ಪ್ರೇಮಿಗಳ ದಿನದಂದು ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ಕಿರುತೆರೆ ನಟಿ

ಕಿರುತೆರೆಯ ಜೋಡಿ ಒಬ್ಬರು ಹಸೆಮಣೆಯೇರಲು ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ಇಷ್ಟಪಡುತ್ತಿದ್ದ ಈ ಜೋಡಿ ಮನೆಯವರ ಒಪ್ಪಿಗೆಯಂತೆ ಇದೆ ಫೆಬ್ರುವರಿ 14 ರಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಯಾವ ಕಿರುತೆರೆಯ ಜೋಡಿ ಮದುವೆಯಾಗುತ್ತಿದ್ದಾರೆ ಎಂದು ಕನ್ಫ್ಯೂಸ್ ಆಗಿದ್ದೀರಾ, ಯಾರು ಎಂದು ತಿಳಿಯಲು ಮುಂದೆ ಓದಿ. ಕನ್ನಡದ ಕಿರುತೆರೆಯಲ್ಲಿ ಬಹು ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದ ಸೀರಿಯಲ್ ಗಳಲ್ಲಿ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಕೂಡ ಒಂದು. ಬಹು ದೊಡ್ಡ ಮಟ್ಟದಲ್ಲಿ ರೇಟಿಂಗ್ ಪಡೆದ ಧಾರಾವಾಹಿಗಳಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಕೂಡ ಸ್ಥಾನ ಪಡೆಯುತ್ತದೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ತನು ಪಾತ್ರ ನಿರ್ವಹಿಸಿದ ಎರಡನೇ ನಟಿ ಐಶ್ವರ್ಯ ಸಾಲಿಮಠ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಇವರು ಎಂಗೇಜ್ಮೆಂಟ್ ಮಾಡಿಕೊಂಡ ಹುಡುಗ ಕೂಡ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹೌದು ಅಗ್ನಿಸಾಕ್ಷಿ, ಮಹಾದೇವಿ, ಜೀವನದಿ, ಮಹಾಸತಿ ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ವಿನಯ್ ಅವರು ಐಶ್ವರ್ಯ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಐಶ್ವರ್ಯ ಮತ್ತು ವಿನಯ್ ಅವರು ಮಹಾಸತಿ ಧಾರಾವಾಹಿಯ ಮೂಲಕ ಒಟ್ಟಿಗೆ ತಮ್ಮ ಕೆರಿಯರನ್ನು ಶುರುಮಾಡಿದ್ದರು. ಸಾಗರ್ ಪುರಾಣಿಕ್ ಅವರು ನಿರ್ಮಿಸಿದ ಮಹಾಸತಿ ಧಾರವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ, ಇಂದು ರಿಯಲ್ ಲೈಫ್ ನಲ್ಲೂ ಜೋಡಿಯಾಗಲಿದ್ದಾರೆ.

ಮತ್ತು ವಿಶೇಷವೆಂದರೆ ಇದೇ ಮಹಾಸತಿ ಧಾರಾವಾಹಿಯಲ್ಲಿ ನಟಿಸಿದ್ದ ಸಾಗರ್ ಪುರಾಣಿಕ್ ಹಾಗೂ ದೀಪಾ ಜಗದೀಶ್ ಕೂಡ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕಿರುತೆರೆಯಲ್ಲಿ ಒಂದಾದ ಮೇಲೊಂದು ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದು ಖುಷಿಯ ಸಂಗತಿ. ಅದರಲ್ಲೂ ವಿನಯ್ ಹಾಗೂ ಐಶ್ವರ್ಯ ಸಾಲಿಮಠ ಇವರಿಬ್ಬರು ಉತ್ತರ ಕರ್ನಾಟಕದ ಧಾರವಾಡದವರು ಎಂಬುದು ಹೆಮ್ಮೆಯ ವಿಷಯ. ಮೊದಲು ಒಳ್ಳೆಯ ಸ್ನೇಹಿತರಾಗಿದ್ದ ಐಶ್ವರ್ಯ ಹಾಗೂ ವಿನಯ್ ಅವರ ನಡುವೆ ಪ್ರೀತಿ ಉಂಟಾಗಿ ಗುರುಹಿರಿಯರ ಸಮ್ಮುಖದಲ್ಲಿ ಪ್ರೇಮಿಗಳ ದಿನವಾದ ಫೆಬ್ರುವರಿ 14 ರಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಐಶ್ವರ್ಯ ಸಾಲಿಮಠ ಅವರು, ಮಹಾಸತಿ ಧಾರಾವಾಹಿಯಲ್ಲಿ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಅದಾದ ನಂತರ ಸುಮಾರು ಐದು ವರ್ಷಗಳ ಕಾಲ ಒಳ್ಳೆಯ ಬಾಂಧವ್ಯ ನಮ್ಮಿಬ್ಬರಲ್ಲಿತ್ತು. ಸದ್ಯ ಈ ರಿಲೇಶನ್ ಶಿಪ್ ಒಳ್ಳೆಯ ಆಯಾಮ ಪಡೆದುಕೊಂಡಿದೆ. ಫೆಬ್ರುವರಿ 14 ರಂದು ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ದಿನ ಗುರುಹಿರಿಯರ ಒಪ್ಪಿಗೆ ಪಡೆದು, ಅವರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದೇವೆ. ಬರುವ ಮೇ ತಿಂಗಳಲ್ಲಿ ಮದುವೆ ಆಗಲಿದ್ದೇವೆ ಎಂದು ಐಶ್ವರ್ಯ ಹೇಳಿಕೊಂಡಿದ್ದಾರೆ.

%d bloggers like this: