ಪ್ರೇಮಿಗಳ ದಿನದಂದೇ ಪತಿಯಿಂದ ಬೇರೆಯಾದ ನಟಿ

ನಿನ್ನೆ ಪ್ರೇಮಿಗಳ ದಿನ. ಎಲ್ಲರೂ ತಮ್ಮ ಪ್ರೀತಿಪಾತ್ರರಿಗೆ ಪ್ರೀತಿಯನ್ನು ಹೇಳಿಕೊಳ್ಳುವ ದಿನ. ಮತ್ತು ಪ್ರೀತಿಸುವವರು ತಮ್ಮ ಪ್ರೀತಿಯನ್ನು ಸೆಲೆಬ್ರೇಟ್ ಮಾಡಿಕೊಳ್ಳುವ ದಿನ. ಆದರೆ ಇಲ್ಲೊಂದು ಬಾಲಿವುಡ್ ಜೋಡಿ ಪ್ರೇಮಿಗಳ ದಿನದಂದೇ ತಮ್ಮ ಪ್ರೀತಿಯನ್ನು ಮುರಿದುಕೊಂಡಿದ್ದಾರೆ. ಹೌದು ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಮತ್ತು ಅವರ ಪತಿ ರಿತೇಶ್ ಬೇರೆಯಾಗಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ನ ಬೇಡಿಕೆಯ ನಟಿಯಾಗಿದ್ದ ರಾಕಿ ಸಾವಂತ್, ಸದ್ಯಕ್ಕೆ ಬಹಳಷ್ಟು ಡಾನ್ಸ್ ಶೋಗಳನ್ನು ನೀಡುತ್ತಿದ್ದಾರೆ. ಸಿನಿಮಾಗಳಲ್ಲಿ ಅವರಿಗೆ ಈಗ ಅವಕಾಶಗಳ ಕೊರತೆ ಇದ್ದು, ಡಾನ್ಸಿಂಗ್ ಶೋ ಹಾಗೂ ಬಿಗ್ ಬಾಸ್ ಕಾರ್ಯಕ್ರಮಗಳೇ ಇವರ ಆದಾಯದ ಮೂಲ. ವಿಶೇಷವೆಂದರೆ ಬಹುತೇಕ ವರ್ಷದಿಂದ ಬಿಗ್ ಬಾಸ್ ನಲ್ಲಿ ಇವರಿಗೆ ಅವಕಾಶ ಸಿಗುತ್ತಿದೆ.

ಹಾಗಾಗಿ ಇವರು ಬಿಗ್ ಬಾಸ್ ಆದಾಯವೇ ದೊಡ್ಡ ಮೂಲವೆಂದು ಪರಿಗಣಿಸಿದ್ದಾರೆ. ರಾಖಿ ಸಾವಂತ್ ಅವರು ನಟ ಸಲ್ಮಾನ್ ಖಾನ್ ಅವರಿಗೆ ಫೇವರೆಟ್ ಎಂದೇ ಹೇಳಬಹುದು. ಏಕೆಂದರೆ ಕಳೆದ ವರ್ಷ ಬಿಗ್ ಬಾಸ್ ಸೀಸನ್ 14ರ ನಂತರ ರಾಖಿ ಸಾವಂತ್ ಅವರ ಅಮ್ಮನ ಚಿಕಿತ್ಸೆಗೆ ಸಲ್ಮಾನ್ ಖಾನ್ ನೆರವಾಗಿದ್ದರು. ಇದಕ್ಕೆ ನಟಿ ಸೋಶಿಯಲ್ ಮೀಡಿಯಾ ಮೂಲಕ ಥ್ಯಾಂಕ್ಸ್ ಕೂಡ ಹೇಳಿದ್ದರು. ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಪತಿಯೊಂದಿಗೆ ರಾಖಿ ಸಾವಂತ್ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಸೀಸನ್ 15ರಲ್ಲಿ ರಾಖಿ ಸಾವಂತ್ ತಮ್ಮ ಪತಿ ರಿತೇಶ್ ಅವರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು. ಆದರೆ ಆರಂಭದಿಂದಲೂ ವಿವಾದಾತ್ಮಕ ಸಂಬಂಧದಲ್ಲಿರುವ ರಾಖಿ ಸಾವಂತ್ ಮತ್ತು ರಿತೇಶ್ ಮದುವೆಯಾಗಿದ್ದಾರೋ ಇಲ್ಲವೋ ಎಂದು ಸ್ಪಷ್ಟವಿರಲಿಲ್ಲ.

ಈ ಬಗ್ಗೆ ಸಲ್ಮಾನ್ ಖಾನ್ ರಿಂದ ಹಿಡಿದು ಪ್ರೇಕ್ಷಕರವರೆಗೂ ಎಲ್ಲರಿಗೂ ಕುತೂಹಲವಿತ್ತು. ಆದರೆ ಇವರಿಬ್ಬರು ಈಗ ತಮ್ಮ ಸಂಬಂಧವನ್ನು ಕಡೆದುಕೊಳ್ಳುತ್ತಿದ್ದಾರೆ. ರಾಖಿ ಸಾವಂತ್ ಅವರ ಪತಿ ಎನ್ನಲಾಗುವ ರಿತೇಶ್ ಅವರಿಗೆ ಮೊದಲ ಪತ್ನಿ ಇದ್ದು ಅವರಿಗೆ ಒಂದು ಮಗು ಕೂಡ ಇದೆ. ಬಿಗ್ ಬಾಸ್ ಶೋನಲ್ಲಿ ರಾಕಿ ಹಾಗೂ ರಿತೇಶ್ ಸಂಬಂಧ ಕಂಡ ಮೊದಲ ಪತ್ನಿ, ಆತ ನನಗೆ ಡೈವೋರ್ಸ್ ಕೊಡದೇ ರಾಖಿಯನ್ನು ವರಿಸಿದ್ದಾನೆ. ಹೀಗಾಗಿ ಅವನು ನನಗೂ ಗಂಡ ಎಂದು ವಿವಾದ ಶುರುಮಾಡಿದ್ದರು. ಮದುವೆಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ಈ ಜೋಡಿ ಭಾರತದಲ್ಲಿ ಎಲ್ಲಿಯೂ ಯಾರ ಕಣ್ಣಿಗೂ ಬಿದ್ದಿಲ್ಲ. ಬಿಗ್ ಬಾಸ್ ಶೋ ನಂತರ ನಮ್ಮ ಜೀವನದಲ್ಲಿ ಬಹಳಷ್ಟು ಘಟನೆಗಳು ಆದವು. ಅವುಗಳಲ್ಲಿ ಬಹಳಷ್ಟು ಘಟನೆಗಳು ನನ್ನ ನಿಯಂತ್ರಣದಲ್ಲಿರಲಿಲ್ಲ.

ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಸರಿಮಾಡಿಕೊಳ್ಳುವ ಪ್ರಯತ್ನ ಮಾಡಿದೆವು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾವಿಬ್ಬರು ನಮ್ಮ ಜೀವನವನ್ನು ಬೇರೆಬೇರೆ ಹಾದಿಯಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ರಾಖಿ ಸಾವಂತ್ ಅವರು ವ್ಯಾಲೆಂಟೈನ್ಸ್ ಡೇ ಹಿಂದಿನ ದಿನ ಸಂಜೆ ಹೇಳಿಕೊಂಡಿದ್ದರು. ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ನನಗೆ ನಿಜವಾಗಲೂ ದುಃಖವಾಗಿದೆ. ಆದರೆ ನಾನು ನನ್ನ ಜೀವನದ ಈ ಹಂತದಲ್ಲಿ ನನ್ನ ಕೆಲಸ ಮತ್ತು ನನ್ನ ಆರೋಗ್ಯದ ಮೇಲೆ ಗಮನವಿಟ್ಟುಕೊಳ್ಳಬೇಕು. ನಾನು ರಿತೇಶ್ ಅವರ ಜೀವನ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ. ಮತ್ತು ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ನನಗೆ ತುಂಬಾ ಅವಶ್ಯಕ ಎಂದು ರಾಖಿ ಸಾವಂತ್ ಅವರ ಅಭಿಮಾನಿಗಳಲ್ಲಿ ಕೇಳಿದ್ದಾರೆ.

%d bloggers like this: