ಭಾರತಕ್ಕೆ ಪಬ್ಜಿ ಬರುವುದಕ್ಕೆ ಸಿದ್ಧವಾಗಿದೆ ಆದರೆ ಪಬ್ಜಿಗೆ ಭಾರತದಲ್ಲಿ ಕಾಡುತ್ತಿದೆ ಈ ಸಮಸ್ಯೆ

ಪಬ್ಜಿ ಗೇಮ್ ಅಂದರೆ ಭಾರತದಲ್ಲಷ್ಟೇ ಅಲ್ಲ ಜಗತ್ತಿನ ತುಂಬೆಲ್ಲ ಅತಿ ಹೆಚ್ಚು ಪ್ರಸಿದ್ಧಿ ಹೊಂದಿರುವ ಮೊಬೈಲ್ ಗೇಮ್, ಭಾರತದ ಪ್ರಧಾನಮಂತ್ರಿಯನ್ನು ಸಹ ಆಶ್ಚರ್ಯ ಗೊಳಿಸಿದೆ ಅಷ್ಟರಮಟ್ಟಿಗೆ ಈ ಗೇಮ್ ಭಾರತದಲ್ಲಿ ಅತ್ಯಂತ ಖ್ಯಾತಿ ಹೊಂದಿದೆ. ಭಾರತದಲ್ಲಿ ಪಬ್ಜಿ ಆಟ ವನ್ನು ಆಡುವವರ ಸಂಖ್ಯೆ ಸುಮಾರು 15 ರಿಂದ 20 ಕೋಟಿ ಇದನ್ನು ಕೇವಲ ಯುವಜನತೆ ಅಲ್ಲದೆ ವಯಸ್ಸಾದವರು ಕೂಡ ಆಡುತ್ತಾರೆ ಅಷ್ಟರಮಟ್ಟಿಗೆ ಪಬ್ಜಿ ಪ್ರಸಿದ್ಧ. ಭಾರತದಿಂದ ಪಬ್ಜಿ ಸಂಸ್ಥೆಗೆ ನೂರಾರು ಕೋಟಿ ಲಾಭವಾಗುತ್ತದೆ ಹಾಗೂ ಭಾರತದಲ್ಲಿ ಪಬ್ಜಿ ಗೇಮ್ ಅನ್ನು ಸುಮಾರು 18 ಕೋಟಿ ಜನ ಮಾಡಿದ್ದಾರೆ. ಆದರೆ ಎರಡು ತಿಂಗಳ ಹಿಂದೆ ಚೈನಾ ದೇಶದ ಗಡಿ ವಿವಾದದ ಸಂಬಂಧ ಭಾರತ ಸರಕಾರ ಪಬ್ಜಿ ಗೇಮ್ ಅನ್ನು ಭಾರತದಿಂದ ಬ್ಯಾನ್ ಮಾಡಿದೆ ಹಾಗೂ ಪಬ್ಜಿ ಜೊತೆ ಇನ್ನೂ ನೂರಾರು ಅಪ್ಲಿಕೇಶನ್ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಸಜ್ಜಾಗಿದೆ ಆದರೆ ಇದಕ್ಕೆ ಕೆಲವು ಅಡಚಣೆಗಳು ಉಂಟಾಗಿವೆ. ಭಾರತದಲ್ಲಿ ಪಬ್ಜಿ ಗೇಮ್ ಇಂಡಿಯನ್ ಅವತರಣಿಕೆಯನ್ನು ಬಿಡುಗಡೆ ಮಾಡಲು ಭಾರತದ ಸರ್ಕಾರದಿಂದ ಇನ್ನೂ ಅವಕಾಶ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ, ಹೇಳಿಕೊಂಡಿದೆ ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ ಮತ್ತೆ ದಿನವಿಡೀ ಟ್ವಿಟ್ಟರಲ್ಲಿ ಪಬ್ಜಿ ಗೇಮ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಲೇ ಇದ್ದಾರೆ.

ಪಬ್ಜಿಗೆ ಭಾರತಕ್ಕೆ ಬರಲು ಮೊದಲನೆ ಸರಕಾರದಿಂದ ಅವಕಾಶ ಕೊಡದೆ ಇರುವುದು ಒಂದಾದರೆ ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ಪಬ್ಜಿ ಬ್ಯಾನ್ ಆದ ನಂತರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮದೇ ಭಾರತದ ಮೊಬೈಲ್ ಗೇಮ್ ಬಿಡುಗಡೆ ಘೋಷಿಸಿದ್ದರು. ಫೌಜಿ ಎಂಬ ಹೆಸರಿನ ಗೇಮ್ ಅನ್ನು ಅಕ್ಷಯ್ ಕುಮಾರ್ ಬಿಡುಗಡೆ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರ ಹೊಸ ಗೇಮ್ ಪಬ್ಜಿ ಗೆ ಭರ್ಜರಿ ಸೆಡ್ಡು ಹೊಡೆಯಲು ತಯಾರಾಗಿದ್ದು ಈಗಾಗಲೇ ಪ್ಲೇ ಸ್ಟೋರಲ್ಲಿ ನೊಂದಣಿಗೆ ಅವಕಾಶವಿದೆ. ಅಭಿಮಾನಿಗಳ ಪ್ರಕಾರ ಅಕ್ಷಯ್ ಕುಮಾರ್ ಅವರ ಹೊಸ ಗೇಮ್ ಪಬ್ಜಿಗೆ ಟಕ್ಕರ್ ಕೊಡಲಿದೆ ಅಂತೆ, ಅದೇ ತರಹ ಕೆಲವು ಅಭಿಮಾನಿಗಳ ವಾದವೇನೆಂದರೆ ಪಬ್ಜಿ ಗೇಮ್ ಮುಂದೆ ಅಕ್ಷಯ್ ಕುಮಾರ್ ಅವರಿಗೆ ಅಷ್ಟೇನೂ ಸರಿಯಾಗಿ ಬರುವುದಿಲ್ಲ ಎಂದು ಹೇಳಿದ್ದಾರೆ. ಇನ್ನಷ್ಟೇ ಕಾದುನೋಡಬೇಕು ಅಕ್ಷಯ್ ಕುಮಾರ್ ಅವರ ಹೊಸ ಗೇಮ್ ಯಾವ ರೀತಿ ಇರುತ್ತದೆ ಎಂದು.

%d bloggers like this: