಹಿ ಯಾವುದೆಂದರೆ ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ಸತ್ಯ. ಹೌದು ಈ ಸತ್ಯ ಧಾರವಾಹಿ ಬೇರೆಲ್ಲ ಧಾರವಾಹಿಗಳಿಗಿಂತ ಸ್ವಲ್ಪ ವಿಶೇಷವಾಗಿ ಮೂಡಿ ಬರುತ್ತಿದೆ. ಧಾರಾವಾಹಿಯಲ್ಲಿ ಮುಖ್ಯ ಪಾತ್ರದಾರಿಯೆಂದರೆ ಸತ್ಯ ಎಂಬ ಹುಡುಗನ ರೀತಿಯ ಬೋಲ್ಡ್ ಹುಡುಗಿಯ ಜೀವನ ಕಥೆ. ಹೌದು ಸಮಾಜದಲ್ಲಿ ಹುಡುಗರ ಇರುವಿಕೆಗು ಹುಡುಗಿಯರ ಇರುವಿಕೆಗೆ ವ್ಯತ್ಯಾಸವಿದೆ.

ಆದರೆ ಸತ್ಯ ಧಾರಾವಾಹಿಯ ನಾಯಕಿ ಹುಡುಗನಂತೆ ಸುತ್ತಾಡಿಕೊಂಡು ಓಡಾಡಿಕೊಂಡು ಬಿಂದಾಸ್ ಆಗಿರುವ ಪಾತ್ರ. ಈ ರೀತಿಯ ವಿಶೇಷ ಧಾರಾವಾಹಿಯನ್ನು ಕನ್ನಡಿಗರು ಅತಿಯಾಗಿ ಮೆಚ್ಚಿಕೊಂಡಿದ್ದು ಧಾರವಾಹಿ ಯಶಸ್ಸಿನ ಅಲೆಯಲ್ಲಿ ಓಡುತ್ತಿದೆ. ಅಷ್ಟಕ್ಕೂ ಈ ಧಾರಾವಾಹಿ ಮೂಲತಃ ತಮಿಳಿನ ಫೇಮಸ್ ಸತ್ಯ ಎಂಬ ಧಾರವಾಹಿಯ ರೀಮೇಕ್ ಆಗಿದೆ. ತಮಿಳಿನಲ್ಲಿ ಸಾಕಷ್ಟು ಮೆಚ್ಚುಗೆಯನ್ನು ಪಡೆದದ್ದರಿಂದ ಅದನ್ನು ಕನ್ನಡಕ್ಕೆ ತರಬೇಕು ಎಂದು ತೀರ್ಮಾನಿಸಿ ಅದನ್ನು ಮಾಡಿ ತೋರಿಸಿದ್ದು ಪೈಲ್ವಾನ್ ಹೆಬ್ಬುಲಿ ಗಜಕೇಸರಿ ತರಹದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ ಖ್ಯಾತ ನಿರ್ದೇಶಕ ಕೃಷ್ಣ ಅವರ ಮಡದಿ ಸ್ವಪ್ನ ಕೃಷ್ಣ ಅವರು.

ಪ್ರಸಿದ್ಧಹೌದು ಸ್ವಪ್ನ ಅವರು ಹಿಂದೆ ಪೈಲವನ್ ಅಂತಹ ಬಿಗ್ ಹಿಟ್ ಸಿನಿಮಾದ ನಿರ್ಮಾಪಕರಾಗಿ ಕೆಲಸ ಮಾಡಿ ಯಶಸ್ವಿ ಆಗಿದ್ದರು. ಇದೀಗ ಸತ್ಯ ಎಂಬ ಹಿಟ್ ಧಾರಾವಾಹಿಯನ್ನು ಕನ್ನಡಿಗರಿಗೆ ಪರಿಚಯಿಸಿ ಯಶಸ್ವಿ ಗಳಿಸಿದ್ದಾರೆ. ಸತ್ಯ ಎಂಬ ಪಾತ್ರದಲ್ಲಿ ಗೌತಮಿ ಜಾಧವ್ ಅವರು ನಟಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಒಟ್ಟಾರೆಯಾಗಿ ಸ್ವಪ್ನ ಕೃಷ್ಣ ಅವರ ಈ ಪ್ರಯತ್ನಕ್ಕೆ ಕನ್ನಡಿಗರು ಜೈ ಎಂದಿದ್ದು ಈ ಧಾರಾವಾಹಿ ಇನ್ನಷ್ಟು ಯಶಸ್ವಿ ಗಳಿಸಲಿ ಎಂದು ಹಾರೈಸೋಣ.