ಪ್ರೇಮ್ ಅವರ ಬಹು ನಿರೀಕ್ಷಿತ ಕನ್ನಡ ಚಿತ್ರ ಮುಂದಿನ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ

ಸ್ಯಾಂಡಲ್ವುಡ್ ನ ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಅವರ ಹೊಸ ಚಿತ್ರವೊಂದು ರಿಲೀಸ್ ಆಗಲು ಸಜ್ಜಾಗಿದೆ. ತಮ್ಮ ಜೋಗಿ ಚಿತ್ರದ ಖ್ಯಾತಿಯ ಮೂಲಕ ಜೋಗಿ ಪ್ರೇಮ್ ಎಂದೇ ಖ್ಯಾತಿಯಾಗಿರುವ ಪ್ರೇಮ್, ಒಬ್ಬ ಯಶಸ್ವಿ ನಿರ್ದೇಶಕ ಎಂದರೆ ತಪ್ಪಾಗಲಾರದು. ಯಾವಾಗಲೂ ಚಿತ್ರದ ಕಥೆ, ಮೇಕಿಂಗ್, ವಿಭಿನ್ನ ಗೆಟ್ ಅಪ್, ಸಖತ್ ಹಿಟ್ ಸಾಂಗ್ಸ್ ನೀಡುವಲ್ಲಿ ಜೋಗಿ ಪ್ರೇಮ್ ಎತ್ತಿದ ಕೈ. ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ ದಿ ವಿಲ್ಲನ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ಪ್ರೇಮ್ ಅವರ ಪತ್ನಿ, ನಟಿ ರಕ್ಷಿತಾ ಅವರು ನಿರ್ಮಾಣ ಮಾಡಿತ್ತಿರುವ ಚಿತ್ರಕ್ಕೆ ಪ್ರೇಮ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ.

ಇನ್ನು ಪ್ರೇಮ್ ಅವರೇ ನಿರ್ದೇಶಸಿ ರಕ್ಷಿತಾ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಏಕ್ ಲವ್ ಯಾ ಎಂದು ಹೆಸರಿಡಲಾಗಿದೆ. ಇನ್ನೊಂದು ವಿಶೇಷವೆಂದರೆ, ರಕ್ಷಿತಾ ಅವರ ಸಹೋದರ ರಾಣಾ ಈ ಚಿತ್ರದ ಮೂಲಕ ಹೀರೋ ಆಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ರಾಣಾ ಅವರಿಗೆ ಜೊತೆಯಾಗಿ ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ರೀಷ್ಮ ನಾಣಯ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ಜನವರಿ 21ರಂದು ಏಕ್ ಲವ್ ಯಾ ಸಿನಿಮಾ ತೆರೆಗೆ ಬರಬೇಕಾಗಿತ್ತು.

ಆದರೆ ಕೋರೋಣ ಮೂರನೇ ಅಲೆ ಆತಂಕದಿಂದ ಎಲ್ಲಾ ಚಿತ್ರಮಂದಿರಗಳಲ್ಲಿ ಶೇಕಡಾ 50ಪರ್ಸೆಂಟ್ ಮಾತ್ರ ಅವಕಾಶ ನೀಡಿದ. ಹಿನ್ನೆಲೆಯಲ್ಲಿ ಈ ಚಿತ್ರತಂಡವು ಬಿಡುಗಡೆಯ ದಿನಾಂಕವನ್ನು ಮುಂದೂಡಿತ್ತು. ಸದ್ಯಕ್ಕೆ ಕೋವಿಡ್ ಪರಸ್ಥಿತಿ ಸ್ವಲ್ಪ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ 11ರಂದು ಈ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಫೆಬ್ರವರಿ 24ರಂದು ಎಲ್ಲ ಚಿತ್ರಮಂದಿರಗಳಲ್ಲಿ ಏಕ್ ಲವ್ ಯಾ ಚಿತ್ರ ಲಗ್ಗೆ ಇಡಲಿದೆ. ಈಗಾಗಲೇ ಈ ಚಿತ್ರದ ಹಾಡುಗಳು ರಿಲೀಸ್ ಆಗಿದ್ದು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಚಿತ್ರದ ಹಾಡುಗಳಿಂದ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

%d bloggers like this: