ಪುನೀತ್ ರಾಜಕುಮಾರ್ ಅವರಿಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ ಧಾರವಾಡದ ಮಹಿಳೆ

ಕನ್ನಡ ಚಿತ್ರರಂಗದ ಧೃವತಾರೆ ಭಾಗ್ಯವಂತ ಅಪ್ಪು ಅಗಲಿ ತಿಂಗಳು ಕಳೆದಿವೆ. ಆದರೂ ಕೂಡ ಅಪ್ಪು ಅವರ ನಿಧನದ ಸುದ್ದಿ ನಾಡಿನಲ್ಲಿ ಕನಸಾಗಿಯೇ ಉಳಿದಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ‌ ಅಭಿಮಾನಿಗಳ ಮನದಲ್ಲಿ ಅಜರಾಮರವಾಗಿದ್ದಾರೆ‌. ಅಪ್ಪು ಅವರಿಗೆ ರಾಜ್ಯದಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ. ಅದು ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಜನಸಾಗರವೇ ಸಾಕ್ಷಿಯಾಗಿದೆ. ಅಂದು ಅವರ ಅಂತಿಮ ದರ್ಶನಕ್ಕೆ ಬರೋಬ್ಬರಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ ನೆಚ್ಚಿನ ನಟನ ಅಂತಿಮ ದರ್ಶನ ಪಡೆದಿದ್ದರು. ಇದು ಇತಿಹಾಸದ ಪುಟವನ್ನೇ ಸೇರಿತು.

ಇಂದಿಗೂ ಕೂಡ ಅಪ್ಪು ಅವರ ಸಮಾಧಿ ದರ್ಶನ ಮಾಡಲು ಅಕ್ಕ ಪಕ್ಕದ ರಾಜ್ಯದ ಜನರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನ ಕುಟುಂಬ ಸಮೇತರಾಗಿ ದಿನನಿತ್ಯ ಬರುತ್ತಿದ್ದಾರೆ‌. ಅಂತೆಯೇ ಅಪ್ಪು ಅವರ ಮಹಿಳಾ ಅಭಿಮಾನಿಯೊಬ್ಬರು ಕ್ರೀಡಾಪಟು ದಾಕ್ಷಾಯಿಣಿ ಎಂಬುವವರು ಓಡುವ ಮೂಲಕವೇ ಸರಿ ಸುಮಾರು 500 ಕಿಮೀ ದೂರದಿಂದ ಬಂದು ಅಪ್ಪು ಅವರ ಸಮಾಧಿ ದರ್ಶನ ಮಾಡಿದ್ದಾರೆ. ಇವರನ್ನ ಸ್ವತಃ ಯುವ ರಾಜ್ ಕುಮಾರ್ ಅವರೇ ಬರ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ನಟ ರಾಘವೇಂದ್ರ ರಾಜ್ ಕುಮಾರ್ ಅವರು ದಾಕ್ಷಾಯಿಣಿ ಅವರ ದೂರವಾಣಿ ಸಂಖ್ಯೆಯನ್ನ ತಾವೇ ಪಡೆದುಕೊಂಡು ಕರೆ ಮಾಡಿ ಅವರ ಆರೋಗ್ಯ ಕ್ಷೇಮವನ್ನ ವಿಚಾರಿಸಿಕೊಂಡಿದ್ದರು.

ಅಪ್ಪು ಅವರ ಅಪ್ಪಟ ಅಭಿಮಾನಿ ಆಗಿರುವ ದಾಕ್ಷಾಯಿಣಿ ಉಮೇಶ್ ಪಾಟೀಲ್ ಅವರು ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದವರಾಗಿದ್ದಾರೆ. ದಾಕ್ಷಾಯಿಣಿ ಅವರು ಓರ್ವ ರನ್ನಿಂಗ್ ಕ್ರೀಡಾಪಟುವಾಗಿದ್ದಾರೆ. ಇವರು ಪುನೀತ್ ರಾಜ್ ಕುಮಾರ್ ಅವರನ್ನ ಅವರ ಎರಡನೇ ಚಿತ್ರ ಅಭಿ ಸಿನಿಮಾ ನೋಡಿದಾಗಿನಿಂದ ಅಭಿಮಾನಿ ಆಗಿದ್ದಾರಂತೆ. ದಾಕ್ಷಾಯಿಣಿ ಅವರು ತಮ್ಮ ಊರಿನಿಂದ ರನ್ನಿಂಗ್ ಆರಂಭಿಸಿ ಶಿಗ್ಗಾಂವಿ ಹಾವೇರಿ ಜಿಲ್ಲೆಯ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ತಾವು ಬರುವ ದಾರಿಯ ಮಾರ್ಗಕ್ಕೂ ಅಲ್ಲಲ್ಲಿ ಒಂದಷ್ಟು ಊರುಗಳಲ್ಲಿ ಉಳಿದುಕೊಂಡು ರಕ್ತದಾನ ಮತ್ತು ನೇತ್ರದಾನ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರಂತೆ ದಾಕ್ಷಾಯಿಣಿ. ಒಟ್ಟರೆಯಾಗಿ ಅಪ್ಪು ಅವರ ಅಪ್ಪಟ ಅಭಿಮಾನಿ ಆಗಿರುವ ದಾಕ್ಷಾಯಿಣಿ ತನ್ನ ನೆಚ್ಚಿನ ನಟ ಅಪ್ಪು ಅವರ ಸಮಾಧಿ ನೋಡಲು ರನ್ನಿಂಗ್ ಮೂಲಕವೇ ಬಂದದ್ದು ವಿಶೇಷವಾಗಿ ಗಮನ ಸೆಳೆದಿದೆ.

%d bloggers like this: