ರಾಶಿ ಚಕ್ರಗಳಲ್ಲಿ ಬದಲಾವಣೆ, ಹೊಸ ವರ್ಷ ಈ ರಾಶಿಯವರಿಗೆ ಉತ್ತಮವಾದ ವರ್ಷ

ಹೊಸ ವರ್ಷದಿಂದ ರಾಶಿ ಚಕ್ರಗಳಲ್ಲಿ ಗುರುಗ್ರಹವು ತನ್ನ ಸ್ಥಾನ ಬದಲಾಯಿಸಿದರು ಕೂಡ ಕರ್ಕಾಟಕ ರಾಶಿಯವರ ಭವಿಷ್ಯ ಉತ್ತಮವಾಗಿರುತ್ತದೆ, ಇತರೆ ರಾಶಿಗಳಿಗಿಂತ ಕರ್ಕಾಟಕ ರಾಶಿ ಭವಿಷ್ಯ ಭಿನ್ನವಾಗಿದೆ ಎಂದು ಜ್ಯೊತಿಷ್ಯ ಶಾಸ್ಥ್ರಜ್ಞರು ಹೇಳುತ್ತಿದ್ದಾರೆ. ಹಾಗದರೆ ಈ ಕರ್ಕಾಟಕ ರಾಶಿ ಭವಿಷ್ಯ ಏನನ್ನು ತಿಳಿಸುತ್ತದೆ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರ.ಚಂದ್ರ ಗ್ರಹ ಎರಡು ಕಾಲು ದಿನಕ್ಕೊಮ್ಮೆ ತನ್ನ ರಾಶಿ ಮನೆಯಿಂದ ಸ್ಥಾನವನ್ನು ಬದಲಾಯಿಸುತ್ತದೆ. ಹಾಗಾಗಿ ಈ ಚಂದ್ರ ಗ್ರಹವನ್ನು ಆಧಾರ ವಾಗಿಟ್ಟುಕೊಂಡು ಭವಿಷ್ಯ ಹೇಳುವುದು ಕಷ್ಟಸಾಧ್ಯವಾಗಿದೆ. ಇನ್ನು ಈ ಶುಕ್ರ, ಬುಧ, ಸೂರ್ಯ ಈ ಮೂರು ಗ್ರಹಗಳು ಕೂಡ ಒಂದು ತಿಂಗಳಿಗೊಮ್ಮೆ ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತವೆ.

ಈ ಗ್ರಹಗಳ ಆಧಾರದ ಮೇಲೂ ಸಹ ವರ್ಷ ಭವಿಷ್ಯ ನಿರ್ಧರಿಸುವುದು ಸಾಧ್ಯವಿಲ್ಲ, 45 ದಿನಕ್ಕೊಮ್ಮೆ ತನ್ನ ಸ್ಥಾನ ಬದಲಾಯಿಸುವ ಕುಜಗ್ರಹ ನೋಡಿ ವರ್ಷ ಭವಿಷ್ಯ ಹೇಳುವುದು ಸಾಧ್ಯವಿರುವುದಿಲ್ಲ ಹಾಗಾದರೆ ಈ ವರ್ಷ ಭವಿಷ್ಯ ಹೇಳಲು ಸಹಾಯಕವಾದ ಗ್ರಹಗಳು ಯಾವುದು ಅಂದರೆ ಕ್ರಮವಾಗಿ ಈ ನಾಲ್ಕು ರಾಶಿಗಳು ಪ್ರಭಾವ ಬೀರುತ್ತವೆ. ಗುರು ಗ್ರಹವು ವರ್ಷಕ್ಕೆ ಒಮ್ಮೆ ಮಾತ್ರ ತನ್ನ ರಾಶಿ ಮನೆಯಿಂದ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ರಾಹು ಕೇತುಗಳು 18ತಿಂಗಳಿಗೊಮ್ಮೆ ತನ್ನ ಸ್ವಗೃಹ ರಾಶಿಯಿಂದ ಸ್ಥಾನಪಲ್ಲಟ ಮಾಡುತ್ತದೆ. ಇನ್ನು ಶನಿ ಪರಮಾತ್ಮ ಬರೋಬ್ಬರಿ ಎರಡೂವರೆ ವರ್ಷಕ್ಕೆ ಒಮ್ಮೆ ತನ್ನ ಸ್ಥಾನವನ್ನುಸಂಚರಿಸುತ್ತದೆ.

ಹಾಗಾದರೆ ಈ ಕರ್ಕಾಟಕ ರಾಶಿಯವರಿಗೆ 2021ರ ಭವಿಷ್ಯ ಯಾವ ಆಧಾರದ ಮೇಲೆ ನಿರ್ಧರಿಸಬಹುದಾಗಿದೆ ಎನ್ನುವುದಾದರೆ ಇತರ ರಾಶಿಯವರಿಗೆ 2021ರ ಏಪ್ರಿಲ್ ಆರರವರೆಗೆ ಯಾವುದೇ ರೀತಿಯ ಒಳ್ಳೆಯ ಶುಭ ಸಮಾಚಾರಗಳು ಇರುವುದಿಲ್ಲ. ಆದರೆ ಈ ಕರ್ಕಾಟಕ ರಾಶಿಯವರಿಗೆ ಮಾತ್ರ ವರ್ಷಪೂರ್ತಿ ಅನುಕೂಲಕರವಾಗಿರುತ್ತದೆ. ಏಕೆಂದರೆ ಸಪ್ತಮದಲ್ಲಿ ಗುರು ಮತ್ತು ಶನಿಎರಡು ಗ್ರಹಗಳಿರುವುದರಿಂದ ನಿಮಗೆ ಸೌಭಾಗ್ಯ ಲಭಿಸುತ್ತದೆ, ಇನ್ನು ಗುರುಗ್ರಹವು ಆಗಾಗ ಕುಂಭರಾಶಿಯ ಮನೆಗೆ ಸ್ಥಾನ ಬದಲಾಯಿಸುವುದರಿಂದ ಇತರ ರಾಶಿಯವರು ಕೊಂಚ ಹೊಡೆತ ತಿನ್ನಬಹುದು ಆದರೆ ಈ ಕರ್ಕಾಟಕ ರಾಶಿಯವರಿಗೆ ಯಾವುದೇ ರೀತಿಯ ಭಯ ಪಡಬೇಕಾದ ಅವಶ್ಯಕತೆ ಇರುವುದಿಲ್ಲ. ಗುರುಗ್ರಹವು ಪರಮನೀಚ ಸ್ಥಾನದಲ್ಲಿ ಇದ್ದರೂ ಸಹ ಗುರುವಿನ ಸಂಪೂರ್ಣ ದೃಷ್ಟಿ ಪ್ರಭಾವ ಕರ್ಕಾಟಕ ರಾಶಿಯ ಮೇಲೆ ಇರುತ್ತದೆ.

ಇದು ಕೂಡ ಕರ್ಕಾಟಕ ರಾಶಿಯವರಿಗೆ ಸಕಾರಾತ್ಮಕವಾದ ಪರಿಣಾಮ ಬೀರುತ್ತದೆ ಎನ್ನಬಹುದು. ಇನ್ನು ಅವಿವಾಹಿತರಿಗೆ ಕಂಕಣಭಾಗ್ಯ ದೊರೆಯುತ್ತದೆ. ವೃತ್ತಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ, ಆದರೆ ಗುರುಗ್ರಹವು ಕುಂಭರಾಶಿಗೆ ಹೋದಾಗ ಮಾತ್ರ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನಿಧಾನಗತಿಯಲ್ಲಿ ಸಾಗಬಹುದು ಹೊರತು ಕೆಟ್ಟದ್ದು ಮಾತ್ರ ಆಗುವುದಿಲ್ಲ. ಗುರು ರಾಶಿಯು ಮಕರ ರಾಶಿಯಲ್ಲಿ ಹೋದಾಗ ಮತ್ತೆ ನಿಮ್ಮ ವ್ಯಾಪಾರವ್ಯವಹಾರಗಳು ವೇಗವನ್ನು ಪಡೆದುಕೊಳ್ಳುತ್ತದೆ. ಆದರೆ ಗುರುಗ್ರಹ ಅನುಗ್ರಹವು ವರ್ಷದ ಅರಂಭದಲ್ಲಿ ಫೆಬ್ರವರಿ ತಿಂಗಳಿ 22 ದಿನಾಂಕದಂದು ಆರಂಭವಾಗಿ ರಾಹು ಕೇತು ಘರ್ಷಣೆ ಆದರೂ ಸಹ ನಿಮಗೆ ಶುಭವಿದೆ. ಮನೆಖರೀದಿ, ನಿವೇಶನ ಖರೀದಿ ಮಾಡುವ ಯೋಗವಿದೆ. ಜೊತೆಗೆ ವ್ಯವಸಾಯದಲ್ಲಿ ಪ್ರಗತಿ ಅಭಿವೃದ್ಧಿ ಹೊಂದುತ್ತಾರೆ.

ಆದರೆ ದಿನಾಂಕ 14 -4 -2021 ರಿಂದ 2-6-2021ರ ವರೆಗೆ ನೀವು ಆದಷ್ಟು ಎಚ್ಚರ ವಹಿಸಬೇಕು. ನೀವೇ ಸ್ವತಃ ಯಾವುದೇ ರೀತಿಯ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಡಿ. ಆದಷ್ಟು ಹಿರಿಯರ ಸಲಹೆ ಸೂಚನೆಗಳನ್ನು ಪಡೆಯುವುದು ಉತ್ತಮವಾಗಿದೆ. ಮಕ್ಕಳ ಆರೋಗ್ಯದ ಕಡೆ ಗಮನ ಕೊಡಿ ಆಲಸ್ಯ ಮಾಡಬೇಡಿ. ಜೊತೆಗೆ ವಾಹನ ಖರೀದಿ ಮಾಡಬೇಡಿ, ಮುಂದಿನ ದಿನಗಳಲ್ಲಿ ಜ್ನಾನಾರ್ಜನೆ ಹೆಚ್ಚಾಗಿ ಗುರು ಹಿರಿಯರಲ್ಲಿ ಭಯ ಭಕ್ತಿ ಗೌರವ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ ಕರ್ಕಾಟಕರಾಶಿಯವರಿಗೆ ವರ್ಷಪೂರ್ತಿಯಾಗಿ ಶುಭಫಲಗಳಿವೆ ಎನ್ನಬಹುದಾಗಿದೆ.

%d bloggers like this: