ಪುಟ್ಟಕನ್ನ ಮಕ್ಕಳು ಧಾರಾವಾಹಿಯಲ್ಲಿ ಹೊಸ ನಟನ ಎಂಟ್ರಿ

ಇತ್ತೀಚೆಗೆ ತಾನೇ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೊಸ ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಇದರ ಬೆನ್ನಲ್ಲೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಹೊಸದೊಂದು ಪಾತ್ರ ಪ್ರವೇಶ ಪಡೆದುಕೊಳ್ಳುವ ಮೂಲಕ ಈ ಧಾರಾವಾಹಿಯ ಕಥೆಯು ಹೊಸದೊಂದು ತಿರುವು ಪಡೆದುಕೊಳ್ಳಲಿದೆ ಎಂಬುದು ತಿಳಿದು ಬಂದಿದೆ. ಹೌದು ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿ ಜೀ಼ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದಂತಹ ಜೋಡಿಹಕ್ಕಿ ಮತ್ತು ಇಂದಿಗೂ ಕೂಡ ಅಪಾರ ಜನಪ್ರಿಯತೆ ಪಡೆದುಕೊಂಡು ಯಶಸ್ವಿಯಾಗಿ ಸಾಗುತ್ತಿರುವ ಜೊತೆ ಜೊತೆಯಲಿ ಅಂತಹ ಯಶಸ್ವಿ ಧಾರಾವಾಹಿಗಳ ನಿರ್ದೇಶಕ ಆರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ಟಿ.ಆರ್.ಪಿ. ವಿಚಾರದಲ್ಲಿ ಭಾರಿ ದಾಖಲೆ ಮಾಡಿತ್ತು.

ಕನ್ನಡದ ಖ್ಯಾತ ಹಿರಿಯ ರಂಗಭೂಮಿ ಕಲಾವಿದೆ ಚಿತ್ರ ನಟಿ ಉಮಾಶ್ರೀ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಯಲ್ಲಿ ತಂದೆ ಇಲ್ಲದ ಮೂವರು ಹೆಣ್ಣು ಮಕ್ಕಳ ತಾಯಿಯಾಗಿ ಉಮಾಶ್ರೀ ನಟಿಸುತ್ತಿದ್ದಾರೆ. ಮಗಳು ಅಕ್ಷರಾ ತಾನು ಐಎಎಸ್ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದಾಳೆ. ಕಾಲೇಜಿನಲ್ಲಿ ಓದುತ್ತಿರುವ ಮೂವರು ಪ್ರಾಯದ ಹೆಣ್ಣು ಮಕ್ಕಳನ್ನ ಕಟ್ಟಿಕೊಂಡು ತಾಯಿ ಪುಟ್ಟಕ್ಕ ತನ್ನ ಸಂಸಾರವನ್ನು ಹೇಗೆ ನಿಭಾಯಿಸುತ್ತಾಳೆ ಎಂಬ ಕಥಾ ಹಂದರ ಹೊಂದಿದೆ. ಕಾಲೇಜಿನಲ್ಲಿ ಓದುವ ವಯಸ್ಸಿನ ಹೆಣ್ಣು ಮಕ್ಕಳಿಗೆ ಆಕರ್ಷಣೆ ಅನ್ನೋದು ಆಗೇ ಆಗುತ್ತದೆ.

ಅಂದರೆ ಇಲ್ಲೊಂದು ಪ್ರಮುಖ ನಾಯಕನ ಪಾತ್ರ ಇರಲೇಬೇಕಾಗುತ್ತದೆ. ಹೌದು ಅದರಂತೆ ಇದೀಗ ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ನಟ ಪವನ್ ಎಂಟ್ರಿ ಕೊಟ್ಟಿದ್ದಾರೆ. ನಟ ಪವನ್ ಈ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಉಪನ್ಯಾಸಕ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ನಟ ಪವನ್ ಅವರು ಕಿನ್ನರಿ, ಆಕೃತಿ ಮತ್ತು ಗಟ್ಟಿ ಮೇಳ ಧಾರಾವಾಹಿಯಲ್ಲಿ ಉದ್ಯಮಿಯ ಪಾತ್ರದಲ್ಲಿ ಮಿಂಚಿದ್ದರು. ಇನ್ನು ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಲೆಕ್ಚರರ್ ಪಾತ್ರ ಸಿಕ್ಕಿರುವುದಕ್ಕೆ ನಟ ಪವನ್ ಅವರಿಗೆ ಫುಲ್ ಖುಷ್ ಆಗಿದೆಯಂತೆ. ಯಾಕಂದ್ರೆ ಅವರು ತಮ್ಮ ಕಾಲೇಜು ದಿನಗಳಲ್ಲಿ ತಮ್ಮ ಜ್ಯೂನಿಯರ್ ಗಳಿಗೆ ಪಾಠ ಹೇಳಿಕೊಡುತ್ತಿದ್ದರಂತೆ.

ಪಾಠ ಪ್ರವಚನ ಮಾಡುವುದು ನನಗೆ ಇಷ್ಟವಾದದು. ಅದೇ ಪಾತ್ರ ನನಗೆ ಸಿಗುತ್ತಿದೆ ಅಂದರೆ ಅದಕ್ಕಿಂತ ಮತ್ತೊಂದು ಖುಷಿಯ ವಿಚಾರ ಮತ್ತೊಂದಿಲ್ಲ ಎಂದು ನಟ ಪವನ್ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಇನ್ನು ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಿಲ್ಲಿ ಲಲ್ಲಿ ಧಾರಾವಾಹಿ ಸಮಾಜ ಸೇವಕಿ ಲಲಿತಾಂಬ ಖ್ಯಾತಿಯ ಮಂಜು ಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್ ಅವರು ಸೇರಿದಂತೆ ಮತ್ತೊಂದಷ್ಟು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

%d bloggers like this: