ಪುನೀತ್ ರಾಜಕುಮಾರ್ ಅವರ ಧ್ವನಿಯಲ್ಲೇ ಬಂತು ಜೇಮ್ಸ್ ಚಿತ್ರ

ಇದೇ ಏಪ್ರಿಲ್ 22ರಂದು ಅಪ್ಪು ಅಭಿಮಾನಿಗಳು ಸಂತಸದ ಸಂಭ್ರಮದ ಅಚ್ಚರಿಯ ಸಂಗತಿ ನೋಡಬಹುದು. ಜೊತೆಗೆ ತಮ್ಮ ಆರಾಧ್ಯ ದೈವ ಪುನೀತ್ ರಾಜ್ ಕುಮಾರ್ ಅವರ ಧ್ವನಿಯಲ್ಲಿ ಜೇಮ್ಸ್ ಚಿತ್ರವನ್ನ ನೋಡಬಹುದಾಗಿದೆ. ಹೌದು ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೇ ಐದಾರು ತಿಂಗಳು ಕಳೆಯುತ್ತಿವೆ. ಆದರೂ ಕೂಡ ಅವರ ನಂತರ ನೆನಪು ಮಾಸಿಲ್ಲ. ಮಾಸುವುದೂ ಇಲ್ಲ. ಅಪ್ಪು ಅವರು ನಿಧನರಾಗುವ ಮುನ್ನ ಒಂದಷ್ಟು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಅದರಲ್ಲಿ ಕೆಲವು ಚಿತ್ರಗಳ ಕೆಲಸ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು. ಲೂಸಿಯೂ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರ ಜೊತೆ ದ್ವಿತ್ವ, ಸಂತೋಷ ಆನಂದ್ ರಾಮ ಅವರ ಜೊತೆ ಮತ್ತೊಂದು ಸಿನಿಮಾದಲ್ಲಿ ನಟಿಸಬೇಕಿತ್ತು. ಅದರಂತೆ ಭರ್ಜರಿ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದಲ್ಲಿ ಸಂಪೂರ್ಣವಾಗಿ ನಟಿಸಿದರು ಕೂಡ ಡಬ್ಬಿಂಗ್ ಮಾಡಿರಲಿಲ್ಲ. ಇವರ ನಿಧನದ ನಂತರ ಜೇಮ್ಸ್ ಸಿನಿಮಾ ಇನ್ನೂ ಬಿಡುಗಡೆ ಆಗಲ್ಲ.

ಅಪ್ಪು ಅವರು ನಟಿಸಬೇಕಾಗಿದ್ದ ಕೆಲವು ದೃಶ್ಯ ಸನ್ನಿವೇಶಗಳು ಇನ್ನೂ ಇವೆ ಎಂದು ಹೇಳಲಾಗುತಿತ್ತು. ಆದರೆ ನಿರ್ದೇಶಕ ಚೇತನ್ ಕುಮಾರ್ ಮತ್ತು ಸಂಕಲನಕಾರರ ಶ್ರಮ ಮತ್ತು ಅವರ ಆಲೋಚನೆಯಿಂದಾಗಿ ಅಪ್ಪು ಅವರು ನಟಿಸಿದ ಕೊನೆಯ ಜೇಮ್ಸ್ ಚಿತ್ರವನ್ನ ಕಣ್ತುಂಬಿಕೊಳ್ಳುವಂತಾಯಿತು. ಇದು ಅಭಿಮಾನಿಗಳಿಗೆ ನೋವಿನ ಒಟ್ಟಿಗೆ ಸಂತಸ ಪಡುವಂತಹ ಸುದ್ದಿ ಆಗಿತ್ತು. ಇದರ ಜೊತೆಗೆ ಅಪ್ಪು ಅವರ ವಾಯ್ಸ್ ಗೆ ಪರ್ಯಾಯವಾಗಿ ಶಿವರಾಜ್ ಕುಮಾರ್ ಅವರ ಧ್ವನಿ ಸೇರಿಸಲಾಗಿತ್ತು. ಜೇಮ್ಸ್ ಸಿನಿಮಾದಲ್ಲಿ ಅಪ್ಪು ಅವರ ವಾಯ್ಸ್ ಇಲ್ಲ ಎಂಬುದನ್ನ ಹೊರತು ಪಡಿಸಿದರೆ ಸಿನಿಮಾ ಮಾತ್ರ ಉತ್ತಮವಾಗಿ ಮೂಡಿಬಂದಿತ್ತು. ಇದರಲ್ಲಿ ಅಪ್ಪು ಅವರ ಫೈಟ್ಸ್, ಡ್ಯಾನ್ಸ್ ನೋಡಿ ಅಭಿಮಾನಿಗಳು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅವರಿಲ್ಲ ಎಂಬುದನ್ನ ನೆನಪು ಮಾಡಿಕೊಂಡು ಭಾವುಕರಾಗಿದ್ದರು.

ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಂದೇ ಜೇಮ್ಸ್ ಸಿನಿಮಾವನ್ನ ರಿಲೀಸ್ ಮಾಡಬೇಕು ಎಂಬ ಉದ್ದೇಶದಿಂದ ಮಾರ್ಚ್ 17ರಂದು ಜೇಮ್ಸ್ ಚಿತ್ರ ಬಿಡುಗಡೆ ಮಾಡಲಾಯಿತು. ಅದೇ ರೀತಿಯಾಗಿ ಜೇಮ್ಸ್ ಸಿನಿಮಾ ಬಿಡುಗಡೆಯಾಗಿ ದಾಖಲೆಯ ಪ್ರದರ್ಶನವನ್ನು ಸಹ ಕಂಡಿತ್ತು. ಇದರ ನಡುವೆ ಅಪ್ಪು ಅವರ ಧ್ವನಿ ಇಲ್ಲ ಎಂಬ ನೋವು ಮಾತ್ರ ಎಲ್ಲರನ್ನೂ ಸದಾ ಕಾಡುತ್ತಿತ್ತು. ಇದೀಗ ಈ ನೋವಿನ ಸಂಗತಿಗೆ ಸಂತೋಷದ ವಿಚಾರ ವೊಂದನ್ನು ಜೇಮ್ಸ್ ಚಿತ್ರ ತಂಡ ತಿಳಿಸಿದೆ. ಅದೇನಪ್ಪಾ ಅಂದರೆ ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರ ವಾಯ್ಸ್ ಅನ್ನ ಮತ್ತೆ ಸೇರಿಸಲಾಗಿದೆಯಂತೆ. ಈ ಚಿತ್ರದಲ್ಲಿ ನಟಿಸಿರುವ ಮೆಕ್ ಶ್ರೀಕಾಂತ್ ಅವರು ತಮಗೆ ಗೊತ್ತಿದ್ದ ಸೌಂಡ್ ಇಂಜಿನಿಯರ್ ಅವರ ಬಗ್ಗೆ ನಿರ್ದೇಶಕ ಚೇತನ್ ಕುಮಾರ್ ಅವರಿಗೆ ತಿಳಿಸುತ್ತಾರಂತೆ.

ಅವರ ಸೂಚನೆ ಸಲಹೆ ಮೇರೆಗೆ ಚೇತನ್ ಅವರು ಹೈದರಾಬಾದ್ ಗೆ ತೆರಳಿ ಪರಿಣಿತ ಸೌಂಡ್ ಎಂಜಿನಿಯರ್ ಆಗಿರುವ ಶ್ರೀನಿವಾಸ್ ಎಂಬುವರನ್ನು ಭೇಟಿ ಮಾಡಿ ಅಪ್ಪು ಅವರು ನಟಿಸಿದ ರಣ ವಿಕ್ರಮ, ಯುವರತ್ನ ಜೊತೆಗೆ ಜೇಮ್ಸ್ ಚಿತ್ರದ ಶೂಟಿಂಗ್ ನಲ್ಲಿ ಅಪ್ಪು ಅವರ ಸ್ಪಾಟ್ ಡೈಲಾಗ್ ರೆಕಾರ್ಡಿಂಗ್ ಸೇರಿ ಹದಿನೈದು ಗಂಟೆಗಳ ಅಪ್ಪು ಅವರ ವಾಯ್ಸ್ ಅನ್ನ ನೀಡುತ್ತಾರಂತೆ. ಇದನ್ನೆಲ್ಲ ಬಳಸಿಕೊಂಡು ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರ ಧ್ವನಿಯನ್ನ ಸಿಂಕ್ ಮಾಡಲಾಗಿದೆ ಎಂದು ಚೇತನ್ ಅವರು ತಿಳಿಸಿದ್ದಾರೆ. ಸೌಂಡ್ ಎಂಜಿನಿಯರ್ ಶ್ರೀನಿವಾಸ್ ಅವರು ಅಪ್ಪು ಅವರ ಧ್ವನಿ ರೆಡಿ ಆಗಿದೆ ಎಂದು ನಿರ್ದೇಶಕ ಚೇತನ್ ಕುಮಾರ್ ಅವರಿಗೆ ವಾಯ್ಸ್ ಕಳಿಸಿದಾಗ ಚೇತನ್ ಅವರಿಗೆ ಅಪ್ಪು ಅವರ ವಾಯ್ಸ್ ಕೇಳಿ ದೇವರ ದನಿ ಕೇಳಿದಂತೆ ಭಾವುಕರಾದರಂತೆ. ಇದೀಗ ಈ ವಿಚಾರಕ್ಕೆ ಶಿವರಾಜ್ ಕುಮಾರ್ ಅವರು ಕೂಡ ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು ಎಂದು ತಿಳಿಸಿ ಚಿತ್ರ ತಂಡದ ಕೆಲಸಕ್ಕೆ ಮೆಚ್ಚುಗೆ ತಿಳಿಸಿದ್ದಾರೆ. ಒಟ್ಟಾರೆಯಾಗಿ ಇದೇ ಏಪ್ರಿಲ್ 22ರಿಂದ ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರ ದನಿಯನ್ನ ಕೇಳಬಹುದಾಗಿದೆ. ಇದು ಅಪ್ಪು ಅವರ ಅಭಿಮಾನಿಗಳಿಗೆ ನಿಜಕ್ಕೂ ಕೂಡ ಸಂಭ್ರಮದ ವಿಚಾರವಾಗಿದೆ.

%d bloggers like this: