12 ವರ್ಷದಿಂದ ಕಾಯುತ್ತಿದ್ದ ದಂಪತಿ ಕೊನೆಗೂ ಪುನೀತ್ ಅವರನ್ನು ಕಣ್ತುಂಬಿಕೊಂಡರು

ಬೆಳ್ಳಿತೆರೆಯಲ್ಲಿ ಕಾಣುವ ನಟರೆಂದರೆ, ಅವರನ್ನು ನಮ್ಮ ಆತ್ಮೀಯರಂತೆ ಕಂಡು ಅವರನ್ನು ಗೌರವಪೂರ್ವಕವಾಗಿ ಕಾಣುತ್ತೇವೆ, ಆರಾಧಿಸುತ್ತೇವೆ. ಸಿನಿಮಾಗಳಲ್ಲಿ ಅವರ ಅಭಿನಯಕ್ಕೆ, ಅವರ ಡೈಲಾಗ್ ಗಳಿಗೆ ಶಿಳ್ಳೆ, ಚಪ್ಪಾಳೆ ಹಾಕಿ ಜೈಕಾರ ಹಾಕುತ್ತೇವೆ. ಅವರನ್ನು ನಾವು ಹತ್ತಿರದಿಂದ ನೋಡಿರುವುದಿಲ್ಲ, ಮಾತಾಡಿಸಿರುವುದಿಲ್ಲ ಆದರೂ ಅವರು ನಮ್ಮವರು ಎಂಬ ಪ್ರೀತಿಯ ಭಾವ. ಆದರೆ ದೂರದ ಪರದೆಯಲ್ಲಿ ಅವರು ಮಾಡುವ ಅಭಿನಯಕ್ಕೆ, ಭಾವಕ್ಕೆ ನಾವು ಮನಸೋತು ಅವರು ನಮ್ಮಮನೆಯವರಂತೆ ಕಾಣುತ್ತೇವೆ. ಇದು ಭಾವನಾತ್ಮಕವಾಗಿಯೂ ಸೆಳೆಯುವುದುಂಟು, ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಜೋಯಿಡಾದ ಬಾಳೇಗೌಡ ನಾಯ್ಕ ಮತ್ತು ಅವರ ಪತ್ನಿ ಕರಿಯವ್ವ ಎಂಬ ವೃದ್ದೆ ರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂಬ ಮಹದಾಸೆ ಇತ್ತಂತೆ ಆದರೆ ಅದು ಸಾಧ್ಯವಾಗಲಿಲ್ಲ. ಬಾಳೇಗೌಡ ನಾಯ್ಕ್ ಅವರು ರಾಜ್ ಅವರ ನೇತೃತ್ವ ಇದ್ದ ಗೋಕಾಕ್ ಚಳುವಳಿಯಲ್ಲೂ ಭಾಗಿಯಾಗಿದ್ದರಂತೆ.

ಇವರಿಗೆ ಮತ್ತು ಇವರ ಪತ್ನಿ ಕರಿಯವ್ವರಿಗೆ ಪುನೀತ್ ರಾಜ್ ಕುಮಾರ್ ಅಂದರೆ ರಾಜ್ ಅಷ್ಟೇ ತುಂಬಾ ಇಷ್ಟ ಅಂತೆ ಪುನೀತ್ ಅವರಲ್ಲಿ ರಾಜ್ ಕುಮಾರ್ ಅವರನ್ನು ನೋಡುತ್ತಿದ್ದಾರಂತೆ, ಅದಕ್ಕಾಗಿಯೇ ಪುನೀತ್ ಅವರನ್ನು ಭೇಟಿ ಮಾಡಲೇಬೇಕು ಎಂದು ಸುಮಾರು ಹನ್ನೆರಡು ವರ್ಷದಿಂದ ಪ್ರಯತ್ನಿಸುತ್ತಿದ್ದರಂತೆ. ಇದೀಗ ಪುನೀತ್ ರಾಜ್ ಕುಮಾರ್ ಅವರು ಕಾಳಿನದಿ ಕುರಿತು ನಿರ್ಮಾಣವಾಗುತ್ತಿರುವ ಸಾಕ್ಷ್ಯ ಚಿತ್ರವೊಂದಕ್ಕೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಶೂಟಿಂಗ್ ಗೆ ಬಂದಿದ್ದಾಗ ಅವರನ್ನು ಭೇಟಿ ಮಾಡಿ ಖುಷಿಯಾಗಿದ್ದಾರೆ. ಮುಪ್ಪಿನ ಈ ಕರಿಯವ್ವನಿಗೆ ಅಪ್ಪುವಿನ ಅಪ್ಪುಗೆ ಕಂಡು ಭಾವುಕಳಾದರಂತೆ ತದನಂತರ ಪುನೀತ್ ರಾಜ್ ಕುಮಾರ್ ಅವರು ಕರಿಯವ್ವ ಅವರ ಕುಶಲೋಪರಿ ವಿಚಾರಿಸಿ ಒಂದಷ್ಟು ಸಮಯ ಇವರೊಟ್ಟಿಗೆ ಕಳೆದು ಅವರ ಹನ್ನೆರಡು ವರ್ಷದ ಆಸೆಯನ್ನು ಪೂರೈಸಿದ್ದಾರೆ ನಂತರ ಅವರನ್ನು ಸಂತೋಷವಾಗಿ ಕಳಿಸಿಕೊಟ್ಟಿದ್ದಾರೆ.

%d bloggers like this: