ಪಬ್ ಜಿ ಗೇಮಿಗೆ ಸೆಡ್ಡು ಹೊಡೆದಿದ್ದ ಭಾರತದ್ದೇ ಗೇಮ್ ಇಂದು ಬಿಡುಗಡೆ

ಪಬ್ ಜಿ ಎಂಬ ಒಂದು ವಿಡಿಯೋ ಗೇಮ್ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಅದರಲ್ಲೂ ಯುವ ದೇಶವಾದ ನಮ್ಮ ಭಾರತದಲ್ಲಿ ಕೋಟಿ ಕೋಟಿ ಯುವಕರು ಈ ಆಟದ ಘೀಳಿಗೆ ಬಿದ್ದಿದ್ದು ಅವರ ಪಾಲಕರಿಗೆ ತಲೆ ನೋವಾಗಿ ಪರಿಣಮಿಸಿದ್ದು ಬಹುತೇಕ ಎಲ್ಲರಿಗು ಗೊತ್ತೇ ಇದೆ, ಅವರು ಇವರೆನ್ನದೆ ಎಲ್ಲರೂ ಈ ಗೇಮ್ ನ ವ್ಯಾಮೋಹಕ್ಕೆ ಬಲಿಯಾಗಿದ್ದರು. ಆದರೆ ಇಂತಹ ಪಬ್ ಜಿ ಗೇಮ್ ಬಂದಿದ್ದು ಚೀನಾದಿಂದ. ಕಳೆದ ವರ್ಷ ಕೇಂದ್ರ ಸರಕಾರ ಚೀನಾ ದೇಶಕ್ಕೆ ಬುದ್ಧಿ ಕಲಿಸಲು ಆ ದೇಶದ ಅನೇಕ ಆಪ್ ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು.

ಅದರ ಜೊತೆಗೆಯೇ ಚೀನಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಪಾಲುಗಾರಿಕೆ ಹೊಂದಿದ್ದ ಎಲ್ಲರ ನೆಚ್ಚಿನ ಪಬ್ ಜಿ ಆಟ ಕೂಡ ಬ್ಯಾನ್ ಆಗಿತ್ತು. ಇದರಿಂದ ಅದರ ಗೀಳಿಗೆ ಬಿದ್ದಿದ್ದ ಅನೇಕ ಯುವಕರು ಬೇಸರಗೊಂಡಿದ್ದರು ಇನ್ನು ಕೆಲವು ಯುವಕರು ಮುಂದೆ ಜೀವನವೇ ಇಲ್ಲ ಎಂಬಂತೆ ಬೇಜಾರು ಮಾಡಿಕೊಂಡಿದ್ದರು. ಆದರೆ ಚೀನಾ ಆಪ್ ಗಳನ್ನ ಬ್ಯಾನ್ ಮಾಡಿದ ಬೇನಲ್ಲೆ ಕೇಂದ್ರ ಸರಕಾರ ಆ ಎಲ್ಲಾ ಆಯಪ್ ಗಳಿಗೆ ಪರ್ಯಾಯವಾಗಿ ದೇಶೀಯವಾಗಿ ತಯಾರಾದ ಆಪ್ ಗಳನ್ನ್ ಪರಿಚಯಿಸಿತು.

ಆದರೆ ಪಬ್ ಜಿ ಗೆ ಪರ್ಯಾಯವಾಗಿ ಯಾವುದೇ ಗೇಮ್ ಬರಲೇ ಇಲ್ಲ. ಆದರೆ ಇನ್ನೂ ಆ ಚಿಂತೆ ಬೇಡವೇ ಬೇಡ, ಹೌದು ಜನೆವರಿ 26 ರ ಗಣರಜ್ಯೋತ್ಸವದಂದು ಕೇಂದ್ರ ಸರಕಾರ ವೀರ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶ ಇಟ್ಟುಕೊಂಡು ಮತ್ತು ಯುವಕರನ್ನು ಮತ್ತೆ ಮನರಂಜಿಸಲು ಯುವಕರಿಗೆ ಇಷ್ಟವಾಗುವಂತೆ ಫೀಯರ್ಲೆಸ್ ಆಂಡ್ ಯುನೈಟೆಡ್ ಗಾರ್ಡ್ಸ್ ಎಂಬ ಗೇಮಿಂಗ್ ಅಯಪ್ ಅನ್ನು ಪರಿಚಯಿಸುತ್ತಿದೆ.

ಈ ಕುರಿತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಹಿಂದೆಯೇ ಮಾಹಿತಿ ನೀಡಿದ್ದರು ಮತ್ತು ದೇಶೀಯ ಪಬ್ ಜಿ ಬರಲಿದೆ ಕಾಯಿರಿ ಎಂದಿದ್ದರು. ವಿಜಯದಶಮಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಕಳೆದ ವರ್ಷ ಈ ಗೇಮ್ ನ ಟೀಸರ್ ಅನ್ನು ಪರಿಚಯಿಸಲಾಯಿತು. ಆದರೆ ಈಗ ಅದು ನಮ್ಮ ನಮ್ಮ ಮೋಬೈಲ್ ಗಳಿಗೆ ಲಗ್ಗೆ ಇಡಲು ಸಜ್ಜಾಗಿ ನಿಂತಿದೆ. ಈ ಆಟದ ಒಟ್ಟಾರೆ ಲಾಭದಲ್ಲಿ ಶೇಕಡ 20 ರಷ್ಟು ಹಣ ಭಾರತ ಕೆ ವೀರ್ ಹೆಸರಿನ ಟ್ರಸ್ಟ್ ಗೆ ಸೇರಲಿದೆ. ಒಟ್ಟಾರೆಯಾಗಿ ಯುವಕರು ಕಾತುರಕ್ಕೆ ಈಗ ಬ್ರೇಕ್ ಬಿದ್ದಿದೆ ಎಂದು ಹೇಳಬಹದು.

%d bloggers like this: