ಪುನೀತ್ ರಾಜ್‍ಕುಮಾರ್ ಅವರಿಗಾಗಿ ತಮ್ಮ ಚಿತ್ರದ ಶೀರ್ಷಿಕೆಯನ್ನೇ ಬದಲಾಯಿಸಿಕೊಂಡ ಕನ್ನಡ ಚಿತ್ರ

ಕಿರುತೆರೆಯಿಂದ ಬಂದ ಸಾಕಷ್ಟು ನಟಿಯರು ತಮ್ಮ ಸ್ವಂತ ಪ್ರತಿಭೆಯಿಂದ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಸಣ್ಣ ಪರದೆಯ ಹಿಂದೆ ಅಭಿನಯಿಸುವ ಕಲಾವಿದರಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುವ ಕನಸು ಇದ್ದೇ ಇರುತ್ತದೆ. ಆದರೆ ಈ ಕನಸು ನನಸಾಗುವುದು ಕೆಲವು ಅದೃಷ್ಟವಂತರಿಗೆ ಮಾತ್ರ. ಕನ್ನಡತಿ ಧಾರಾವಾಹಿಯ ಮೂಲಕ ಎಲ್ಲರ ಮನೆಮಾತಾಗಿರುವ ಕಿರಣ್ ರಾಜ್ ಅವರು ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ ಭಾಷೆಯ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ನ್ನು ಹೊಂದಿರುವ ಕಿರಣ್ ರಾಜ್ ಅವರು ಈಗಾಗಲೇ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ.

ಕಿರಣ್ ರಾಜ್ ಎಂಬ ತಮ್ಮದೇ ಒಂದು ಬ್ರ್ಯಾಂಡನ್ನು ಕೂಡ ಇವರು ಹೊಂದಿದ್ದು, ಸದ್ಯಕ್ಕೆ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಕಿರಣ್ ರಾಜ್ ಅಭಿನಯದ ಹೊಸ ಚಿತ್ರವೊಂದರ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಹೀಗಿರುವಾಗ ಕಿರಣ್ ರಾಜ್ ಅವರ ಚಿತ್ರದ ಟೈಟಲ್ ನನ್ನು ಬದಲಿಸಲಾಗಿದೆ. ಹೌದು ಚಿತ್ರದ ಟೀಸರ್ ಬಿಡುಗಡೆಯಾಗುವಾಗ ಚಿತ್ರದ ಟೈಟಲ್ ಅನ್ನು ಬಹದ್ದೂರ್ ಗಂಡು ಎಂದು ಹೆಸರಿಸಲಾಗಿತ್ತು. ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಈ ಚಿತ್ರದ ಟೈಟಲ್ ಅನ್ನು ಅರ್ಪಿಸಿ ಭರ್ಜರಿ ಗಂಡು ಎಂದು ಬದಲಿಸಲಾಗಿದೆ. ಈ ಬಗ್ಗೆ ನಟ ಕಿರಣ್ ರಾಜ್ ಅವರು ಒಂದು ವಿಡಿಯೋ ತುಣುಕನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭರ್ಜರಿಗಂಡು ಚಿತ್ರದಲ್ಲಿ ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ಮತ್ತು ನಿಸರ್ಗ ಲಕ್ಷ್ಮಣ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಿರಣ್ ರಾಜ್ ಅವರದ್ದು ಡಬಲ್ ಶೇಡ್ ಪಾತ್ರವಾಗಿದ್ದು, ಸ್ಪಲಿಟ್ ಪರ್ಸನಾಲ್ಟಿ ಸಿಂಡ್ರೋಮ್ ಇರುವಂತಹ ಹುಡುಗಿಯ ಪಾತ್ರದಲ್ಲಿ ಯಷಾ ಶಿವಕುಮಾರ್ ಕಾಣಿಸಿಕೊಂಡಿದ್ದಾರೆ. ರಮೇಶ್ ಭಟ್, ವೀಣಾ ಸುಂದರ್, ಜಯಶ್ರೀ ರಾಜ್, ರಾಕೇಶ್ ರಾಜ್, ಗೋವಿಂದೇಗೌಡ, ಮಡೆನೂರು ಮನು ಹೀಗೆ ಅತಿದೊಡ್ಡ ತಾರಾಬಳಗವನ್ನು ಈ ಚಿತ್ರ ಹೊಂದಿದೆ. ಇನ್ನೂ ಪ್ರಸಿದ್ಧ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ, ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ, ವೆಂಕಿ ಯುಡಿವಿ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು ಕೆಲವು ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಈ ಚಿತ್ರದ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಇತ್ತೀಚೆಗೆ ನಂದಿ ಬೆಟ್ಟದ ಬಳಿ ನಡೆದಿದೆ. ನಾಯಕ ಕಿರಣ್ ರಾಜ್ ಅವರು ಸಾಹಸ ಸನ್ನಿವೇಶಕ್ಕಾಗಿ ಸುಮಾರು ಮೂರು ತಿಂಗಳಿನಿಂದ ದೊಣ್ಣೆ ವರಸೆ ಕಲಿತಿದ್ದಾರೆ. ಕಿರಣ್ ರಾಜ್ ಹಾಗೂ ಶಬರಿ ಮಂಜು ಅವರ ನಡುವೆ ಈ ಸಾಹಸ ದೃಶ್ಯ ನಡೆಯುತ್ತದೆ. ವಿನೋದ್ ಅವರು ಸಾಹಸ ನಿರ್ದೇಶನವನ್ನು ನೀಡುತ್ತಿದ್ದು, ದೊಣ್ಣೆ ವರಸೆ ಪ್ರಮುಖ ಆಕರ್ಷಣೆಯಾಗಿದೆ. ಇದಕ್ಕಾಗಿ ಕಿರಣ್ ರಾಜ್ ಅವರು ಸಾಕಷ್ಟು ತಯಾರಿ ನಡೆಸಿದ್ದಾರೆ ಎಂದು ನಿರ್ದೇಶಕ ಪ್ರಸಿದ್ಧ ತಿಳಿಸಿದ್ದಾರೆ.

%d bloggers like this: