ಪ್ರತಿದಿನ ನಾಲ್ಕೇ ನಾಲ್ಕು ಬಾದಾಮ್ ಅನ್ನು ನೀರಲ್ಲಿ ನೆನೆಸಿ ತಿನ್ನಿ, ಹಲವಾರು ಲಾಭಗಳಿವೆ

ಬಾದಾಮಿಯಲ್ಲಿರುವ ಪ್ರೋಟೀನ್ ಅಂಶಗಳು ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಪ್ರಯೋಜಕರಿ ಡ್ರೈ ಪ್ರೂಟ್ಸ್ ಆಗಿದೆ, ಅದನ್ನು ಹಾಗೆ ತಿನ್ನುವುದರಿಂದ ನಿಮ್ಮ ದೇಹಕ್ಕೆ ಪರಿಣಾಮಕಾರಿ ಪ್ರಯೋಜನಆಗುವುದಿಲ್ಲ. ಆದರೆ ಬಾದಾಮಿಯನ್ನು ನೆನೆಸಿಟ್ಟು ತದನಂತರ ಬಾದಾಮಿ ಸೇವಿಸುವುದರಿಂದ ಹಲವಾರು ಪ್ರಯೊಜನಗಳಿವೆ. ಬಾದಾಮಿಯಲ್ಲಿ ವಿವಿಧ ರೀತಿಯಾದ ಗುಣಮಟ್ಟದ ಬಾದಾಮಿಗಳಿವೆ. ಅದರಲ್ಲಿ ಮಾಮ್ರಾ ಬಾದಾಮಿ, ಸಿಹಿ ಬಾದಾಮಿ ಮತ್ತು ಕಹಿ ಬಾದಾಮಿ. ಈ ಕಹಿ ಬಾದಾಮಿಯನ್ನು ತಿನ್ನಲು ಬಳಸುವುದಿಲ್ಲ ಅದನ್ನು ಎಣ್ಣೆಗಾಗಿ ಬಳಸುತ್ತಾರೆ. ಇನ್ನು ಮಾಮ್ರಾ ಬಾದಾಮಿಗೆ ತುಂಬಾ ಬೆಲೆಯಿರುತ್ತದೆ. ಇದು ತುಂಬಾ ಸಣ್ಣದಾದ ಗಾತ್ರವೊಂದಿದ್ದು ಸಿಹಿಯನ್ನು ಹೊಂದಿರುತ್ತದೆ. ಈ ಸಿಹಿ ಬಾದಾಮಿ ಅನ್ನುವುದನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಈ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ತಿನ್ನುವುದರಿಂದ ನಿಮ್ಮ ಚರ್ಮದ ಸಲವು ಸಮಸ್ಯೆಗಳಿಗೆ ರಾಮಭಾಣವಾಗಿ ಕೆಲಸ ಮಾಡುತ್ತದೆ.

ಬಾದಾಮಿಯಲ್ಲಿ ಓಮೆಗಾ, ಪ್ರೊಟೀನ್ ಅಂಶ, ವಿಟಮಿನ್ಇ, ಕ್ಯಾಲ್ಸಿಯಂ, ಫಾಸ್ಪರಸ್ ಅಂಶಗಳನ್ನು ಒಳಗೊಂಡಿರುತ್ತದೆ. ಕೆಲವರಿಗೆ ಮುಖವು ಚಿಕ್ಕ ವಯಸ್ಸಿನಲ್ಲಿಯೇ ಮುಖ ಸುಕ್ಕು ಗಟ್ಟುವುದು, ನೆರಿಗೆಗಳು ಉಂಟಾಗುವಂತಹ ಸಮಸ್ಯೆಗಳು ಕಾಡುತ್ತವೆ. ಇಂತಹ ಸಮಸ್ಯೆಗಳು ಹೆಚ್ಚು ಹುಡುಗಿಯರಿಗೆ ಕಾಡುತ್ತದೆ.

ಈ ಚರ್ಮದ ಸಮಸ್ಯೆಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೀತಿಯ ಔಷಧಿಗಳನ್ನು ಬಳಸಿದರು ಸಹ ಯಾವುದೇ ರೀತಿಯ ಪ್ರಯೋಜನ ವಾಗುವುದಿಲ್ಲ. ಅಂತಹ ಸಮಯದಲ್ಲಿ ಈ ಬಾದಾಮಿಯ ನ್ನು ಬಳಸಿಕೊಂಡರೆ ಉತ್ತಮವಾದ ಫಲಿತಾಂಶ ಪಡೆಯಬಹುದಾಗಿದೆ. ನೆನೆಸಿಟ್ಟ ಬಾದಾಮಿಯಲ್ಲಿ ಪ್ರೀ ಬಯಾಟಿಕ್ ಅಂಶವು ಅಧಿಕವಾಗಿರುವುದರಿಂದ ಅವು ಹೊಟ್ಟೆಯಲ್ಲಿ ಬ್ಯಾಕ್ಟಿರೀಯಾ ಉತ್ಪಾದಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನೆನೆಸಿಟ್ಟ ಬಾದಾಮಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತದೆ. ಇನ್ನು ಗರ್ಭಿಣಿಯರು ಇದನ್ನು ತಿನ್ನುವುದರಿಂದ ನಿಮ್ಮ ಗರ್ಭದಲ್ಲಿರುವ ಮಗು ಮತ್ತು ನಿಮಗೆ ಪೌಷ್ಠಿಕಾಂಶ ದೊರೆತು ಆರೋಗ್ಯಕರವಾಗಿ ಇರುತ್ತಾರೆ. ಜೊತೆಗೆ ಈ ನೆನೆಸಿಟ್ಟ ಬಾದಾಮಿಯನ್ನು ಗರ್ಭಿಣಿಯರು ಸೇವಿಸುವುದರಿಂದ ಹುಟ್ಟುವ ಮಗು ಯಾವುದೇ ರೀತಿಯ ವೈಕಲ್ಯಕ್ಕೆ ಒಳಗಾಗುವುದಿಲ್ಲ.

ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ 6 ರಿಂದ 10ಬಾದಾಮಿ ಕಾಳುಗಳನ್ನು ಸೇವಿಸುವುದರಿಂದ ನಿಮ್ಮ ಮೆದುಳಿನ ಶಕ್ತಿ ಹೆಚ್ಚಾಗಿ ಜ್ಞಾಪಕ ಶಕ್ತಿಯು ಕೂಡ ಅಧಿಕವಾಗುತ್ತದೆ. ಮಲಬದ್ದತೆ ಸಮಸ್ಯೆ ಇರುವವರಿಗೆ ಈ ನೆನೆಸಿಟ್ಟ ಬಾದಾಮಿ ಉತ್ತಮ ಪರಿಹಾರವಾಗಿದೆ. ಹೊಟ್ಟೆಯ ಕೆಳಭಾಗದಲ್ಲಿರುವ ಕೊಬ್ಬನ್ನು ಕರಗಿಸುವುದಕ್ಕೆ ಇದು ಸಹಾಯಕಾರಿಯಾಗಿದೆ.

%d bloggers like this: