ಪುನೀತ್ ರಾಜಕುಮಾರ್ ಅವರಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ತಿಂಗಳುಗಳೇ ಆಗಿವೆ. ಅಪ್ಪು ಅವರು ಅಕಾಲಿಕ ಮರಣದ ಬಳಿಕ ಕನ್ನಡ ಚಿತ್ರರಂಗ ಸಂಪೂರ್ಣ ಮೌನಕ್ಕೆ ಶರಣಾಗಿತ್ತು. ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಅಗಲಿದ್ದರು ಕೂಡ ಮಾನಸಿಕವಾಗಿ ಅವರು ಸದಾ ಜೀವಂತರಾಗಿರುತ್ತಾರೆ. ಅವರು ಮಾಡಿದಂತಹ ಸಾಮಾಜಿಕ ಕಾರ್ಯಗಳು, ಅವರು ಮಾಡಿದ ಸಿನಿಮಾಗಳ ಮೂಲಕ ಅಪ್ಪು ಶಾಶ್ವತವಾಗಿರುತ್ತಾರೆ. ಇಂದಿಗೂ ಕೂಡ ಪುನೀತ್ ಅವರ ಪುಣ್ಯಭೂಮಿಗೆ ಪ್ರತಿನಿತ್ಯ ಕುಟುಂಬ ಸಮೇತ ನೂರಾರು ಅಭಿಮಾನಿಗಳು ಬಂದು ದರ್ಶನ ಪಡೆದು ಸ್ಮರಿಸುತ್ತಿದ್ದಾರೆ.

ಅವರ ನಿಧನಕ್ಕೆ ಇಡೀ ಕನ್ನಡನಾಡು ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಕಣ್ಣೀರಾಕಿತ್ತು. ಕರುನಾಡಿನಲ್ಲಿರುವ ಅವರ ಅಸಂಖ್ಯಾತ ಅಭಿಮಾನಿಗಳು ರಕ್ತದಾನ, ನೇತ್ರದಾನ ಮತ್ತು ಅನ್ನ ಸಂತರ್ಪಣೆ ಮಾಡಿ ಅಪ್ಪು ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ತಂಡದ ಡೇವಿಡ್ ವಾರ್ನರ್ ಕೂಡ ಅಪ್ಪು ಅವರಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ನ ಪ್ರಮುಖ ಫ್ರಾಂಚೈಸಿಯಾದ ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಅವರನ್ನು ರಿಟೇನ್ ನಿಯಮದಡಿಯಲ್ಲಿ ಆಯ್ಕೆ ಮಾಡಿರಲಿಲ್ಲ. ಈ ಸಂಧರ್ಭದಲ್ಲಿ ವಾರ್ನರ್ ಸುದ್ದಿ ಆಗಿದ್ದರು. ಏಕೆಂದರೆ ಕಳೆದ 2021ರ ಐಪಿಎಲ್ ಸೀಸನ್ ನಲ್ಲಿ ಡೇವಿಡ್ ವಾರ್ನರ್ ಉತ್ತಮ ಪ್ರದರ್ಶನ ನೀಡಿರಲಿಲ್ಲ.

ಇದೀಗ ಮತ್ತೆ ಡೇವೀಡ್ ವಾರ್ನರ್ ಸುದ್ದಿ ಆಗಿರುವುದು ಅಪ್ಪು ಅವರಿಗೆ ವಿಶಿಷ್ಟವಾಗಿ ನಮನ ಸಲ್ಲಿಸುವ ಮೂಲಕ. ಹೌದು ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೇ ಹಾಡಿನಲ್ಲಿ ಪುನೀತ್ ಅವರು ಕಾಣಿಸಿಕೊಂಡ ಹಾಗೇ ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ತಮ್ಮ ಮುಖವನ್ನು ಮಾರ್ಫ್ ಅಪ್ಪು ಅವರಿಗೆ ಗೌರವ ಎಂದು ಕ್ಯಾಟ್ಶನ್ ಕೊಟ್ಟು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡೇವಿಡ್ ವಾರ್ನರ್ ಅವರು ಶೇರ್ ಮಾಡಿಕೊಂಡಿರುವ ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಡೇವೀಡ್ ವಾರ್ನರ್ ಪುನೀತ್ ಅವರಿಗೆ ನೀಡಿದ ಗೌರವ ಕಂಡು ಅಪ್ಪು ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

%d bloggers like this: