ರಾತ್ರಿ ಊಟದ ನಂತರ ಸ್ವಲ್ಪ ಹೊತ್ತು ವಾಕಿಂಗ್ ಯಾಕೆ ಮಾಡಲೇಬೇಕು ಗೊತ್ತಾ

ರಾತ್ರಿ ಊಟವಾದ ಬಳಿಕ ಈ ಒಂದು ಕೆಲಸವನ್ನು ತಪ್ಪದೇ ಮಾಡಲೇಬೇಕು. ಇದರಿಂದ ನಿಮ್ಮ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ದೇಹವನ್ನು ಸಮತೋಲನವಾಗಿ ಇಟ್ಟುಕೊಳ್ಳಬಹುದಾಗಿರುತ್ತದೆ. ಆರೋಗ್ಯವೇ ಭಾಗ್ಯ. ಆದರೆ ಆರೋಗ್ಯ ಎಲ್ಲ ವ್ಯಕ್ತಿಗಳಿಗೆ ಲಭಿಸುವುದಿಲ್ಲ‌. ಹಲ್ಲು ಇದ್ದವರಿಗೆ ಕಡಲೆ ಇಲ್ಲ‌. ಕಡಲೆ ಇದ್ದವರಿಗೆ ಹಲ್ಲಿಲ್ಲ ಎಂಬಂತೆ ಹಣವಿದ್ದವರಿಗೆ ಆರೋಗ್ಯ ಇರುವುದಿಲ್ಲ‌. ಇವರಿಗೆ ಎಲ್ಲಾ ಇರುತ್ತದೆ. ಆದರೆ ಅನುಭವಿಸಲು ಆರೋಗ್ಯವೇ ಸರಿ ಇರುವುದಿಲ್ಲ. ಇನ್ನು ಇರಲಿ ಈ ಆಹಾರ ಕ್ರಮದ ಬಗ್ಗೆ ಸೂಕ್ತ ಮಾರ್ಗದರ್ಶನವೇ ಇರುವುದಿಲ್ಲ. ಹಸಿವು ಆಗದೇ ಇದ್ದರು ಕೂಡ ಏನೋ ಬಾಯಿ ಚಪಲಕ್ಕಾಗಿ ತಿನ್ನುವವರು ಕೂಡ ಇದ್ದಾರೆ. ಆದರೆ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗದರೆ ಈ ಆಹಾರ ಕ್ರಮದ ಬಗ್ಗೆ ಯಾವ ರೀತಿಯ ಕಾಳಜಿ ವಹಿಸಬೇಕು ಎಂಬುದನ್ನು ತಿಳಿಯೋಣ.

ಸಾಮಾನ್ಯವಾಗಿ ಬೆಳಿಗ್ಗೆ ಕೊಂಚ ಜಾಸ್ತಿನೇ ಆಹಾರ ಸೇವನೆ ಮಾಡಬೇಕಾಗಿರುತ್ತದೆ. ಏಕೆಂದರೆ ರಾತ್ರಿ ಊಟವಾದ ಬಳಿಕ ನಿರಂತರವಾಗಿ ದೇಹ ವಿಶ್ರಾಂತಿ ಸ್ಥಿತಿಯಲ್ಲಿರುತ್ತದೆ. ಏಳೆಂಟು ಗಂಟೆಗಳ ಕಾಲ ನಿದ್ದೆಯ ನಂತರ ದೇಹ ಮತ್ತೆ ಸಕ್ರೀಯವಾಗಿ ತೊಡಗಿಕೊಳ್ಳಬೇಕು ಅಂದರೆ ಅದಕ್ಕೆ ಶಕ್ತಿ ಅಗತ್ಯವಾಗಿರುತ್ತದೆ. ಹಾಗಾಗಿ ಹೆಚ್ಚಿನ ಆಹಾರದ ಅಗತ್ಯವಾಗಿರುತ್ತದೆ. ಮಧ್ಯಾಹ್ನ ಕೆಲಸ ಮಾಡಿ ದಣಿದ ದೇಹಕ್ಕೆ ತುಸು ಹೆಚ್ಚೆ ಆಹಾರ ಸೇವನೆ ಇರಲೇಬೇಕಾಗಿರುತ್ತದೆ. ಆದರೆ ಕೆಲವರು ಮಧ್ಯಾಹ್ನ ಸಮಯ ನಿದ್ದೆ ಮಾಡಬಾರದು ಎಂದೇಳಿದರೆ ಇನ್ನೂ ಕೆಲವರು ಮಧ್ಯಾಹ್ನದ ಸಮಯದಲ್ಲಿ ನಿದ್ದೆ ಮಾಡುವದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಇದು ಅವರವರ ನಂಬಿಕೆಯನುಸಾರವಾಗಿ ಇರುತ್ತದೆ. ಇದೀಗ ರಾತ್ರಿಯ ಸಮಯದಲ್ಲಿ ಅಲ್ಪ ಆಹಾರ ಸೇವನೆ ಮಾಡಿದರೆ ಉತ್ತಮ ಎಂದು ತಿಳಿಸುತ್ತಾರೆ.

ಏಕೆಂದರೆ ರಾತ್ರಿಯ ಸಂಧರ್ಭದಲ್ಲಿ ಊಟವಾದ ಬಳಿಕ ಯಾವುದೇ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುವುದಿಲ್ಲ. ಹಾಗಾಗಿ ಸೇವಿಸಿದಂತಹ ಆಹಾರ ಜೀರ್ಣವಾಗುವುದಿಲ್ಲ. ಆದ್ದರಿಂದ ರಾತ್ರಿಯ ಊಟ ಯಾವಾಗಲು ಕಡಿಮೆ ಇದ್ದರೆ ಸೂಕ್ತ ಎಂಬುದು ವೈದ್ಯರ ಸಲಹೆ ಆಗಿರುತ್ತದೆ. ಇನ್ನು ಆಹಾರ ಕ್ರಮದಲ್ಲಿ ಯಾವ ರೀತಿಯ ನಿಯಮಗಳನ್ನ ಅನುಸರಿಸಬೇಕು ಎಂದು ತಿಳಿಯುವುದಾದರೆ ರಾತ್ರಿಯ ಊಟವನ್ನು ನಾವು ಮಲಗುವ ಎರಡು ಗಂಟೆಗಳ ಮುನ್ನ ಸೇವಿಸಬೇಕು. ಊಟವಾದ ಬಳಿಕ ತಕ್ಷಣ ಮಲಗುವ ಹವ್ಯಾಸ ತ್ಯಜಿಸಬೇಕು. ರಾತ್ರಿಯ ಊಟದ ನಂತರ ಕನಿಷ್ಟ ಅಂದರು ಕೂಡ ಅರ್ಧ ಗಂಟೆಗಳ ಕಾಲ ವಾಕಿಂಗ್ ಮಾಡುವುದು ಸೂಕ್ತವಾಗಿರುತ್ತದೆ. ನೀವು ಏನಾದರು ಊಟವಾದ ತಕ್ಷಣ ಮಲಗಿದರೆ ನಿಮಗೆ ಜೀರ್ಣಕ್ರಿಯೆ ಹೊಟ್ಟೆ ದುಬ್ಬರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಊಟವಾದ ಬಳಿಕ ನಿಮ್ಮ ಮನೆಯಂಗಳದಲ್ಲಿಯೇ ಒಂದರ್ಧ ತಾಸು ತಿರುಗಾಡಿದರೆ ದೇಹಕ್ಕೆ ವ್ಯಾಯಾಮ ಆದಂತೆ ಆಗುತ್ತದೆ. ಪ್ರಮುಖವಾಗಿ ಯಾವುದೇ ಕಾರಣಕ್ಕೂ ಊಟವಾದ ನಂತರ ಜಂಕ್ ಫುಡ್ ಮತ್ತು ಧೂಮಪಾನ ಮಾಡಬೇಡಿ ಇದರಿಂದ ನಿಮ್ಮ ಎದೆಯುರಿಗೆ ಕಾರಣವಾಗುತ್ತದೆ. ಜೊತೆಗೆ ಊಟವಾದ ಬಳಿಕ ಕಾಫಿ ಟೀ ಸೇವನೆ ಮಾಡಲು ಹೋಗಬೇಡಿ. ಇದರಿಂದ ನಿಮಗೆ ನಿದ್ರೆಗೆ ತೊಂದರೆ ಆಗುತ್ತದೆ. ಕೆಲವರು ಊಟವಾದ ನಂತರ ಬಾಳೆ ಹಣ್ಣನ್ನ ತಿನ್ನಬೇಕು ಎಂದು ಹೇಳುತ್ತಾರೆ. ಆದರೆ ಇದು ಅವೈಜ್ಞಾನಿಕವಾದುದು. ಅದರ ಬದಲು ಊಟ ಮಾಡುವ ಮುನ್ನ ಅಂದರೆ ಕನಿಷ್ಟ ಒಂದು ತಾಸು ಮುನ್ನ ಬಾಳೆ ಹಣ್ಣನ್ನ ಸೇವಿಸಿದರೆ ಉತ್ತಮ ಎಂದು ತಿಳಿಸುತ್ತಾರೆ ಆಹಾರ ತಜ್ಞರು.

%d bloggers like this: