ನೀರಸ ಪ್ರತಿಕ್ರಿಯೆ ಪಡೆದುಕೊಂಡ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ! ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಪುಷ್ಟ ಚಿತ್ರ ಅಮೆರಿಕಾದಲ್ಲಿ ಪ್ರೀಮಿಯರ್ ಶೋ ಪ್ರದರ್ಶನ ಆಗಿದೆ. ಚಿತ್ರ ನೋಡಿದವರು ಕೊಟ್ಟ ರಿಯಾಕ್ಷನ್ಗೆ ಪುಷ್ಪ ಸಿನಿಮಾ ತಂಡ ಪೆಚ್ಚಾಗಿದೆ. ಹೌದು ಡಿಸೆಂಬರ್17 ಅಂದರೆ ಇಂದು ಭಾರತದಾದ್ಯಂತ ಪುಷ್ಪ ಸಿನಿಮಾ ರಿಲೀಸ್ ಆಗುತ್ತಿದೆ. ಇದಕ್ಕೂ ಮುನ್ನ ನಿನ್ನೆ 16ರಂದು ಗುರುವಾರ ಅಮೆರಿಕಾದಲ್ಲಿ ಪುಷ್ಪ ಸಿನಿಮಾ ಪ್ರೀಮಿಯರ್ ಶೋ ಪ್ರದರ್ಶನವಾಗಿದೆ. ಟ್ರೇಲರ್, ಸಾಂಗ್ ಮತ್ತು ಪೋಸ್ಟರ್ ಗಳಿಂದ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಪುಷ್ಪ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ನಕರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಪುಷ್ಪ ಸಿನಿಮಾದಲ್ಲಿ ಕೇವಲ ನಾಯಕ ನಟ ಅಲ್ಲು ಅರ್ಜುನ್ ಅವರೊಬ್ಬರನ್ನ ಮಾತ್ರ ಹೈಲೇಟ್ ಮಾಡಲಾಗಿದೆಯಂತೆ. ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಸ್ಟೈಲ್ ನಟನೆಗೆ ಅವರ ಅಭಿಮಾನಿಗಳು ಫಿದಾ ಆದರು ಕೂಡ ಚಿತ್ರದಲ್ಲಿ ಕಥೆಯ ಆಯಾಸವಾಗಿ ಸಾಗುತ್ತದೆಯಂತೆ. ಪುಷ್ಪ ಸಿನಿಮಾದ ಮೊದಲರ್ಧ ಭಾಗ ಸಖತ್ ಅನಿಸಿದರು ಕೂಡ ಮಧ್ಯಂತರದಲ್ಲಿ ಸಿನಿಮಾ ಕಥೆಯ ನಿರೂಪಣೆಯಲ್ಲಿ ಎಡವುತ್ತದೆ. ರಿಲೀಸ್ ಗೂ ಮುನ್ನ ಲಿರಿಕಲ್ ಸಾಂಗ್ ಮೂಲಕವೇ ಭಾರಿ ಮೆಚ್ಚುಗೆ ಗಳಿಸಿದ ದೇವಿ ಶ್ರೀ ಪ್ರಸಾದ್ ಅವರ ಮ್ಯೂಸಿಕ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಲ್ಲಿ ನೆಗೆಟೀವ್ ರೆಸ್ಪಾನ್ಸ್ ಕೇಳಿ ಬಂದಿದೆ. ಜೊತೆಗೆ ಪುಷ್ಪ ಭಾಗ1 ಸಿನಿಮಾದ ಕ್ಲೈಮ್ಯಾಕ್ಸ್ ಕೂಡ ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿಲ್ಲವಂತೆ.



ಒಟ್ಟಾರೆಯಾಗಿ ಪುಷ್ಪ ಸಿನಿಮಾ ನೋಡಿದ ಪ್ರೇಕ್ಷಕರು ಹತ್ತು ಅಂಕಕಗಳಿಗೆ ಕೇವಲ ಐದು ಅಂಕಕಗಳನ್ನು ಮಾತ್ರ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ್, ಸುನೀಲ್ ಪಾತ್ರಗಳು ಗಮನ ಸೆಳೆದಿದ್ದವು ಆದರೆ ಅಲ್ಲು ಅರ್ಜುನ್ ನಟನೆ ಮಾತ್ರ ಪುಷ್ಪ ಸಿನಿಮಾದಲ್ಲಿ ಹೈಪ್ ಆಗಿದ್ದು ಉಳಿದ ಕಲಾವಿದರ ನಟನೆಯ ಬಗ್ಗೆಯೂ ಕೂಡ ಯಾವುದೇ ರೀತಿಯ ರೆಸ್ಪಾನ್ಸ್ ಪಾಸಿಟೀವ್ ಆಗಿ ಕೇಳಿ ಬಂದಿಲ್ಲ. ಇನ್ನು ಒಟ್ಟಾರೆಯಾಗಿ ಪುಷ್ಪ ಸಿನಿಮಾ ನೋಡಿದವರು ಒನ್ ಮ್ಯಾನ್ ಶೋ ಆಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದು ನಿರ್ದೇಶಕ ಸುಕುಮಾರ್ ಅವರ ನಿರ್ದೇಶನ ಇಲ್ಲಿ ಸೋತಿದೆ ಎಂದು ಹೇಳುತ್ತಿದ್ದಾರೆ.