ರಾಮ ಮಂದಿರ ನಿರ್ಮಾಣಕ್ಕೆ ಬರೋಬ್ಬರಿ 30 ಲಕ್ಷ ದೇಣಿಗೆ ನೀಡಿದ ದಕ್ಷಿಣ ಭಾರತದ ಸ್ಟಾರ ನಟ

ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಬರೋಬ್ಬರಿ 30 ಲಕ್ಷ ದೇಣಿಗೆ ನೀಡಿದ ಟಾಲಿವುಡ್ನ ಈ ಸ್ಟಾರ್ ನಟ! ಈಗಾಗಲೇ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ನಿರ್ಮಾಣದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿದೆ. ದೇಶಾದ್ಯಂತ ಭಕ್ತರಿಂದ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹವಾಗುತ್ತಿದೆ. ಸಾರ್ವಜನಿಕರು, ರಾಜಕೀಯ ವ್ಯಕ್ತಿಗಳು, ಸಂಘ ಸಂಸ್ಥೆಗಳು ಜೊತೆಯಾಗಿ ಸಿನಿಮಾ ಸ್ಟಾರ್ ನಟರು ಕೂಡ ದೇಣಿಗೆ ನೀಡುತ್ತಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೂ ಕೂಡ ದೇಣಿಗೆ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆರ್.ಎಸ್.ಎಸ್ ಸಂಘ ಈಗಾಗಲೇ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದೆ.

ದೇಣಿಗೆ ಸಂಗ್ರಹ ಕಾರ್ಯ ಆರಂಭವಾದ ಮೂರೇ ದಿನದಲ್ಲಿ ಅಂದಾಜು ನೂರು ಕೋಟಿಯಷ್ಟು ದೇಣಿಗೆ ಸಂಗ್ರಹವಾಗಿದೆ ಎಂದು ತಿಳದು ಬಂದಿದೆ. ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ರಾಮಮಂದಿರ ನಿರ್ಮಾಣಕ್ಕಾಗಿ ನಾವೆಲ್ಲರು ವಾನರರಂತೆ ನಿಂತು ತಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡೋಣ ಎಂದು ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು.

ಇನ್ನು ಚಂದನವನದ ಚೆಲುವೆ ಪ್ರಣೀತಾ ಸುಭಾಷ್ ಕೂಡ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆಯಾಗಿ ಒಂದು ಲಕ್ಷ ರುಪಾಯಿ ನೀಡಿದ್ದರು. ಇದೀಗ ಟಾಲಿವುಡ್ನ ಸ್ಟಾರ್ ನಟರಾದ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೂಡ ದೇಣಿಗೆಯಾಗಿ ಬರೋಬ್ಬರಿ 30 ಲಕ್ಷ ನೀಡಿದ್ದಾರೆ. ಅದರ ಜೊತೆಗೆ ತಮ್ಮ ಸಿಬ್ಬಂದಿಗಳಂದ 11ಸಾವಿರದ ಹನ್ನೊಂದು ಚೆಕ್ ಗಳನ್ನು ನೀಡಿದ್ದಾರೆ. ಇತ್ತೀಚೆಗೆ ತಿರುಪತಿ ದೇವಾಲಯಕ್ಕೆ ಭೇಟಿಕೊಟ್ಟಿದ್ದ ಪವನ್ ಕಲ್ಯಾಣ್ ಅವರನ್ನು ಮಾಜಿ ಸಚಿವ ಮತ್ತು ಆರ್.ಎಸ್.ಎಸ್ ನಾಯಕರಾದ ಕಾಮಿನೇನಿ ಶ್ರೀನಿವಾಸ್ ಭೇಟಿ ಮಾಡಿದ್ದರು. ಇದೇ ಸಂಧರ್ಭದಲ್ಲಿ ಪವನ್ ಕಲ್ಯಾಣ್ ದೇಣಿಗೆಯನ್ನು ಇವರಿಗೆ ಹಸ್ತಾಂತರಿಸಿದ್ದಾರೆ.

%d bloggers like this: