ರಾಶಿಚಕ್ರಗಳಲ್ಲಿ ಬದಲಾವಣೆ, ಹೊಸ ವರ್ಷಕ್ಕೆ 5 ರಾಶಿಯವರಿಗೆ ರಾಜಯೋಗ

2021ರಲ್ಲಿ ಈ 5ರಾಶಿಯವರಿಗೆ ರಾಜಯೋಗ ಲಭಿಸಲಿದೆ.ಮುಂದಿನ ವರ್ಷ ಅಂದರೆ 2021ರಲ್ಲಿ ರಾಶಿ ಚಕ್ರಗಳಲ್ಲಿ ಮಹತ್ತರವಾದ ಬದಲಾವಣೆ ಆಗಲಿದ್ದು ಈ ಬದಲಾವಣೆ ಬಹಳ ಮಹತ್ವ ಪಡೆದುಕೊಂಡಿದೆ‌, ಹೌದು ಕಳೆದ ವರ್ಷ ಜಗತ್ತಿಗೆ ಕಷ್ಟಗಳ ಕಾರ್ಮೋಡ ಆವರಿಸಿ ಜನರ ಬದುಕು ಅಂಧಕಾರದಲ್ಲಿ ಮುಳುಗಿ ಬದುಕಲ್ಲಿ ಬೆಳಕಿನ ಭರವಸೆ ಕಣ್ಮರೆಯಾಗಿತ್ತು. ಆದರೆ 2021ರಲ್ಲಿ ಹಲವರ ಬದುಕಲ್ಲಿ ರಾಜಯೋಗ ಲಭಿಸಲಿದೆ. 2021ರಲ್ಲಿ ಬಹಳ ವಿಶೇಷವಾಗಿ ಈ ಐದು ರಾಶಿಯವರಿಗೆ ವಿಶೇಷ ರಾಜಯೋಗ ಲಭಿಸಲಿದೆ ಅದರಲ್ಲಿ ಮೊದಲನೆಯದಾಗಿ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಸಮಾಜದಲ್ಲಿ ಸ್ಥಾನ ಮಾನ ಮನ್ನಣೆ ದೊರೆತು ಇವರಿಗೆ ಉಜ್ವಲವಾದ ಭವಿಷ್ಯ ನಿರ್ಮಾಣವಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಅಧಿಕ ಲಾಭವಾಗುತ್ತದೆ. ಆರ್ಥಿಕ ಚೇತರಿಕೆ ಕಂಡು ಸರ್ವತೋಮುಖ ಅಭಿವೃದ್ಧಿ ಕಾಣುತ್ತಾರೆ. ಆಸ್ತಿ ಖರೀದಿ ಜಮೀನು, ವಾಹನ ಖರೀದಿಯ ಯೋಗವು ಕೂಡ ಇವರಿಗಿದೆ. ವಿವಾಹವಾಗಿ ಹಲವು ವರ್ಷಗಳು ಕಳೆದರೂ ಸಹ ಸಂತಾನ ಭಾಗ್ಯ ದೊರೆಯದೆ ವೇದನೆ ಪಡುತ್ತಿದ್ದವರಿಗೆ 2021ವರ್ಷದಲ್ಲಿ ಸಂತಾನ ಯೋಗ ಲಭಿಸಲಿದೆ. ನಿಮ್ಮ ಕನಸಾಗಿದ್ದ ತೀರ್ಥಕ್ಷೇತ್ರ ಭೇಟಿ ನನಸಾಗುತ್ತದೆ. ವರ್ಷಾನು ಗಟ್ಟಲೇ ತಿರುಗುತ್ತಿದ್ದ ಕೋರ್ಟು ಕಚೇರಿ ಕೇಸುಗಳಲ್ಲಿ ಜಯ ಸಾಧಿಸುತ್ತಾರೆ.

ಕಟಕ ರಾಶಿ: ಈ ರಾಶಿಯವರು ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರೆ. ಸಂಧಿಗ್ದ ಪರಿಸ್ಥಿತಿಯಿಂದ ಬಚಾವ್ ಅಗಿ ಕಾಕತಾಳೀಯ ಎಂಬಂತೆ ಯಾರಾದರು ಒಬ್ಬರು ಕಷ್ಟದ ಸಂದರ್ಭಗಳಲ್ಲಿ ಕೈ ಹಿಡಿಯುತ್ತಾರೆ. ಆರ್ಥಿಕ ಚೇತರಿಕೆ ಕಂಡು ಧನಲಾಭ ಆಗುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಕೊಂಚ ಬುದ್ದಿವಂತಿಕೆಯಿಂದ ವ್ಯವಹರಿಸಿದರೆ ಅತ್ಯಧಿಕ ಲಾಭವಾಗುತ್ತದೆ. ಖಾಸಗಿ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳಿಗೆ ವೃತ್ತಿಯಲ್ಲಿ ಉನ್ನತಮಟ್ಟದ ಅಧಿಕಾರ ಸಿಗುತ್ತದೆ ನೀವು ಇಚ್ಚಿಸಿದ ಸ್ಥಳಕ್ಕೆ ವರ್ಗಾವಣೆಯಾಗುತ್ತದೆ. ಇನ್ನು ಈ ರಾಶಿಯವರು ಸಿವಿಲ್ ಇಂಜಿನಿಯರಿಂಗ್, ಸಿನಿಮಾ, ಹೋಟೆಲ್ ಉದ್ಯಮದಲ್ಲಿ ಇದ್ದರೆ ಹಿಂದೆಂದು ಕಾಣದ ಧನಲಾಭ, ಹೆಸರು ಕೀರ್ತಿ ನಿಮ್ಮದಾಗುತ್ತದೆ. ಈ ರಾಶಿಯ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ನಿರ್ಮಾಣವಾಗುತ್ತದೆ.

ಕನ್ಯಾ ರಾಶಿ: ಈ ರಾಶಿಯವರು ಅನಿವಾರ್ಯ ಕಾಲಣಗಳಿಂದ ಮದುವೆ ಆಗಿ ಮಕ್ಕಳಿಲ್ಲದೆ ಸಂಕಟ ಪಡುತ್ತಿರುವ ದಂಪತಿಗಳಿಗೆ ಮುಂದಿನ ವರ್ಷ ಸಂತಾನ ಯೋಗ ವಾಗುತ್ತದೆ. ಇನ್ನು ಕಟ್ಟಡ ನಿರ್ಮಾಣ, ಕೃಷಿ ಜಮೀನು ಖರೀದಿ, ಅಲಂಕಾರಿಕ ವಸ್ತು ಖರೀದಿ ಮಾಡುವ ಯೋಗಗಳಿವೆ. ಆಸ್ತಿ, ಜಮೀನು ಮಾಡಲು ನಿಮಗೆ ಇದು ಸೂಕ್ತ ಸಮಯವಾಗಿದೆ. ಉನ್ನತ ಖಾಸಗಿ ಕ್ಷೇತ್ರದಲ್ಲಿ ನೀವು ಕೆಲಸ ಮಾಡುತ್ತಿದ್ದರೆ ನಿಮ್ಮ ಕಾರ್ಯಕ್ಷಮತೆ ಮೆಚ್ಚಿ ಉನ್ನತ ಮಟ್ಟದ ಅಧಿಕಾರಿಗಳಿಂದ ಪ್ರಶಸ್ತಿ ಲಭಿಸಬಹುದು‌. ಪಾಲುದಾರಿಕೆ ವ್ಯವಹಾರಗಳಲ್ಲಿ ಅಧಿಕ ಲಾಭ ಗಳಿಸಬಹುದಾಗಿದೆ. ಇನ್ನು ನಿಮ್ಮ ಶಕ್ತಿಯನುಸಾರ ಧಾರ್ಮಿಕ ಮಂಟಪ, ಕಲ್ಯಾಣ ಮಂಟಪವನ್ನು ಕಟ್ಟುವ ಯೋಗವಿದೆ. ಈ ಪುಣ್ಯ ಕಾರ್ಯಗಳಿಂದಾಗಿ ಇನ್ನಷ್ಟು ಆರ್ಥಿಕವಾಗಿ ಬಲಿಷ್ಟರಾಗುತ್ತೀರಿ.

ಧನಸ್ಸು ರಾಶಿ: ಈ ರಾಶಿಯವರಿಗೆ ತಾವು ಅಂದುಕೊಂಡ ಕೆಲಸ, ಆಲೋಚನೆಗಳು ಸಾಕಾರಗೊಳ್ಳುತ್ತವೆ. ಹಣಕಾಸು ಸಮಸ್ಯೆ ನಿವಾರಣೆಯಾಗಿ ಸಾಲದ ಬಾಧೆಯಿಂದ ಮುಕ್ತಿಗೊಳ್ಳುತ್ತಾರೆ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗುತ್ತದೆ. ಕುಟುಂಬದಲ್ಲಿ ಇದ್ದ ಕಲಹ ಮನಸ್ತಾಪ ದೂರವಾಗಿ ಎಲ್ಲರಲ್ಲೂ ಹೊಂದಾಣಿಕೆ ಮನೋಭಾವ ಮೂಡುತ್ತದೆ.

ಮೀನ ರಾಶಿ: ಅಂತಿಮವಾಗಿ ಈ ರಾಜಯೋಗ ಪಡೆಯುತ್ತಿರುವ ರಾಶಿಗಳಲ್ಲಿ ಈ ಮೀನ ರಾಶಿಯವರು ವಿಶೇಷವಾಗಿ ಕಾಣುತ್ತಾರೆ. ಕಾರಣ ಇವರಲ್ಲಿ ಅಧ್ಭುತವಾದ ಶಕ್ತಿಯೊಂದು ಇವರಿಂದ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡಿಸುತ್ತದೆ. ಇದರಿಂದ ಸಮಾಜದಲ್ಲಿ ಇವರಿಗೆ ಗೌರವ ಸ್ಥಾನ ಮಾನ, ಮನ್ನಣೆ ಇವರದ್ದಾಗುತ್ತದೆ‌. ಶುಭದಿನಗಳು ಇವರಿಗೆ ಆರಂಭವಾಗಿ ಮುಟ್ಟಿದ್ದೆಲ್ಲಾ ಬಂಗಾರ ಎಂಬಂತೆ ತೆಗೆದುಕೊಂಡು ನಿರ್ಧಾರ, ಕಾರ್ಯ ಗಳು ಬಹಳ ಯಶಸ್ಸು ಪಡೆಯುತ್ತವೆ. ಇವರಿಗೆ ಆಸ್ತಿ ಖರೀದಿ, ಕೃಷಿ ಜಮೀನು, ಕೃಷಿ ಉಪಕರಣಗಳು ಖರೀದಿಯ ಯೋಗವಿದೆ. ಇನ್ನು ದಾಂಪತ್ಯ ಜೀವನದಲ್ಲಿ ಸತಿ ಪತಿ ಕಲಹ ದೂರವಾಗಿ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ. ಇವರು ಸಿನಿಮಾ, ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರೆ ಉನ್ನತ ಮಟ್ಟದ ಸ್ಥಾನ ಪಡೆಯುತ್ತಾರೆ ಎಂದು ಹೇಳಲಾಗಿದೆ.

%d bloggers like this: