ಸದ್ಯಕ್ಕೆ ರಿಲೀಸ್ ಆಗಿ ದೇಶಾದ್ಯಂತ ಸದ್ದು ಮಾಡುತ್ತಿರುವ ಪುಷ್ಪ ಚಿತ್ರಕ್ಕೆ ಮೊದಲು ನಾಯಕರಾಗಿ ಆಯ್ಕೆ ಆಗಿದ್ದು ಅಲ್ಲು ಅರ್ಜುನ್ ಅವರಲ್ಲ! ಬರೋಬ್ಬರಿ 250 ಕೋಟಿ ಬಜೆಟ್ ನಲ್ಲಿ ತಯಾರಾಗಿರುವ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಮ ಅಭಿನಯದ ಪುಷ್ಪ ಚಿತ್ರ ಇದೀಗ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೀಗಿದ್ದರೂ ಕೂಡ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅಭಿನಯಕ್ಕೆ ಫುಲ್ ಮಾರ್ಕ್ ಸಿಕ್ಕಿದ್ದು, ಅಲ್ಲು ಅರ್ಜುನ್ ಅವರ ಅಭಿಮಾನಿಗಳಿಗೆ ಪುಷ್ಪ ಸಿನಿಮಾ ಹಬ್ಬದೂಟವಾದಂತಿದೆ. ಇದೀಗ ಪುಷ್ಪ ಸಿನಿಮಾದ ಹಿಂದೆ ನಡೆದಿರುವ ಹೊಸ ಸುದ್ದಿಯೊಂದು ಟಾಲಿವುಡ್ ನಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ಅದೇನಪ್ಪಾ ಅಂದರೆ ಈ ರಕ್ತಚಂದನ ಕಳ್ಳ ಸಾಗಣೆ ಮಾಡುತ್ತಿರುವ ಕಥೆಯನ್ನ ನಿರ್ದೇಶಕ ಸುಕುಮಾರ್ ಅವರು ಸಿನಿಮಾ ಮಾಡಲು ಹೊರಟಾಗ ಪುಷ್ಪ ರಾಜ್ ಪಾತ್ರಕ್ಕೆ ಪ್ರಿನ್ಸ್ ಮಹೇಶ್ ಬಾಬು ಅವರನ್ನೇ ತಲೆಯಲ್ಲಿಟ್ಟುಕೊಂಡು ಈ ಪುಷ್ಪ ರಾಜ್ ಪಾತ್ರವನ್ನು ಕಟ್ಟಿಕೊಂಡಿದ್ದರಂತೆ. ಅದರಂತೆ ನಿರ್ದೇಶಕ ಸುಕುಮಾರ್ ಮೈತ್ರಿ ಮೂವಿ ಮೇಕರ್ಸ್ ಅವರ ಅವರೊಟ್ಟಿಗೆ ಮಾತನಾಡಿ ನಟ ಮಹೇಶ್ ಬಾಬು ಅವರಿಗೆ ಈ ಪುಷ್ಪ ಚಿತ್ರದ ಕಥೆಯನ್ನು ನಟ ಮಸೇಶ್ ಬಾಬು ಅವರಿಗೆ ಹೇಳಿದರಂತೆ. ಕಥೆ ಕೇಳಿ ಒಪ್ಪಿಕೊಂಡಿದ್ದ ಮಹೇಶ್ ಬಾಬು ಅವರು ತದ ನಂತರ ಪುಷ್ಪ ರಾಜ್ ಪಾತ್ರದ ಡಿ ಗ್ಲಾಮರ್ ಲುಕ್ ಬಗ್ಗೆ ಬದಲಾವಣೆ ಮಾಡಲು ಕೇಳಿದರಂತೆ.



ಇದರಿಂದ ನಿರ್ದೇಶಕ ಸುಕುಮಾರ್ ಮತ್ತು ನಟ ಮಹೇಶ್ ಬಾಬು ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಈ ಪುಷ್ಪ ಪ್ರಾಜೆಕ್ಟ್ ಅನ್ನು ನಟ ಮಹೇಶ್ ಬಾಬು ಅವರು ಕೈ ಬಿಟ್ಟರಂತೆ. ಈಗ ಚಿತ್ರ ನೋಡಿದ ನಂತರ ಮಹೇಶ್ ಬಾಬು ಅಭಿಮಾನಿಗಳು ಚಿತ್ರ ಸರಿ ಇಲ್ಲದ್ದಕ್ಕೆ ಮಹೇಶ್ ಈ ಚಿತ್ರ ಕೈಬಿಟ್ಟದ್ದು ಒಳ್ಳೆಯದೇ ಆಯಿತು ಎಂದು ಖುಷಿ ಪಟ್ಟಿದ್ದಾರೆ. ಬಳಿಕ ಸುಕುಮಾರ್ ಅವರು ತಾವು ಈಗಾಗಲೇ ತಮ್ಮ ಎರಡು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಅಲ್ಲು ಅರ್ಜುನ್ ಅವರಿಗೆ ಪುಷ್ಪ ಸಿನಿಮಾ ಕಥೆ ಹೇಳಿದರಂತೆ. ಕಥೆ ಕೇಳಿ ಎಕ್ಸೈಟ್ ಆದ ಅಲ್ಲು ಅರ್ಜುನ್ ಅವರು ಈ ಚಿತ್ರವನ್ನು ದೊಡ್ಡದಾಗಿ ಮಾಡೋಣ ಎಂದು ಒಪ್ಪಿಗೆ ಸೂಚಿಸಿದರಂತೆ. ಒಟ್ಟಾರೆಯಾಗಿ ಇದೀಗ ಪುಷ್ಪ ಪಾರ್ಟ್1 ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಭಾಗ2 ಕೂಡ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲು ಸಿದ್ದಗೊಂಡಿದೆ ಎಂದು ತಿಳಿದು ಬಂದಿದೆ.