ಪುನೀತ್ ರಾಜ್‍ಕುಮಾರ್ ಅವರ ಬಹುದಿದ ಆಸೆಯನ್ನು ಈಡೇರಿಸುತ್ತಿದ್ದಾರೆ ಕುಟುಂಬದವರು

ವರನಟ ಡಾಕ್ಟರ್ ರಾಜಕುಮಾರ್ ಅವರಿಗೆ, ನಟ ಸಾರ್ವಭೌಮ, ವರನಟ, ಅಣ್ಣಾವ್ರು, ಅಪ್ಪಾಜಿ, ಗಾಜನೂರು ಗಂಡು ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಡಾಕ್ಟರ್ ರಾಜಕುಮಾರ್ ಅವರಿಗೆ ಗಾಜನೂರು ಗಂಡು ಎಂಬ ಹೆಸರು ಬರಲು ಕಾರಣ, ವರ ನಟ ಡಾಕ್ಟರ್ ರಾಜಕುಮಾರ್ ಅವರು ಹುಟ್ಟಿ ಬೆಳೆದದ್ದು ಗಾಜನೂರು ಎಂಬ ಗ್ರಾಮದಲ್ಲಿ. ಇದೇ ಕಾರಣದಿಂದ ರಾಜಕುಮಾರ್ ಅವರಿಗೆ ಗಾಜನೂರು ಗಂಡು ಎಂಬ ಹೆಸರನ್ನು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದರು. ಡಾಕ್ಟರ್ ರಾಜಕುಮಾರ್ ಅವರಿಗೆ ಅಭಿಮಾನಿಗಳೇ ದೇವರು. ಅಭಿಮಾನಿಗಳಿಗೆ ಡಾಕ್ಟರ್ ರಾಜಕುಮಾರ್ ಅವರೇ ದೇವರು. ನಮ್ಮ ಕನ್ನಡದ ಸಿನಿಮಾ ಇಂಡಸ್ಟ್ರಿಯಲ್ಲಿ ನಟನೆ ಎಂಬ ವಿಷಯ ಬಂದರೆ ಡಾಕ್ಟರ್ ರಾಜಕುಮಾರ್ ಬಿಟ್ಟು ಬೇರೆ ಹೆಸರು ಬರುವುದಿಲ್ಲ.

ಯಾರು ಕೂಡ ದ್ವೇಷಿಸದಂತಹ ಉತ್ತಮ ವ್ಯಕ್ತಿತ್ವ ಉಳ್ಳ ಮನುಷ್ಯ ನಮ್ಮ ರಾಜ್ ಕುಮಾರ್. ಇಂದಿಗೂ ಸಾವಿರಾರು ಅಭಿಮಾನಿಗಳು ರಾಜಕುಮಾರ್ ಅವರ ಸಮಾಧಿಯ ಬಳಿ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅಕಾಲಿಕ ವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿದ ರಾಜಕುಮಾರ್ ಅವರ ಪುತ್ರ ಪುನೀತ್ ರಾಜಕುಮಾರ್ ಅವರ ಆಸೆ, ಡಾಕ್ಟರ್ ರಾಜಕುಮಾರ್ ಅವರು ಹುಟ್ಟಿ, ಬೆಳೆದ ಗಾಜನೂರು ಮನೆಯನ್ನು ದುರಸ್ತಿ ಮಾಡಬೇಕು ಎಂಬುದಾಗಿತ್ತು. ಗಾಜನೂರಿನಲ್ಲಿ ಇರುವ ಅವರ ಮನೆ ತುಂಬಾ ಹಳೆಯದಾದರಿಂದ ಅದನ್ನು ದುರಸ್ತಿ ಮಾಡಿಸುವುದು ಅನಿವಾರ್ಯವಾಗಿತ್ತು. ಆದರೆ ಪುನೀತ್ ಅವರ ಆಸೆಯಂತೆ ಗಾಜನೂರು ಮನೆ ದುರಸ್ತಿ ಮಾಡಿಸುವ ಮುನ್ನವೇ ನಮ್ಮೆಲ್ಲರನ್ನು ಪುನೀತ್ ರಾಜಕುಮಾರ್ ಬಿಟ್ಟು ಹೋದರು.

ಇದೀಗ ಪುನೀತ್ ರಾಜಕುಮಾರ್ ಅವರ ಆಸೆಯಂತೆ ಗಾಜನೂರು ಮನೆಯನ್ನು ರಾಜಕುಮಾರ್ ಫ್ಯಾಮಿಲಿ ದುರಸ್ತಿ ಮಾಡಿಸುತ್ತಿದೆ. ಸುಮಾರು 150 ವರ್ಷಗಳಷ್ಟು ಹಳೆಯದಾದ ಮನೆ ಬಹಳಷ್ಟು ಶಿಥಿಲಗೊಂಡಿತ್ತು. ಸದ್ಯಕ್ಕೆ ಮನೆಯನ್ನು ಅಪ್ಪು ಅವರ ಆಸೆಯಂತೆ ದುರಸ್ತಿ ಕಾರ್ಯ ಮಾಡಿಸಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಡಾಕ್ಟರ್ ರಾಜಕುಮಾರ್ ಅವರ ಸಹೋದರಿ ನಾಗಮ್ಮ ಅವರ ಪುತ್ರ ಗೋಪಾಲ್ ಅವರು, ಇದು ಕನ್ನಡಿಗರ ಆಸ್ತಿ. ಡಾಕ್ಟರ್ ರಾಜಕುಮಾರ್ ಹುಟ್ಟಿದ ಮನೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಮನೆ ಕೇವಲ ನಮ್ಮದಲ್ಲ. ಸಾರ್ವಜನಿಕರ ಆಸ್ತಿ. ಸತತ ಮಳೆಯಿಂದ ಮನೆ ಕುಸಿಯುವ ಹಂತಕ್ಕೆ ಬಂದಿತ್ತು.

ಹೀಗಾಗಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ದುರಸ್ತಿ ಕಾರ್ಯ ಮಾಡಲಾಗಿದೆ. ಮನೆ ದುರಸ್ತಿಯಾದ ನಂತರ ಪೂಜೆ ಮಾಡಿಸಿರಲಿಲ್ಲ. ನಮ್ಮ ಮಾವನವರ ಮಕ್ಕಳು ಬರಲಿ ಎಂದು ಕಾದಿದ್ದೆವು. ಇಂದು ರಾಘವೇಂದ್ರ ರಾಜಕುಮಾರ್ ಅವರು ಬಂದು ಪೂಜೆ ಮಾಡಿದ್ದಾರೆ ಎಂದು ತಿಳಿಸಿದರು. ಪೂಜೆ ಕಾರ್ಯದ ನಿಮಿತ್ತ ದೊಡ್ಡ ಗಾಜನೂರಿನ ನಿವಾಸಕ್ಕೆ ನಟ ರಾಘವೇಂದ್ರ ರಾಜಕುಮಾರ್ ಅವರು ತಮ್ಮ ಪತ್ನಿಯರೊಂದಿಗೆ ಭೇಟಿ ನೀಡಿದರು. ಈ ವೇಳೆ ತಮ್ಮ ಸೋದರತ್ತೆ ನಾಗಮ್ಮ ಅವರ ಯೋಗಕ್ಷೇಮ ವಿಚಾರಿಸಿ ಮಾತುಕತೆ ನಡೆಸಿದರು. ನಟ ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಸೋದರತ್ತೆ ನಾಗಮ್ಮ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

%d bloggers like this: