ಪುನೀತ್ ರಾಜ್‍ಕುಮಾರ್ ಅವರ ಜನ್ಮ‌ದಿನವೇ ಆಗಮಿಸಿದ ಬೈರಾಗಿ

ನಮ್ಮ ಸ್ಯಾಂಡಲ್ವುಡ್ ನ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ಶಿವರಾಜ್ ಕುಮಾರ್ ಅವರ ನಟನೆಯ 123ನೇ ಚಿತ್ರ ಸೆಟ್ಟೆರಲು ರೆಡಿ ಆಗಿದೆ. ಹೌದು ಶಿವಣ್ಣ ಅಭಿನಯದ 123ನೇ ಚಿತ್ರ ಬೈರಾಗಿಯ ಟೀಸರ್ ಇತ್ತೀಚಿಗೆ ರಿಲೀಸ್ ಆಗಿದೆ. ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಗೆ ಸಿದ್ಧವಾಗಿರುವಾಗಲೇ, ಶಿವಣ್ಣ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಟೀಸರ್ ನಿಂದಲೇ ಸಕ್ಕತ್ ಸೌಂಡು ಮಾಡುತ್ತಿರುವ ಬೈರಾಗಿ ಚಿತ್ರದಲ್ಲಿ ಮೇಲ್ನೋಟಕ್ಕೆ ಎರಡೂ ಶೇಡ್ ಗಳಲ್ಲಿ ಶಿವಣ್ಣ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಟೀಸರ್ ನೋಡುವವರಿಗೆ ಅನಿಸುವುದಿಲ್ಲ.

ಆದರೆ ಬೈರಾಗಿ ಚಿತ್ರದಲ್ಲಿ ಶಿವಣ್ಣ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಶೇಡ್ ನಲ್ಲಿ ಸೆಂಟಿಮೆಂಟಲ್ ಆಗಿ, ಎಲ್ಲವನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ಶಿವಣ್ಣ ಕಾಣಿಸಿದರೆ, ಮತ್ತೊಂದು ಶೇಡ್ ನಲ್ಲಿ ಹುಲಿಯಂತೆ ಘರ್ಜಿಸುವ ಶಿವಣ್ಣ ಕಾಣಿಸಿಕೊಳ್ಳುತ್ತಾರೆ. ತಮ್ಮ ಪ್ರತಿಯೊಂದು ಚಿತ್ರದಲ್ಲೂ ಅಭಿಮಾನಿಗಳಿಗೆ ವಿಭಿನ್ನವಾದ ಔತಣವನ್ನು ಉಣಬಡಿಸುವ ಶಿವರಾಜಕುಮಾರ್ ಬೈರಾಗಿಯಾಗಿ ತಮ್ಮ ಅಭಿಮಾನಿಗಳಿಗೆ ಖುಷಿ ಕೊಡುವುದಂತೂ ಖಂಡಿತ. ಶಿವರಾಜ್ ಕುಮಾರ್ ನಟಿಸುತ್ತಿರುವ ಈ ಚಿತ್ರದಲ್ಲಿ ಅನೇಕ ತಾರಾಬಳಗವಿದೆ. ಡಾಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಶಶಿಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಈ ಚಿತ್ರದ ಕುತೂಹಲವನ್ನು ಹೆಚ್ಚಿಸಿದ್ದಾರೆ.

ಬೈರಾಗಿ ಚಿತ್ರವನ್ನು ಎಸ್.ಡಿ ವಿಜಯ್ ಮಿಲ್ಟನ್ ಅವರು ನಿರ್ದೇಶನ ಮಾಡುತ್ತಿದ್ದು, ಕೃಷ್ಣ ಸಾರ್ಥಕ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತ ಚಿತ್ರಕ್ಕಿದ್ದು, ತನ್ನ ಟೀಸರ್ ಮೂಲಕವೇ ಅತಿ ಹೆಚ್ಚು ಕುತೂಹಲವನ್ನು ಬೈರಾಗಿ ಚಿತ್ರ ಹುಟ್ಟು ಹಾಕಿದೆ. ಈ ಚಿತ್ರದ ಟೀಸರ್ ನಲ್ಲಿ ರೋಷ, ಆವೇಶ, ಭಾವನೆಗಳಿಗೆ ಮುಖ್ಯ ಸ್ಥಾನ ನೀಡಲಾಗಿದೆ. ಶಿವಣ್ಣ ಅವರ ಚಿತ್ರವೆಂದರೆ ನೆನಪಾಗುವುದೇ ಆಕ್ಷನ್ ಸೀನ್ ಗಳು. ಒಟ್ಟಿನಲ್ಲಿ ಹೇಳಬೇಕೆಂದರೆ ಶಿವಣ್ಣ ಅವರನ್ನು ಮಾಸ್ ರೂಪದಲ್ಲಿ ಇಷ್ಟ ಪಡುವ ಅಭಿಮಾನಿಗಳಿಗೆ ಈ ಚಿತ್ರ ರಾಸಾದೌತಣ ಉಣಬಡಿಸುವುದಂತೂ ಖಂಡಿತ.

%d bloggers like this: