ರಾಮ ಮಂದಿರ ನಿರ್ಮಾಣಕ್ಕೆ ಕನ್ನಡ ನಟಿ ಅಮೂಲ್ಯ ಅವರಿಂದ ಭಾರಿ ಮೊತ್ತದ ದೇಣಿಗೆ

ನಟಿ ಅಮೂಲ್ಯ ದಂಪತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಒಂದೂವರೆ ಲಕ್ಷ ದೇಣಿಗೆ! ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆಯ ಸಂಗ್ರಹಕ್ಕಾಗಿ ಆರಂಭವಾಗಿರುವ ಸಮರ್ಪಣಾ ಅಭಿಯಾನಕ್ಕೆ ದೇಶದ ಜನರಿಂದ, ಸಂಘ ಸಂಸ್ಥೆಗಳಿಂದ ಅಭೂತ ಪೂರ್ವ ಪ್ರೋತ್ಸಾಹ, ಸಹಕಾರ ದೊರೆಯುತ್ತಿದೆ. ಜನವರಿ 15ರಂದು ಆರಂಭವಾದ ಈ ಸಮರ್ಪಣಾ ಅಭಿಯಾನಕ್ಕೆ ಭಾರತೀಯ ಚಿತ್ರರಂಗದ ಖ್ಯಾತ ನಟರು, ರಾಜಕಾರಣಿಗಳು, ಕ್ರೀಡಾಪಟುಗಳು ದೊಡ್ಡ ಮೊತ್ತದ ದೇಣಿಗೆ ನೀಡುವುದರ ಮೂಲಕ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಮಾನಿಗಳಿಗೂ ಕೂಡ ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ವಾರವಷ್ಟೇ ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಬರೋಬ್ಬರಿ ಮೂವತ್ತು ಲಕ್ಷ ದೇಣಿಗೆ ನೀಡುವುದರ ಮೂಲಕ ಭಾರಿ ಸುದ್ದಿಯಾಗಿದ್ದರು. ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ದೊಡ್ಡ ಮೊತ್ತದ ದೇಣಿಗೆ ನೀಡಿ, ಆ ಹಣ ಮೊತ್ತವನ್ನು ಬಹಿರಂಗ ಪಡಿಸದೇ ಗೌಪ್ಯವಾಗಿ ಇಟ್ಟು, ತಮ್ಮ ಅಭಿಮಾನಿಗಳಲ್ಲಿ ನಿಮ್ಮ ಕೈಲಾದಷ್ಟು ದೇಣಿಗೆ ನೀಡುವುದರ ಮೂಲಕ ರಾಮಮಂದಿರ ನಿರ್ಮಾಣಕ್ಕೆ ನಮ್ಮಿಂದಾಗುವ ಅಳಿಲು ಸೇವೆಯನ್ನು ಮಾಡೋಣ ಎಂದು ಹೇಳಿದ್ದರು. ಅದೇ ರೀತಿ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಕೂಡ ಒಂದು ಲಕ್ಷ ರುಪಾಯಿ ದೇಣಿಗೆ ನೀಡುವುದರ ಮೂಲಕ ಮಾದರಿಯಾಗಿದ್ದರು.

ಈಗ ಸ್ಯಾಂಡಲ್ ವುಡ್ ಪ್ರಖ್ಯಾತ ನಟಿ ಯಾದ ಅಮೂಲ್ಯ ದಂಪತಿ ಕೂಡ ಒಂದೂವರೆ ಲಕ್ಷ ನೀಡುವುದರ ಮೂಲಕ ಭವ್ಯ ಶ್ರೀ ರಾಮಮಂದಿರ ನಿರ್ಮಾಣ ಮಹತ್ಕಾರ್ಯದ ದೇಣಿಗೆ ಸಂಗ್ರಹಕ್ಕೆ ಕೈಜೊಡಿಸಿದ್ದಾರ, ಜೊತೆಗೆ ಅಮೂಲ್ಯ ಅವರ ಮಾವ ರಾಮಚಂದ್ರ ಅವರು ಸಹ ಒಂದು ಲಕ್ಷ ದೇಣಿಗೆ ನೀಡಿದ್ದಾರೆ, ಇದರ ಬಗ್ಗೆ ಅಮೂಲ್ಯ ದಂಪತಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನ ನಡೆಯುತ್ತಿದ್ದು, ಪ್ರತಿಯೊಬ್ಬರು ಕೂಡ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಮನೆಗೆ ಆಗಮಿಸಿದ ಬಿಜೆಪಿ ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ಕುಮಾರ್ ರವರಿಗೆ ಈ ದೇಣಿಗೆ ಮೊತ್ತವನ್ನು ನೀಡಿದ್ದೇವೆ, ಪ್ರತಿವರ್ಷ ಹುಟ್ಟುಹಬ್ಬಕ್ಕಾಗಿ ಮಾಡುತ್ತಿದ್ದ ಈ ಖರ್ಚನ್ನು ಇಂತಹ ಮಹತ್ಕಾರ್ಯಕ್ಕೆ ಬಳಸುತ್ತಿರುವುದು ಸಾರ್ಥಕ ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

%d bloggers like this: