ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಟಾಪ್ ಸೀರಿಯಲ್ ಗಳಲ್ಲಿ ನಾಗಿಣಿ 2 ಕೂಡ ಒಂದು. ಈ ಧಾರಾವಾಹಿಯು ನಾಗಮಣಿಗಾಗಿ ಮನುಷ್ಯ ರೂಪ ಧರಿಸಿ ಬಂದ ನಾಗಲೋಕದ ನಾಗರಾಜ ಹಾಗೂ ನಾಗರಾಣಿಯ ಸುತ್ತ ಹೆಣೆದ ಕಥೆಯಾಗಿದೆ. ಇನ್ನು ನಾಗರಾಜನ ಪಾತ್ರಧಾರಿ ತ್ರಿಶೂಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಂದಹಾಗೆ ತ್ರಿಶುಲ್ ಅವರ ನಿಜವಾದ ಹೆಸರು ನಿನಾದ್. ನಿನಾದ್ ಅವರಿಗೆ ನಾಗಿಣಿ ಧಾರಾವಾಹಿಯ ಬಗ್ಗೆ ಅಪಾರ ಗೌರವವಿದೆ. ಏಕೆಂದರೆ ಇದು ಅವರ ಮೊದಲ ಹೆಜ್ಜೆ. ನಾಗಿಣಿ ಧಾರಾವಾಹಿಯ ನಂತರ ಇವರಿಗೆ ಬೇಡಿಕೆ ಹೆಚ್ಚಾಗಿದೆ. ಧಾರವಾಹಿಯ ಮೂಲಕ ಜನಮನ ಗೆದ್ದ ನಿನಾದ್ ಅವರಿಗೆ ಸಿನಿಮಾ ಮತ್ತು ವೆಬ್ ಸೀರೀಸ್ ಆಫರ್ ಗಳು ಬರುತ್ತಿವೆ.

ಆದರೆ ನಾಗಿಣಿ ಸೀರಿಯಲ್ ಬಿಟ್ಟು ಬೇರೆ ಯಾವ ಪ್ರಾಜೆಕ್ಟ್ ಮಾಡಲು ಇವರಿಗೆ ಇಷ್ಟವಿಲ್ಲ. ಒಂದು ವೇಳೆ ಸಾಧ್ಯವಾದರೆ ನಾಗಿಣಿ ಧಾರಾವಾಹಿಯ ಜೊತೆಜೊತೆಗೆ ಸಿನಿಮಾದಲ್ಲಿ ನಟಿಸಲು ಯೋಚಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದಿರುವ ನಿನಾದ್ ಅವರು, ತಮ್ಮ ನಿಜ ಜೀವನದಲ್ಲಿ ಹೊಸ ಹೆಜ್ಜೆ ಇಡುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿನಾದ್ ಅವರು ತಮ್ಮ ಸ್ನೇಹಿತೆಯ ಜೊತೆ ಮದುವೆ ನಿಶ್ಚಿತಾರ್ಥವನ್ನು ಇತ್ತೀಚಿಗೆ ನೆರವೇರಿಸಿ ಕೊಂಡಿದ್ದಾರೆ. ನಿನಾದ್ ಅವರ ಗೆಳತಿಯ ಹೆಸರು ರಮ್ಯ.

ಇವರಿಬ್ಬರೂ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹದಿಂದ ಪ್ರೀತಿಗೆ ಬದಲಾಗಿದೆ ಎಂದಿದ್ದಾರೆ. ಇವರಿಬ್ಬರ ಪ್ರೀತಿಯನ್ನು ಮನೆಯಲ್ಲಿ ಎಲ್ಲರೂ ಒಪ್ಪಿಕೊಂಡಿದ್ದು, ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆಗುತ್ತಿದ್ದಾರೆ. ಇದನ್ನು ಲವ್ ಮ್ಯಾರೇಜ್ ಗಿಂತ ಅರೆಂಜ್ ಮ್ಯಾರೇಜ್ ಎನ್ನಬಹುದು ಎಂದು ನಿನಾದ್ ಹೇಳಿದ್ದಾರೆ. ರಮ್ಯಾ ಅವರು ಸಿ ಎ ಓದುತ್ತಿದ್ದಾರೆ. ಅವರಿಗೆ ಯಾವುದೇ ಸೀರಿಯಲ್ ನಂಟಿಲ್ಲ. ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ಇವರಿಬ್ಬರು ಮದುವೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಇನ್ನೂ ಐದು ಆರು ತಿಂಗಳಲ್ಲಿ ಮದುವೆ ನಿಶ್ಚಯವಾಗಬಹುದು ಎಂದು ನಿನಾದ್ ಹೇಳಿದ್ದಾರೆ.