ಪುಷ್ಪಾ ಚಿತ್ರ ಕನ್ನಡದಲ್ಲಿ ಡಬ್ ಆಗಿದ್ದರೂ ಸಹ ನೂರಾರು ಚಿತ್ರಮಂದಿರಗಳಲ್ಲಿ ತೆಲುಗು ಅವತರಣಿಕೆ ಬಿಡುಗಡೆ ಮಾಡುತ್ತಿರುವ ಕನ್ನಡ ದ್ರೋಹಿ ವಿತರಕರು

ಸದ್ಯದ ಮಟ್ಟಿಗೆ ಸಿನಿ ದುನಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವುದು ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ. ಪುಷ್ಪ ಚಿತ್ರ ತೆಲುಗು ಸೇರಿದಂತೆ ಪಂಚ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿಯೂ ಕೂಡ ಈ ಪುಷ್ಪ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಆದರೆ ಇದು ಕೇವಲ ಹೆಸರಿಗಷ್ಟೇ. ಏಕೆಂದರೆ ಪುಷ್ಪ ಚಿತ್ರ ಮೂಲ ತೆಲುಗು ಅವತರಣಿಕೆಯಲ್ಲಿ ರಾಜ್ಯದ ಬಹುತೇಕ ಚಿತ್ರ ಮಂದಿರದಲ್ಲಿ ತೆರೆ ಕಾಣುತ್ತಿದೆ. ಪುಷ್ಪ ಸಿನಿಮಾ ಕನ್ನಡಕ್ಕೆಡಬ್ ಆಗಿದ್ದರು ಕೂಡ ಕನ್ನಡ ಅವತರಣಿಕೆಯ ಪುಷ್ಪ ಸಿನಿಮಾ ಪ್ರದರ್ಶನ ಆಗುತ್ತಿಲ್ಲ. ಇದಕ್ಕೆ ಕಾರಣ ಇದು ವಿತರಕರ ತಪ್ಪು ನಿರ್ಧಾರವೋ ಅಥವಾ ಸಿನಿಮಾ ಥಿಯೇಟರ್ ಮಾಲೀಕರ ನಿರ್ಧಾರವೊ ತಿಳಿದಿಲ್ಲ.

ಹೌದು ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಪುಷ್ಪ ಸಿನಿಮಾ ಈಗಾಗಲೇ ಲಿರಿಕಲ್ ಸಾಂಗ್ ಮತ್ತು ಟ್ರೇಲರ್ ನಿಂದ ಸಖತ್ ಸನ್ಶೇನಲ್ ಕ್ರಿಯೆಟ್ ಮಾಡಿದೆ. ಯೂಟ್ಯೂಬ್ ನಲ್ಲಿ ಪುಷ್ಪ ಸಿನಿಮಾದ ಹಾಡುಗಳು, ಟ್ರೆಲರ್ ದಾಖಲೆಯ ಮಟ್ಟದಲ್ಲಿ ವೀಕ್ಷಣೆ ಪಡೆದುಕೊಂಡಿದೆ. ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಅವರ ಲುಕ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಪಾತ್ರಧಾರಿಯಾಗಿ ಇದೇ ಮೊದಲ ಬಾರಿಗೆ ಡಿಗ್ಲಾಮರಸ್ ಲುಕ್ ನಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡು ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ. ಪುಷ್ಪ ಸಿನಿಮಾದ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಈ ಪುಷ್ಪ ಭಾಗ1 ಇದೇ ಡಿಸೆಂಬರ್ ತಿಂಗಳ 17ರಂದು ತೆಲುಗು ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆ ಸೇರೀದಂತೆ ಪಂಚ ಭಾಷೆಗಳಲ್ಲಿ ಪುಷ್ಪ ಸಿನಿಮಾ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ. ಈ ಚಿತ್ರ ನೋಡಲು ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇದೀಗ ಕರ್ನಾಟಕದಲ್ಲಿ ಕನ್ನಡ ಸಿನಿಮಾ ವಿತರಕರೇ ಕನ್ನಡ ಭಾಷೆಗೆ ದ್ರೋಹ ಎಸಗುತ್ತಿದ್ದಾರೆ ಎಂಬಂತೆ ಕಾಣುತ್ತಿದೆ. ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಡ ಎಂದು ವಿರೋಧ ಮಾಡುತ್ತಿದ್ದಾಗ, ಡಬ್ಬಿಂಗ್ ಬೇಕು ಕನ್ನಡ ಭಾಷೆ ಉಳಿಬೇಕು, ಬೆಳಿಬೇಕು. ನಮ್ಮ ಪರಭಾಷೆಯ ಸಿನಿಮಾಗಳನ್ನ ನಮ್ಮ ಕನ್ನಡಿಗರು ನಮ್ಮ ಭಾಷೆಯಲ್ಲಿ ನೋಡಿ ಖುಷಿ ಪಡಬೇಕು ಎಂದು ಡಬ್ಬಿಂಗ್ ಪರವಾದಿಗಳು ಡಬ್ಬಿಂಗ್ ಅನ್ನು ಸಮರ್ಥನೆ ಮಾಡಿಕೊಂಡಿದ್ದರು‌.

ಈಗ ಕನ್ನಡಕ್ಕೆ ಡಬ್ಬಿಂಗ್ ಬಂದಿದೆ. ಆದರೆ ಕನ್ನಡಕ್ಕೆ ಡಬ್ಬಿಂಗ್ ಆಗಿರುವ ಪುಷ್ಪ ಸಿನಿಮಾವನ್ನು ಪ್ರದರ್ಶನ ಮಾಡಲು ಎಷ್ಟು ಚಿತ್ರ ಮಂದಿರಗಳು ಸಿದ್ದವಾಗಿವೆ. ಎಷ್ಟು ಮಂದಿ ಸಿನಿಮಾ ವಿತರಕರು ಪುಷ್ಪ ಚಿತ್ರದ ಕನ್ನಡ ಅವತರಿಣಿಕೆಯ ವಿತರಣಾ ಹಕ್ಕನ್ನು ಪಡೆದಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಪ್ರಶ್ನೆ ಉಧ್ಭವವಾಗಲು ಇಂದು ಪುಷ್ಪ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಮಾಡಲು ಆನ್ಲೈನ್ ನಲ್ಲಿ ನೋಡಿದಾಗ ಬಹುತೇಕ ಚಿತ್ರ ಮಂದಿರಗಳಲ್ಲಿ ತೆಲುಗು ವರ್ಶನ್ ನಲ್ಲಿ ಮಾತ್ರ ಪುಷ್ಪ ಸಿನಿಮಾ ಪ್ರದರ್ಶನವಾಗುತ್ತಿದೆ. ರಾಜ್ಯದ ಅದರಲ್ಲಿಯೂ ರಾಜಧಾನಿ ಬೆಂಗಳೂರಿನ ಬಹುತೇಕ ಥಿಯೇಟರ್ ಗಳಲ್ಲಿ ಕನ್ನಡ ಅವತರಿಣಿಕೆಯ ಪುಷ್ಪ ಸಿನಿಮಾ ಪ್ರದರ್ಶನವಾಗುತ್ತಿಲ್ಲ ಎಂಬುದನ್ನ ಕಾಣಬಹದಾಗಿದೆ.

%d bloggers like this: