ಪುಷ್ಪ ಅಂದರೆ ‘ಹೂವು’ ಅಲ್ಲ ಎಂದು ಹೇಳಿ ಪ್ರೇಕ್ಷಕರ ಕಿವಿಗೇ ಹೂವು ಇಟ್ಟ ಪುಷ್ಪಾ ಚಿತ್ರತಂಡ, ಚಿತ್ರ ನೋಡಿದ ಅಭಿಮಾನಿಗಳಿಗೆ ಭಾರಿ ನಿರಾಶೆ

ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಪಾರ ನಿರೀಕ್ಷೆ ಹುಟ್ಟಿಸಿದ್ದ ಪುಷ್ಪ ಸಿನಿಮಾ ಇಂದು ಡಿಸೆಂಬರ್ 17ರಂದು ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ಆದರೆ ಒಂದು ದಿನದ ಮುನ್ನ ಅಂದರೆ ಡಿಸೆಂಬರ್ 16ರಂದು ಅಮೆರಿಕಾದಲ್ಲಿ ಪ್ರೀಮಿಯರ್ ಶೋ ಆಗಿದೆ. ಈ ಶೋ ನಲ್ಲಿ ಪುಷ್ಪ ಚಿತ್ರ ನೋಡಿದವರು ಒಂದೇ ಮಾತಿಗೆ ಹೇಳಿದ್ದು ಫಸ್ಟ್ ಆಫ್ ಓಕೆ ಓಕೆ. ಸೆಕೆಂಡ್ ಆಫ್ ನಾಟ್ ಓಕೆ. ಅಂದರೆ ಆವ್ರೇಜ್ ಸಿನಿಮಾಗೆ ನೀಡುವಂತ ರೆಸ್ಪಾನ್ಸ್. ಹೀಗಾಗಿ ಬರೋಬ್ಬರಿ 250 ಕೋಟಿ ಬಿಗ್ ಬಜೆಟ್ ನ ಪುಷ್ಪ ಸಿನಿಮಾ ಅಟ್ಟರ್ ಫ್ಲಾಪ್ ಎಂಬುದಾಗಿ ಚಿತ್ರ ನೋಡಿದ ಪ್ರೇಕ್ಷಕರು ತಿಳಿಸಿದ್ದಾರೆ.

ಆದರೆ ಇಲ್ಲಿ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಅಭಿನಯ ಲುಕ್, ಅವರು ಪಾತ್ರಕ್ಕೆ ಹಾಕಿರುವ ಶ್ರಮವನ್ನು ನಗಣ್ಯ ಮಾಡುವಂತಿಲ್ಲ‌. ಆದರೆ ಶೇಷಚಲ ಅರಣ್ಯದಲ್ಲಿ ನಡೆದಂತಹ ರಕ್ತ ಚಂದನ ಕಳ್ಳ ಸಾಗಣೆ ಕಥೆಯನ್ನೇ ಬಹುದೊಡ್ಡ ಕಥೆಯಾಗಿಸಿ ಗಟ್ಟಿತನವಿಲ್ಲದ ಕಥೆಯನ್ನ ಅದ್ದೂರಿಯಾಗಿ ಮೇಕಿಂಗ್ ಮಾಡುವ ಮೂಲಕ ಪುಷ್ಪ ಚಿತ್ರವನ್ನು ಸೋಲಿನ ದಾರಿಗೆ ಕರೆದೋಯ್ದಿದ್ದಾರೆ ನಿರ್ದೇಶಕ ಸುಕುಮಾರ್. ಈ ಪುಷ್ಪ ಸಿನಿಮಾಗೆ ಈ ಬಾರಿ ಇಷ್ಟು ದೊಡ್ಡ ಹೈಪ್ ಹುಟ್ಟರು ಕಾರಣ ನಿರ್ದೇಶಕ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಶನ್ ನಲ್ಲಿ ಆರ್ಯ ಮತ್ತು ಆರ್ಯ2. ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು‌. ಹೀಗಾಗಿ ಈ ಪುಷ್ಪ ಚಿತ್ರದಲ್ಲಿಯೂ ಕೂಡ ಈ ಜೋಡಿ ಮೋಡಿ ಮಾಡಿಲಿದೆ ಎಂದೇ ಹೇಳಲಾಗುತ್ತಿತ್ತು.

ಪುಷ್ಪ ಸಿನಿಮಾ ಟೀಸರ್, ಟ್ರೇಲರ್, ಮತ್ತು ಶ್ರೀ ವಲ್ಲಿ ಲಿರಿಕಲ್ ಸಾಂಗ್ ಜೊತೆಗೆ ಇತ್ತೀಚೆಗೆ ರಿಲೀಸ್ ಮಾಡಿದ ಸಮಂತಾ ಹೆಜ್ಜೆ ಹಾಕಿರುವ ಹ್ಞೂ ಅಂಟೆ ವಾ ಮಾವಾ ಹಾಡು ಸಖತ್ ಕ್ರೇಜ಼್ ಹುಟ್ಟು ಹಾಕಿತ್ತು. ಇದರಿಂದ ಚಿತ್ರತಂಡಕ್ಕೂ ಕೂಡ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಳ್ಳವಂತಾಯಿತು. ಈ ಪುಷ್ಪ ಸಿನಿಮಾದ ಅತಿಯಾದ ಬಿಲ್ಡಪ್ ಹೇಗಿತ್ತು ಅಂದರೆ ಪುಷ್ಪ ಚಿತ್ರ ಬರೋಬ್ಬರಿ 250 ಕೋಟಿ ಬಜೆಟ್ನ ಚಿತ್ರ, ಕಥೆ ಗಟ್ಟಿಯಾಗಿದ್ದು ಧೀರ್ಘವಾಗಿದ್ದರಿಂದ ನಾವು ಎಲ್ಲಿಯೂ ಕೂಡ ಕಥೆಗೆ ಕತ್ತರಿ ಹಾಕಬಾರದು ಎಂದು ಪಾರ್ಟ್2 ಕೂಡ ಮಾಡಿದ್ದೇವೆ. ಅದನ್ನ ಮುಂದಿನ ವರ್ಷ ರಿಲೀಸ್ ಮಾಡುತ್ತೇವೆ. ಪುಷ್ಪ ಚಿತ್ರದಲ್ಲಿ ಒಂದು ಡೈಲಾಗ್ ಇದೆ ‘ಪುಷ್ಪಾ ಅಂದರೆ ಫ್ಲವರ್ ಅಲ್ಲ ಫೈರ್’ ಎಂದು. ಈಗ ಚಿತ್ರ ನೋಡಿದ ಅಭಿಮಾನಿಗಳು ನಮ್ಮ ಕಿವಿಗೆ ಹೂವು ಇಟ್ಟರೆಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಸುನೀಲ್ ಕೂಡ ಖಾಸಗಿ ವಾಹಿನಿಯೊಂದರಲ್ಲಿ ಪುಷ್ಪ ಅಂದರೆ ಕಮಲದ ಹೂ ಹೇಗೆ ಅರಳುತ್ತದೋ ಹಾಗೆ ಅದೊಂದು ಬೆಂಕಿಯೂ ಕೂಡ ಹೌದು. ಅಲ್ಲು ಅರ್ಜುನ್ ಅವರ ಪರ್ಫಾಮೆನ್ಸ್ ನೋಡಿ. ಈ ಚಿತ್ರ ಖಂಡಿತಾ ಒಂದು ಇತಿಹಾಸ ಸೃಷ್ಟಿ ಮಾಡುತ್ತದೆ ಅಪಾರ ವಿಶ್ವಾಸದ ಮಾತುಗಳನ್ನಾಡಿದ್ದರು. ಅದರ ಜೊತೆಗೆ ಟಾಲಿವುಡ್ ನ ಒಬ್ಬ ಖ್ಯಾತ ನಿರ್ದೇಶಕ ಸೇರಿದಂತೆ ಕೆಲವು ಸ್ಟಾರ್ ಮಂದಿಗಳು ಕೂಡ ಪುಷ್ಪ ಸಿನಿಮಾ ಕನ್ನಡದ ಕೆಜಿಎಫ್ ಸಿನಿಮಾ ಅಂತಹ ಹತ್ತು ಚಿತ್ರಗಳಿಗೆ ಸಮ ಎಂಬಂತಹ ಜಂಭದ ಮಾತುಗಳನ್ನು ಕೂಡ ಆಡಿದ್ದರು. ಇದೀಗ ಕನ್ನಡ ಇರಲಿ ತೆಲುಗು ಟ್ರೋಲ್ ಪೇಜಸ್ ಗಳೇ ಪುಷ್ಪ ಚಿತ್ರಕ್ಕೆ ನೆಗೆಟಿವ್ ರಿಯಾಕ್ಷನ್ ಕೊಡುತ್ತಿದ್ದಾರೆ.

ಪುಷ್ಪ ಚಿತ್ರವನ್ನು ಕೆಜಿಎಫ್ ಚಿತ್ರಕ್ಕೆ ಹೋಲಿಸಬೇಡಿ ಎಂದೂ ಸಹ ಪೋಸ್ಟ್ ಮಾಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ಯಾವ ಮಟ್ಟೆಗೆ ಸದ್ದು ಮಾಡಿತು ಅಂದರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಯಾರೂ ಮಾಡದಂತಹ ದಾಖಲೆ ಮಾಡುತ್ತದೆ ಎಂಬಂತೆ ವರ್ತಿಸಿತ್ತು. ಆದರೆ ಇದೀಗ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಮೂಕರಾಗಿ ಚಿತ್ರಮಂದಿರಗಳಿಂದ ಹೊರ ಬರುತ್ತಿದ್ದಾರೆ. ಇನ್ನು ಕನ್ನಡದಲ್ಲಿ ಪುಷ್ಪ ಚಿತ್ರ ಕೇವಲ ಮೂರೇ ಮೂರು ಪ್ರದರ್ಶನ ಮಾತ್ರ ಕೊಟ್ಟು ಬರೋಬ್ಬರಿ 800ಕ್ಕೂ ಅಧಿಕ ಮೂಲ ತೆಲುಗು ‌ಭಾಷೆಯಲ್ಲಿಯೇ ರಿಲೀಸ್ ಮಾಡಿ ಕನ್ನಡಿಗರಿಗೆ ಕೆರಳಿಸಿತ್ತು. ಇದೀಗ ಪುಷ್ಪ ಸಿನಿಮಾ ಅಟ್ಟರ್ ಪ್ಲಾಪ್ ಆಗಿದ್ದು ಟಾಲಿವುಡ್ ನ ಕೆಲವು ಮಂದಿಗೆ ಭಾರಿ ಮುಖಭಂಖವಾಗಿರುವುದು ಮಾತ್ರ ಸತ್ಯ ಎನ್ನಬಹುದು.

%d bloggers like this: