ಪುಷ್ಪಾ ಚಿತ್ರ ಹಿಟ್ ಆಗುತ್ತಿದ್ದಂತೆ ಸಂಭಾವನೆಯನ್ನು ಭಾರಿ ಮೊತ್ತಕ್ಕೆ ಏರಿಸಿಕೊಂಡ ಪುಷ್ಪಾ ಖ್ಯಾತಿಯ ನಟ

ಟಾಲಿವುಡ್ ಈ ಸೂಪರ್ ಸ್ಟಾರ್ ನಟ ತನ್ನ ಸಂಭಾವನೆಯಲ್ಲಿ ಭಾರಿ ಏರಿಕೆ ಮಾಡಿಕೊಂಡಿದ್ದಾರೆ. ಈ ನಟನ ಸಂಭಾವನೆ ಕೇಳಿ ಇದೀಗ ಇಡೀ ಸೌತ್ ಸಿನಿಮಾರಂಗ ಅಚ್ಚರಿ ಪಟ್ಟಿದೆ. ಹಾಗಾದರೆ ಈ ಸ್ಟಾರ್ ನಟ ಯಾರು. ಈ ಸ್ಟಾರ್ ನಟ ಇದೀಗ ಏರಿಕೆ ಮಾಡಿಕೊಂಡಿರುವ ಸಂಭಾವನೆಯ ಮೊತ್ತ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಸಿನಿಮಾರಂಗದಲ್ಲಿ ಒಂದು ಅಚ್ಚರಿ ಅಂದರೆ ಇಲ್ಲಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿಯಾದರೆ ಎಂತಹ ಸಾಮಾನ್ಯ ನಟ ಕೂಡ ದಿನ ಬೆಳಗಾಗುವ ಹೊತ್ತಿಗೆ ಸೂಪರ್ ಸ್ಟಾರ್ ನಟರಾಗಿ ಬಿಡುತ್ತಾರೆ. ಇನ್ನೊಂದೆಡೆ ಸ್ಟಾರ್ ನಟನ ಸಿನಿಮಾ ಭರ್ಜರಿ ಸಕ್ಸಸ್ ಕಂಡರೆ ಆ ಸ್ಟಾರ್ ನಟ ತನ್ನ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಳ್ಳುತ್ತಾರೆ. ಅದೇ ರೀತಿಯಾಗಿ ಇದೀಗ ಟಾಲಿವುಡ್ ಸ್ಟೈಲೀಶ್ ಸ್ಟಾರ್ ಯೂಥ್ ಐಕಾನ್ ಖ್ಯಾತಿಯ ನಟ ಅಲ್ಲು ಅರ್ಜುನ್ ಅವರು ಕೂಡ ತಮ್ಮ ಸಂಭಾವನೆಯಲ್ಲಿ ಭಾರಿ ಏರಿಕೆ ಮಾಡಿಕೊಂಡಿದ್ದಾರೆ.

ಹೌದು ಕಳೆದ ವರ್ಷ ಡಿಸೆಂಬರ್ ನಲ್ಲಿ ರಿಲೀಸ್ ಆದ ಸುಕುಮಾರ್ ನಿರ್ದೇಶನದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಟ ದಿ ರೈಸ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ನಟ ಅಲ್ಲು ಅರ್ಜುನ್ ಅವರ ಪಾತ್ರದ ಬಗ್ಗೆ ಅವರು ಆ ಪಾತ್ರಕ್ಕಾಗಿ ಮಾಡಿದ ತಯಾರಿ ಮತ್ತು ಪಾತ್ರದ ಪರಕಾಯ ಪ್ರವೇಶ ನಿಜಕ್ಕೂ ಅಧ್ಭುತ ಅಂತ ಹೇಳ‌ಬಹುದು. ಡಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕಾಗಿ ನಟ ಅಲ್ಲು ಅರ್ಜುನ್ ಅವರು ಬರೋಬ್ಬರಿ ಐವತ್ತು ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗುತ್ತಿದೆ. ಇದೀಗ ಈ ಪುಷ್ಪ ದಿ ರೈಸ್ ಚಿತ್ರದ ಮುಂದುವರಿದ ಭಾಗವಾಗಿ ಮೂಡಿ ಬರುತ್ತಿರುವ ಪುಷ್ಪ ದಿ ರೂಲ್ ಸಿನಿಮಾಗಾಗಿ ಬರೋಬ್ಬರಿ ನೂರು ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಇದೀಗ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಹಾಗೇನಾದರೂ ನಟ ಅಲ್ಲು ಅರ್ಜುನ್ ಅವರು ಪುಷ್ಟ2 ಚಿತ್ರಕ್ಕೆ ನೂರು ಕೋಟಿ ಸಂಭಾವನೆ ಪಡೆದದ್ದೇ ಆದರೆ ಟಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಅಲ್ಲು ಅರ್ಜುನ್ ಅವರು ಹೊರ ಹೊಮ್ಮಲಿದ್ದಾರೆ. ರಕ್ತ ಚಂದನ ಕಳ್ಳ ಸಾಗಣೆ ಕುರಿತು ಕಥಾ ಹಂದರ ಹೊಂದಿರುವ ಪುಷ್ಪ1 ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದರು ಸಹ ಉತ್ತಮ ಗಳಿಕೆ ಕಂಡತ್ತು. ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮಾಲಿವುಡ್ ಸೂಪರ್ ಸ್ಟಾರ್ ನಟ ಫಹಾದ್ ಫಾಸಿಲ್ ಬರುವ ಮೂಲಕ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದ್ದರು. ಇದೀಗ ಪುಷ್ಟ ಪಾರ್ಟ್2 ನಲ್ಲಿ ಕಥೆ ಯಾವ ರೀತಿ ಸಾಗಲಿದ್ದು, ಯಾವ ರೀತಿಯಾಗಿ ಅಲ್ಲು ಅರ್ಜುನ್ ಮೋಡಿ ಮಾಡಲಿದ್ದಾರೆ ಎಂಬುದು ಇದೀಗ ಅಭಿಮಾನಿಗಳು ಕಾತುರದಿಂದ ಕಾಯುವಂತೆ ಮಾಡಿದೆ.

%d bloggers like this: