ಪುಷ್ಪ ಬೆಂಗ್ಳೂರಲ್ಲಿ ತೆಲುಗು 600 ಶೋ, ಕನ್ನಡ ಅವತರಣಿಕೆಗೆ 3 ಶೋ, ಡಬ್ಬಿಂಗ್ ತಡೆಯುತ್ತಿವೆ ಕನ್ನಡ ಚಿತ್ರರಂಗದ ಕಾಣದ ಕೈಗಳು

ಕರ್ನಾಟಕದಲ್ಲಿ ಕನ್ನಡಕ್ಕೆ ಮನ್ನಣೆ ಇಲ್ಲ ಎಂಬುದನ್ನ ಸಾಬೀತು ಪಡಿಸಲು ಹೊರಟಿದ್ಯ ಪುಷ್ಪ ಸಿನಿಮಾ, ಹೌದು ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಪು಼ಷ್ಪ ಕೇವಲ ಹೆಸರಿಗೆ ಮಾತ್ರ ಪಂಚ ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದಂತೆ ಕಾಣುತ್ತಿದೆ. ಪಂಚ ಭಾಷೆಗಳಲ್ಲಿ ಎಂದು ಆಯಾ ಪ್ರಾಂತ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಯಲ್ಲಿ ಮಾತ್ರ ಪುಷ್ಪ ಚಿತ್ರವನ್ನು ರಿಲೀಸ್ ಮಾಡಬಹುದಾಗಿತ್ತು. ಆದರೆ ಪುಷ್ಪ ಸಿನಿಮಾ ಮೂಲ ಭಾಷೆಯಾದ ತೆಲುಗಿನಲ್ಲಿಯೇ ಅತಿ ಹೆಚ್ಚು ಶೋಗಳು ಪ್ರದರ್ಶನ ಆಗಲು ಬುಕ್ಕಿಂಗ್ ಆಗಿವೆ. ಇತ್ತೀಚೆಗೇ ತಾನೇ ಪುಷ್ಪ ಸಿನಿಮಾತಂಡ ಬೆಂಗಳೂರಿನಲ್ಲಿ ಪ್ರಮೋಶನ್ ಕಾರ್ಯ ಆರಂಭಿಸಿದೆ. ಚಿತ್ರದ ನಾಯಕ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್, ನಾಯಕಿ ರಶ್ಮಿಕಾ ಮಂದಣ್ಣ ಸೇರಿದಂತೆ ಚಿತ್ರತಂಡ ಭರ್ಜರಿ ಪ್ರಮೋಶನ್ ಮಾಡುತ್ತಿದೆ.

ಪುಷ್ಪ ಸಿನಿಮಾ ಕನ್ನಡ ಭಾಷೆಯಲ್ಲಿ ಡಬ್ ಆಗಿ ಬರಲಿದೆ. ಆದರೆ ಇದೀಗ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಆಗುತ್ತಿರುವುದು ಬಹುತೇಕ ಅಂದರೆ ಶೇಕಡ 99 ರಷ್ಟು ತೆಲುಗು ಅವತರಿಣಿಕೆ ಮಾತ್ರ. ಬೆಂಗಳೂರಿನಲ್ಲಿ ಒಟ್ಟು 600 ಪ್ರದರ್ಶನದಲ್ಲಿ ಕೇವಲ ಮೂರು ಶೋಗಳು ಮಾತ್ರ ಕನ್ನಡ ಅವತರಣಿಕೆಯಲ್ಲಿ ಪ್ರದರ್ಶನವಾಗಲಿದೆ. ಇಡೀ ರಾಜ್ಯದ್ಯಂತ ನೋಡುವುದಾದರೆ ಪುಷ್ಪ ಚಿತ್ರ ಬರೋಬ್ಬರಿ 800 ಪ್ರದರ್ಶನವನ್ನ ಕಾಣಲಿದೆ. ಆಗ ಒಂದೆರಡು ಪ್ರದರ್ಶನ ಮಾತ್ರ ಕನ್ನಡ ಅವತರಣಿಕೆಯಲ್ಲಿ ನಿರೀಕ್ಷೆ ಮಾಡಬಹುದಾಗಿರುತ್ತದೆ.

ಇದು ಕನ್ನಡ ಭಾಷೆಗೆ ಕನ್ನಡಗರಿಗೆ ಮಾಡುತ್ತಿರುವ ನಿರ್ಲಕ್ಷ್ಯ ಧೋರಣೆ ಎಂದು ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ತಾರತಮ್ಯ ಧೋರಣೆಗೆ ಪುಷ್ಪ ಚಿತ್ರದ ವಿತರಣೆ ಹಕ್ಕನ್ನು ಪಡೆದಿರುವ ವಿತರಕರ ತಪ್ಪೋ ಅಥವಾ ಮಲ್ಟಿ ಪ್ಲಕ್ಸ್ ಗಳ ಧೋರಣೆಯೋ ಒಟ್ಟಾರೆಯಾಗಿ ಕನ್ನಡ ಭಾಷೆಯಲ್ಲಿ ಡಬ್ ಆದ ಮೇಲೆ ಕನ್ನಡ ಅವತರಣಿಕೆಯಲ್ಲಿ ಪುಷ್ಪ ಚಿತ್ರ ಹೆಚ್ಚು ಪ್ರದರ್ಶನಗಳು ರಾಜ್ಯದಲ್ಲಿ ಇರಬೇಕಾಗಿತ್ತು. ಆದರೇ ಮುಂಗಡ ಟಿಕೆಟ್ ಮಾಡುವಾಗ ರಾಜ್ಯದ ಶೇಕಡಾವಾರು ಥಿಯೇಟರ್ ಗಳಲ್ಲಿ ತೆಲುಗು ಅವತರಣಿಕೆಯಲ್ಲಿ ಮಾತ್ರ ಟಿಕೆಟ್ ವಿತರಣೆ ಮಾಡಲಾಗುತ್ತಿದೆ.

ಒಟ್ಟರೆಯಾಗಿ ನಾಳಿದ್ದು ಡಿಸೆಂಬರ್ 17 ರಂದು ಪುಷ್ಪ ಚಿತ್ರ ಮೂಲ ಭಾಷೆ ತೆಲುಗಿನ ವತರಣಿಕೆಯಲ್ಲಿ ಬೆಳ್ಳಿತೆರೆಯಲ್ಲಿ ರಾರಾಜಿಸಲಿದ್ದು, ಕನ್ನಡ ಅವತರಣಿಕೆ ಕೇವಲ ಐದಾರು ಪರದೆಯಲ್ಲಿ ಮಾತ್ರ ಕಾಣಬಹುದಾಗಿದೆ. ಒಟ್ಟಾರೆಯಾಗಿ ಈ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಮನ್ನಣೆ ಸಿಗುವುದಿಲ್ಲ ಎಂಬುದಕ್ಕೆ ಇದೀಗ ಪುಷ್ಪ ಚಿತ್ರದಿಂದ ಮತ್ತೊಮ್ಮೆ ಸಾಬೀತು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಚಿತ್ರ ಬಿಡುಗಡೆ ಆಗಿ ಹುಟ್ಟಿಸಿದ ನಿರೀಕ್ಷೆಗಳನ್ನು ಕಾಪಾಡಿಕೊಳ್ಳಲಿದೆಯೇ ಅಥವಾ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.

%d bloggers like this: