ಪುನೀತ್ ಅವರು ಮಾಡಬೇಕಾಗಿದ್ದ ಚಿತ್ರ ಈಗ ಇನ್ನೊಬ್ಬ ಕನ್ನಡ ನಟನ ಪಾಲು

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದ ಇಡೀ ಚಿತ್ರತಂಡ ಬಡವಾಗಿದೆ. ಪುನೀತ್ ರಾಜಕುಮಾರ್ ಅವರಿಗಾಗಿಯೇ ಹಲವಾರು ನಿರ್ದೇಶಕರು ಕಥೆಗಳನ್ನು ಬರೆದು ಪುನೀತ್ ರಾಜಕುಮಾರ್ ಅವರ ಡೇಟ್ಸ್ ಗೋಸ್ಕರ ಕಾದುಕುಳಿತಿದ್ದರು. ಇದೀಗ ಎಲ್ಲ ಕೆಲಸಗಳು ಅರ್ಧಕ್ಕೆ ನಿಂತು ಹೋಗಿವೆ. ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಡಬ್ಬಿಂಗ್ ಕೆಲಸಗಳು ಪೂರ್ಣಗೊಂಡಿರಲಿಲ್ಲ. ಇದನ್ನು ನಟ ಶಿವರಾಜ್ ಕುಮಾರ್ ಅವರು ಪೂರ್ಣಗೊಳಿಸುತ್ತಿದ್ದಾರೆ. ಅದೇ ರೀತಿ ಸ್ಯಾಂಡಲ್ವುಡ್ ನ ಹಿಟ್ ನಿರ್ದೇಶಕರ ಸಾಲಿನಲ್ಲಿರುವ ದಿನಕರ್ ತೂಗುದೀಪ್ ಅವರು ಸಹ ಪುನೀತ್ ರಾಜಕುಮಾರ್ ಅವರಿಗಾಗಿ ಕಥೆಯೊಂದನ್ನು ಬರೆದಿದ್ದರು. ಆದರೆ ಅವರು ಕಂಡ ಕನಸು ನನಸಾಗಲಿಲ್ಲ.

ದಿನಕರ್ ಮತ್ತು ಅಪ್ಪು ಅವರ ಕಾಂಬಿನೇಷನ್ ನಲ್ಲಿ ಸಿನಿಮಾ ನೋಡಬೇಕು ಎಂದು ಅವರ ಅಭಿಮಾನಿ ಬಳಗ ಕಾದುಕುಳಿತಿದ್ದರು. ಈಗ ಇವರೆಲ್ಲರ ಕನಸುಗಳು ನನಸಾಗದೆ ಹಾಗೆ ಕುಳಿತಿವೆ. ದಿನಕರ್ ಅವರಿಗೆ ಅಪ್ಪು ಅವರಿಗೆ ಆಕ್ಷನ್ ಕಟ್ ಹೇಳಬೇಕು ಎಂಬ ಆಸೆ ಇತ್ತು. ಆದರೆ ಅದು ನೆರವೇರಲಿಲ್ಲ ಎಂಬ ನಿರಾಸೆಯಿದೆ ಎಂದು ದಿನಕರ್ ಹೇಳಿಕೊಂಡಿದ್ದಾರೆ. ಜಯಣ್ಣ ಭೋಗೇಂದ್ರ ಕಂಬೈನ್ಸ್ ಅವರ 24 ನೇ ಸಿನಿಮಾದ ನಿರ್ಮಾಣದಲ್ಲಿ ಅಪ್ಪು ಮಾಡಬೇಕಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಪುನೀತ್ ಅವರಿಗೆ ಆಕ್ಷನ್ ಕಟ್ ಹೇಳಬೇಕು ಎಂದು ಕಥೆ ರಚಿಸಿದ್ದ ದಿನಕರ್ ಅವರು ಈಗ ಬೇರೆ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೌದು ಚಂದನವನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನರಾದ ನಂತರ ಅವರಿಗಾಗಿ ಬರೆದ ಎಷ್ಟೋ ಸ್ಕ್ರಿಪ್ಟ್ ಗಳು ಸಿನಿಮಾವಾಗದೆ ನಿಂತಿವೆ.

ಅನಿವಾರ್ಯವಾಗಿ ಕೆಲ ಸಿನಿಮಾಗಳು ಬೇರೆ ನಾಯಕರ ಪಾಲಾಗಿದೆ. ಈಗ ದಿನಕರ್ ತೂಗುದೀಪ್ ಅವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಪುನೀತ್ ಅವರ ಬದಲಾಗಿ ಕಿಸ್ ಖ್ಯಾತಿಯ ನಟ ವಿರಾಟ್ ಬಣ್ಣಹಚ್ಚುತ್ತಿದ್ದಾರೆ. ಇದು ವಿರಾಟ್ ಅವರ ಮೂರನೇ ಸಿನಿಮಾ. ಮೂರನೇ ಚಿತ್ರಕ್ಕೆ ಇಷ್ಟು ದೊಡ್ಡ ಪ್ರಾಜೆಕ್ಟ್ ಸಿಕ್ಕಿರುವುದಕ್ಕೆ ವಿರಾಟ್ ಸಂತಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಅವರು ಕಿಸ್ ಮೂವಿ ನಂತರ ಅದ್ದೂರಿ ಲವ್ವರ್ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ಈಗ ಮತ್ತೊಂದು ಪ್ರಾಜೆಕ್ಟ್ ಸಿಕ್ಕಿರುವುದಕ್ಕೆ ವಿರಾಟ್ ಖುಷಿಪಟ್ಟಿದ್ದಾರೆ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಚಂದನವನಕ್ಕೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ್ದಾರೆ.

ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡ ಇವರಿಗೆ ಪುನೀತ್ ರಾಜಕುಮಾರ್ ಅವರ ಬದಲಿಗೆ ನಟಿಸುವ ಅವಕಾಶ ಸಿಕ್ಕಿದ್ದು ಅದೃಷ್ಟವೇ ಸರಿ. ಇಂದು ವಿರಾಟ್ ಅವರ ಹುಟ್ಟುಹಬ್ಬವಾದ್ದರಿಂದ ಹೊಸ ಚಿತ್ರದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಆದರೆ ಸಿನಿಮಾದ ಟೈಟಲ್ ಏನು ಎಂಬುದನ್ನು ಇನ್ನೂ ಚಿತ್ರತಂಡ ರಿಲೀಸ್ ಮಾಡಿಲ್ಲ. ಸಿನಿಮಾ ಯಾವುದು ಎಂದು ಗೆಸ್ ಮಾಡಲು ಚಿತ್ರತಂಡ ಪ್ರೇಕ್ಷಕರಿಗೆ ಬಿಟ್ಟಿದ್ದಾರೆ. ಈ ಸಿನಿಮಾವನ್ನು ಜಯಣ್ಣ ಭೋಗೇಂದ್ರ ಕಂಬೈನ್ಸ್ ನಿರ್ಮಾಣ ಮಾಡುತ್ತಿದ್ದು, ಇದು ಅವರ 24ನೇ ಸಿನಿಮಾ ಆಗಿದೆ. ಚಿತ್ರದ ಪೋಸ್ಟರ್ ನಲ್ಲಿ ಕೂಡ 24 ಸಂಖ್ಯೆ ಬರೆದಿರುವುದನ್ನು ಕಾಣಬಹುದು.

ಪ್ರಸ್ತುತ ಚಿತ್ರದ ಪೋಸ್ಟರ್ ಬಿಟ್ಟು ಬೇರೆ ಯಾವ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ. ಹೊಸ ಚಿತ್ರದ ಅನ್ನೌನ್ಸ್ಮೆಂಟ್ ನಿಂದ ನಟ ವಿರಾಟ್ ಅವರು ಫುಲ್ ಖುಷ್ ಆಗಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿ ಖುಷಿ ಹಂಚಿಕೊಂಡಿದ್ದಾರೆ. ಜಯಣ್ಣ ಭೋಗೇಂದ್ರ ಕಂಬೈನ್ಸ್ ನಲ್ಲಿ ಸಿನಿಮಾ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಅದು ಇಂದು ನೆರವೇರುತ್ತಿದೆ. ದಿನಕರ್ ತೂಗುದೀಪ ಅವರ ನಿರ್ದೇಶನದಲ್ಲಿ ನಟಿಸುವ ಅದೃಷ್ಟ ಸಿಕ್ಕಿದೆ. ಈ ಅವಕಾಶ ಕೊಟ್ಟಿದ್ದಕ್ಕೆ ನಾನು ಅವರಿಗೆ ಚಿರಋಣಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

%d bloggers like this: