ಪೃಥ್ವಿ ಅಂಬಾರ್ ಅವರ ದೂರದರ್ಶನಕ್ಕೆ ಜೊತೆಯಾದ ಆಯಾನಾ

ಸ್ಯಾಂಡಲ್ ವುಡ್ ನಲ್ಲಿ ಸನ್ಶೇನಲ್ ಕ್ರಿಯೇಟ್ ಮಾಡಿದ ಚಿತ್ರಗಳಲ್ಲಿ ದಿಯಾ ಸಿನಿಮಾ ಕೂಡ ಒಂದು. ಈ ದಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅನೇಕ ಪ್ರತಿಭೆಗಳು ಸಿಗುತ್ತಾರೆ. ಅಂತಹ ಪ್ರತಿಭೆಗಳಲ್ಲಿ ನಟ ಪೃಥ್ವಿ ಅಂಬಾರ್ ಕೂಡ ಒಬ್ಬರು. ತನ್ನ ಸಹಜ ಮತ್ತು ವಿಶಿಷ್ಟ ನಟನೆಯ ಮೂಲಕ ತನ್ನ ಚೊಚ್ಚಲ ಚಿತ್ರದಲ್ಲೇ ಪೃಥ್ವಿ ಅಂಬಾರ್ ಅವರು ಕನ್ನಡ ಸಿನಿ ರಸಿಕರ ಮನವನ್ನು ಗೆಲ್ಲುತ್ತಾರೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸೈಲೆಂಟಾಗಿ ಶೈನ್ ಆಗುತ್ತಿರೋ ನಟ ಪೃಥ್ವಿ ಅಂಬಾರ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತಾನೇ ಶಿವಣ್ಣ ಅಭಿನಯದ ಬೈರಾಗಿ ಚಿತ್ರ ರಿಲೀಸ್ ಆಗಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಈ ಬೈರಾಗಿ ಚಿತ್ರದಲ್ಲಿ ನಟ ಪೃಥ್ವಿ ಅಂಬಾರ್ ಅವರು ವಾತಾಪಿ ಪಾತ್ರದಲ್ಲಿ ಮಿಂಚಿದ್ದಾರೆ. ಅದೇ ರೀತಿ ಶುಗರ್ ಲೆಸ್ ಅನ್ನೋ ಚಿತ್ರ ಮಾಡಿದ್ದಾರೆ.

ಈ ಚಿತ್ರದ ಹಾಡು ಮತ್ತು ಟ್ರೇಲರ್ ಈಗಾಗಲೇ ಸಖತ್ ಸೌಂಡ್ ಮಾಡಿದೆ. ಇದರ ಜೊತೆಗೆ ಪೃಥ್ವಿ ಅಂಬಾರ್ ಅವರು ದೂರದರ್ಶನ ಅನ್ನೋ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ನಟಿ ಆಯನಾ ಕಾಣಿಸಿಕೊಳ್ಳುತ್ತಿದ್ದಾರೆ. ದೂರದರ್ಶನ ಟೈಟಲ್ ಲಾಂಚ್ ಆದಾಗಿನಿಂದ ಪೃಥ್ವಿ ಅಂಬಾರ್ ಗೆ ಜೋಡಿಯಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಆ ಪ್ರಶ್ನಗೆ ತೆರೆ ಬಿದ್ದಿದೆ. ಹೌದು ಇಲ್ಲಿ ಇರಲಾರೆ ಅಲ್ಲಿ ಹೋಗಲಾರೆ ಎಂಬ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಆಯಾನಾ ಅವರು ದೂರದರ್ಶನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ದೂರದರ್ಶನ ಚಿತ್ರದಲ್ಲಿ ನಟಿ ಆಯಾನಾ ಅವರು ಮೈತ್ರಿ ಎಂಬ ಆಟೋ ಚಾಲಕನ ಮಗಳ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಇನ್ನು ಈ ದೂರದರ್ಶನ ಸಿನಿಮಾ ತಂಡ ಈಗಾಗಲೇ ಶೇಕಡ ನಲವತ್ತರಷ್ಟು ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಈ ಚಿತ್ರಕ್ಕೆ ಸುಕೇಶ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ವಿ.ಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರಡಿಯಲ್ಲಿ ರಾಜೇಶ್ ಭಟ್ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ. ವಾಸುಕಿ ವೈಭವ್ ರಾಗ ಸಂಯೋಜನೆ ಮಾಡಿದ್ರೆ, ಅರುಣ್ ಸುರೇಶ್ ಅವರು ಕ್ಯಾಮರ ವರ್ಕ್ ಮಾಡಿದ್ದಾರೆ. ಸಂಭಾಷಣೆಯ ಜವಬ್ದಾರಿಯನ್ನ ನಂದೀಶ್ ಟಿಜೆ ಅವರು ತೆಗೆದುಕೊಂಡಿದ್ದು, ಪ್ರದೀಪ್ ಆರ್.ರಾವ್ ಅವರು ಸಂಕಲನ ಮಾಡಿದ್ದಾರೆ. ಇನ್ನು ದೂರದರ್ಶನ ಚಿತ್ರದ ಮುಖ್ಯಭೂಮಿಕೆಯಲ್ಲಿ ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ಹುಲಿ ಕಾರ್ತಿಕ್, ಸೂರ್ಯ ಕುಂದಾಪುರ ಮುಂತಾದವರು ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ದಿಯಾ ಚಿತ್ರದ ಯಶಸ್ಸಿನ ನಂತರ ನಟ ಪೃಥ್ವಿ ಅಂಬಾರ್ ಅವರು ಸೈಲೆಂಟಾಗಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

%d bloggers like this: