ಪುನೀತ್ ರಾಜ್‍ಕುಮಾರ್ ಅವರ ನೆನಪಿನಲ್ಲಿ ಅದ್ಬುತ ಕೆಲಸ ಮಾಡಿದ ಪೋಲಿಸರು

ಬಲಗೈ ಮಾಡುವ ದಾನ ಎಡಗೈಗೆ ತಿಳಿಯಬಾರದು ಎನ್ನುವ ಹಾಗೆ, ಎಲೆಮರೆಕಾಯಿಯಂತಿದ್ದು ಸಹಾಯ ಮಾಡಿದ ಹಿರಿಮೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರದ್ದು. ಅನಾಥ ಮಕ್ಕಳಿಗೆ ತಂದೆಯಾಗಿ, ಎಷ್ಟೋ ವೃದ್ಧರಿಗೆ ಮಗನಾಗಿ ಪುನೀತ್ ಅವರು ಮಾಡಿದ ಸಹಾಯ ಹೇಳತೀರದ್ದು. ಅವರಿಂದ ಸಹಾಯ ಪಡೆದ ಎಷ್ಟೋ ಜನ ಇಂದು ಅವರದೇ ಸ್ವಂತ ಜೀವನವನ್ನು ಕಟ್ಟಿಕೊಂಡಿದ್ದಾರೆ. ಎಷ್ಟೋ ಜನ ಅವರ ಆದರ್ಶಗಳನ್ನೇ ಇಂದು ಪಾಲಿಸುತ್ತಿದ್ದಾರೆ. ಪವರ್ ಸ್ಟಾರ್ ಅವರ ನಿಧನದ ನಂತರ ಎಷ್ಟೋ ಜನ ನೇತ್ರದಾನ ಮಾಡಲು ಮುಂದಾಗಿದ್ದರು. ಪುನೀತ್ ಅವರು ಮಾಡಿರುವ ಎಷ್ಟೋ ಸತ್ಕಾರ್ಯಗಳು ಅವರ ನಿಧನದ ನಂತರ ಬೆಳಕಿಗೆ ಬಂದಿವೆ. ಒಂದು ಹೊತ್ತಿನ ಊಟವನ್ನು ದಾನಮಾಡಿದರೆ ಸಾಕು ಇಂದಿನ ಜನ ಅದನ್ನು ಫೋಟೋ ತೆಗೆದು ಸೋಶಿಯಲ್ ಮೀಡಿಯಾ ಗಳಲ್ಲಿ ಹಾಕಿ ತೋರಿಸಿಕೊಳ್ಳುತ್ತಾರೆ.

ಆದರೆ ಪುನೀತ್ ಅವರು ಎಷ್ಟೋ ವೃದ್ಧಾಶ್ರಮಗಳನ್ನು ನಡೆಸುತ್ತಿದ್ದರೂ, ಅನಾಥಾಶ್ರಮಗಳನ್ನು ಕೊಂಡುಕೊಂಡರೂ ಇದ್ಯಾವುದರ ಬಗ್ಗೆಯೂ ಹೇಳಿಕೊಳ್ಳದ ಒಂದು ಅಪರೂಪದ ಮಾಣಿಕ್ಯ ನಮ್ಮ ಪುನೀತ್ ರಾಜಕುಮಾರ್ ಎಂದರೆ ತಪ್ಪಾಗಲಾರದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನೇ ಮಾದರಿಯಾಗಿಟ್ಟುಕೊಂಡ ಯಾದಗಿರಿಯ ಶಹಾಪುರದ ಪೊಲೀಸ್ ಕಾನ್ಸ್ಟೇಬಲ್ ನಾಗರಾಜ್ ದಿಂಡವಾರ ಎಂಬುವವರು ಕರ್ತವ್ಯದ ಜೊತೆಗೆ ಜ್ಞಾನಪ್ರಸಾರದ ಕಾರ್ಯವನ್ನು ಮಾಡುತ್ತಿದ್ದಾರೆ. ಇನ್ನೊಂದು ವಿಶೇಷತೆಯೆಂದರೆ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಈ ಸೇವೆಯನ್ನು ಅವರು ನೀಡುತ್ತಿದ್ದಾರೆ. ಶಹಾಪುರದ ಬಸ್ ನಿಲ್ದಾಣದ ಬಳಿ ಬಾಡಿಗೆಗೆ ಅಂಗಡಿಯೊಂದನ್ನು ಕೊಂಡುಕೊಂಡು, ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಕಾಂಪಿಟೇಟಿವ್ ಎಕ್ಸಾಮ್ನ ಪ್ರಿಪರೇಷನ್ಗೆ ಬೇಕಾಗಿರುವ ಎಲ್ಲ ರೀತಿಯ ಅಧ್ಯಯನ ಸಾಮಗ್ರಿಗಳು.

ದಿನಪತ್ರಿಕೆಗಳು, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಟ್ಟು ಗ್ರಂಥಾಲಯದ ರೂಪವನ್ನು ನಾಗರಾಜ್ ನೀಡಿದ್ದಾರೆ. ವೈಫೈ ಸೌಲಭ್ಯವನ್ನು ಕೂಡ ಹೊಂದಿರುವ ಈ ಗ್ರಂಥಾಲಯದಲ್ಲಿ ಕುಡಿಯಲು ಉಚಿತವಾಗಿ ನೀರನ್ನು ಕೂಡ ಒದಗಿಸಲಾಗಿದೆ. ಪುನೀತ್ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿಕೊಂಡೆ ಬಂದಿದ್ದರು. ಅವರ ಸಾವಿನ ನಂತರ ಅವರ ಎಲ್ಲ ಕಾರ್ಯಗಳು ಗೊತ್ತಾದವು. ಇದರಿಂದ ಪ್ರೇರಣೆಗೊಂಡ ನಾನು ಗ್ರಂಥಾಲಯವನ್ನು ತೆಗೆದಿದ್ದೇನೆ ಇದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅವಶ್ಯಕ ಎಂದು ಪೊಲೀಸ್ ಕಾನ್ಸ್ಟೇಬಲ್ ನಾಗರಾಜ್ ದಿಂಡವಾರ ಹೇಳಿದರು. ಇದರ ಬಗ್ಗೆ ಕರ್ನಾಟಕದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ನಾಗರಾಜ ಅವರ ಕೆಲಸವನ್ನು ಹಾಡಿಹೊಗಳಿದ್ದಾರೆ. ನಾಗರಾಜ ಅವರು ತಮ್ಮ ಪೊಲೀಸ್ ಕರ್ತವ್ಯದ ಜೊತೆಗೆ ಜ್ಞಾನಪ್ರಸಾರದ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಪುನೀತ್ ಅವರ ಹೆಸರಿನಲ್ಲಿ ಶಿಕ್ಷಣ ಸೇವೆ ನಿರಂತರವಾಗಿರಲಿ ಎಂದು ಗ್ರಹ ಸಚಿವರು ಹೇಳಿದರು.

%d bloggers like this: