ಪುನೀತ್ ರಾಜ್‍ಕುಮಾರ್ ಅವರ ಸ್ವಂತ ಬ್ಯಾನರ್ ಇಂದ ಮತ್ತೊಂದು ಹೊಸ ಚಿತ್ರ ಶುರು

ಪುನೀತ್ ರಾಜಕುಮಾರ್ ಅವರ ಹೋಂ ಬ್ಯಾನರ್ ಆರ್ ಕೆ ಪ್ರೊಡಕ್ಷನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪಿ ಆರ್ ಕೆ ಪ್ರೊಡಕ್ಷನ್ ಇದು ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾಗಿತ್ತು. ಇದುವರೆಗೆ ಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ಕವಲುದಾರಿ, ಮಾಯಾಬಜಾರ್, ಫ್ರೆಂಚ್ ಬಿರಿಯಾನಿ, ಲಾ ಹೀಗೆ ಐದು ಸಿನಿಮಾಗಳು ಮೂಡಿಬಂದಿದೆ. ಇದೀಗ ಪುನೀತ್ ರಾಜ್ ಕುಮಾರ್ ಪ್ರೊಡಕ್ಷನ್ ನಿರ್ಮಾಣದ ಆರನೇ ಸಿನಿಮಾ ಆರಂಭವಾಗಲು ಸಜ್ಜಾಗಿದೆ. ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದ ನಂತರ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಇದನ್ನು ನೋಡಿಕೊಳ್ಳುತ್ತಿದ್ದಾರೆ.

ಪಿ ಆರ್ ಕೆ ನಿರ್ಮಾಣದ ಆರನೇ ಸಿನಿಮಾಕ್ಕೆ 02 ಎಂದು ಹೆಸರಿಡಲಾಗಿದೆ. 02 ಚಿತ್ರವನ್ನು ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್ ಅವರು ನಿರ್ದೇಶಿಸಲಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ರಾಮಾರ್ಜುನ ಮತ್ತು ಬುದ್ಧಿವಂತ-2 ಚಿತ್ರಗಳಲ್ಲಿ ಕೆಲಸಮಾಡಿರುವ ಡಿಒಪಿ ನವೀನ್ ಅವರು ಛಾಯಾಗ್ರಹಣವನ್ನು ನಿರ್ವಹಿಸಲಿದ್ದಾರೆ. ಚಿತ್ರತಂಡವು ಸಂಗೀತ ನಿರ್ದೇಶಕರನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ ಮತ್ತು ನಟ ಪ್ರವೀಣ್ ತೇಜ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದು, ನಟ ರೇಡಿಯೋ ಜಾಕಿ ಸಿರಿ ರವಿಕುಮಾರ್, ಯೂಟ್ಯೂಬರ್ ಪುನೀತ್ ಬಿ ಎ ಮತ್ತು ರಂಗಭೂಮಿ ಕಲಾವಿದ ಮೋಹನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

02 ಚಿತ್ರವನ್ನು ಅಕ್ಟೋಬರ್ 8ರಂದು ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ರಾಜಕುಮಾರ್ ಅವರು ಅಧೀಕೃತವಾಗಿ ಪ್ರಾರಂಭಿಸಿದ್ದರು. ನವೆಂಬರ್ ನಲ್ಲಿ ಚಿತ್ರೀಕರಣವನ್ನು ಆರಂಭಿಸಲು ಚಿತ್ರತಂಡವು ಕೂಡ ಸಜ್ಜಾಗಿತ್ತು. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಶೂಟಿಂಗ್ ಆರಂಭವಾಗಿರಲಿಲ್ಲ. ಇದೀಗ ಚಿತ್ರದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು 02 ಚಿತ್ರದ ಶೂಟಿಂಗ್ ನ್ನು ಜನವರಿ 22ರಿಂದ ಆರಂಭಿಸಲು ತೀರ್ಮಾನಿಸಿದ್ದಾರೆ. ಒಟ್ಟಾರೆಯಾಗಿ ಪುನೀತ್ ರಾಜಕುಮಾರ್ ಅವರ ಸಂಸ್ಥೆಯಡಿಯಲ್ಲಿ ಬರುವ ಎಲ್ಲ ಚಿತ್ರಗಳು ಒಳ್ಳೆಯ ಯಶಸ್ಸು ಗಳಿಸಲಿ ಎಂಬುದು ಅವರ ಕೋಟ್ಯಂತರ ಅಭಿಮಾನಿಗಳ ಆಶಯ.

%d bloggers like this: