ರಾಜಕೀಯಕ್ಕೆ ಬರುವ ಸುದ್ದಿ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿದ ಡಾಲಿ ಧನಂಜಯ ಅವರು

ನಟರಾಕ್ಷಸ ಡಾಲಿ ಧನಂಜಯ್ ರಾಜಕೀಯ ಕ್ಷೇತ್ರಕ್ಕೆ ಧುಮುಕಲಿದ್ದಾರಾ. ಈ ಒಂದು ಪ್ರಶ್ನೆ ಇದೀಗ ಸೋಶಿಯಲ್ ಮೀಡಿಯಾ ಪೂರ ಸಖತ್ ವೈರಲ್ ಆಗಿದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ದಿನ ನಿತ್ಯ ನೂರಾರು ವಿಷಯಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ರಾಜಕೀಯ ಗಣ್ಯರ, ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಇನ್ನಿತರ ವಿಭಿನ್ನ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅದರಂತೆ ಇದೀಗ ಕನ್ನಡದ ಬಹುಬೇಡಿಕೆಯ ಸುಪ್ರಸಿದ್ಧ ನಟ ಡಾಲಿ ಧನಂಜಯ್ ಅವರ ಬಗ್ಗೆ ಕೂಡ ಅಚ್ಚರಿಯ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಯಶಸ್ವಿ ಆಗಿರುವ ನಟ ಧನಂಜಯ್ ಇದೀಗ ಕನ್ನಡದ ಸ್ಟಾರ್ ನಟ. ಕನ್ನಡ ಮಾತ್ರ ಅಲ್ಲದೆ ತೆಲುಗು ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ನಾಡಿನಾದ್ಯಂತ ಅಪಾರ ಜನಪ್ರಿಯತೆ ಹೊಂದಿರುವ ಡಾಲಿ ಧನಂಜಯ್ ಅವರು ಇದೀಗ ಸದ್ಯಕ್ಕೆ ತಮ್ಮ ನಟನೆ ಮತ್ತು ನಿರ್ಮಾಣದ ಹೆಡ್ ಬುಷ್ ಚಿತ್ರದ ಚಿತ್ರೀಕರಣದಲ್ಲಿ ಬಿಝಿ಼ ಆಗಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇನ್ನಿತರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಧನಂಜಯ್ ಅವರಿಗೆ ಗಮನಕ್ಕೆ ಬಾರದೆ ರಾಜಕೀಯ ವಿಚಾರವೊಂದು ಅವರ ಸುತ್ತ ಸುತ್ತಿಕೊಂಡಿದೆ. ಅದೇನಪ್ಪಾ ಅಂದರೆ ನಟ ಧನಂಜಯ್ ಅವರು ಅರಸೀಕೆರೆಯಲ್ಲಿ ಶಿವಲಿಂಗೇಗೌಡರಿಗೆ ಪರ್ಯಾಯವಾಗಿ ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಅಚ್ಚರಿ ಮೂಡಿಸಿದೆ. ಇದು ಅವರ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸ್ ಅಂತೇಳಬಹುದು. ಆದರೆ ಈ ವಿಚಾರವಾಗಿ ಡಾಲಿ ಧನಂಜಯ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಾನು ರಾಜಕೀಯಕ್ಕೆ ಸೇರುತ್ತೇನೆ ಎಂದು ಯಾರ ಹತ್ತಿರ ಕೂಡ ತಿಳಿದಿಲ್ಲ.

ನಾನು ಶೂಟಿಂಗ್ ಅಲ್ಲಿ ಎಷ್ಟು ಮುಳುಗಿ ಹೋಗಿದಿನಿ ಅಂದ್ರೆ ನನಗೆ ನನ್ನ ಸುತ್ತಲೂ ಏನೆಲ್ಲಾ ವಿಚಾರ ನಡೆಯುತ್ತಿವೆ ಎಂಬುದು ಕೂಡ ನನಗೆ ತಿಳಿಯುತ್ತಿಲ್ಲ. ಈ ರಾಜಕೀಯ ವಿಚಾರಕ್ಕೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಜನರು ನನ್ನನ್ನ ಕಲಾವಿದನಾಗಿ ಸ್ವೀಕರಿಸಿದ್ದಾರೆ. ನಾನು ನನ್ನ ಕ್ಷೇತ್ರದಲ್ಲಿ ನೂರಾರು ಪಾತ್ರಗಳನ್ನ ಮಾಡುವ ಮೂಲಕ ಅಭಿಮಾನಿ ದೇವರುಗಳನ್ನು ರಂಜಿಸುವ ಕೆಲಸ ಮಾತ್ರ ಮಾಡಬಲ್ಲೆ ಅಷ್ಟೆ. ನಾನು ರಾಜಕೀಯ ಕ್ಷೇತ್ರಕ್ಕೆ ಬರುವ ಸಂಗತಿ ಸತ್ಯಕ್ಕೆ ದೂರವಾದ ಮಾತು. ಯಾರೂ ಸಹ ಅದನ್ನ ನಂಬಬೇಡಿ. ಸುಖಾ ಸುಮ್ಮನೆ ಏನೇನೋ ಸುದ್ದಿ ಬರೆಯೋದು, ತೋರಿಸುವ ಕೇಳಿಸೋದು, ನಂಬೋದು ಎಲ್ಲಾ ಬಿಟ್ಟು ನಡೀರಿ. ಏನಾರ ಒಂದಷ್ಟು ಕೆಲಸ ಮಾಡೋಣ ಎಂದು ಟ್ವೀಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾರಿದಾಡುತ್ತಿದ್ದ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ನಟ ಡಾಲಿ ಧನಂಜಯ್ ಅವರು ಜಮಾಲಿ ಗುಡ್ಡ, ಹೊಯ್ಸಳ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

%d bloggers like this: