ರಚಿತಾ ರಾಮ್ ಅವರ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ರೆಡಿ

ಡ್ರೈವರನ್ನ ಹತ್ಯೆ ಮಾಡಿರುವ ನಟಿ ರಚಿತಾ ರಾಮ್ ಪೊಲೀಸರಿಗೆ ಸಿಕ್ಕಿ ಬೀಳ್ತಾರಾ, ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಬಹಳ ವರ್ಷಗಳ ನಂತರ ಥ್ರಿಲ್ಲರ್ ಜಾನರ್ ಹೊಂದಿರುವ ಸಿನಿಮಾಗಳು ಆರಂಭವಾಗಿವೆ. ಸಾಮಾನ್ಯವಾಗಿ ಪ್ರೀತಿ, ಪ್ರೇಮ ಫ್ಯಾಮಿಲಿ ಎಮೋಶನ್ ಜೊತೆಗೆ ಒಂದಷ್ಟು ಆಕ್ಷನ್ ಕಥಾಹಂದರ ಹೊಂದಿರುವ ಸಿನಿಮಾಗಳು ಹೆಚ್ಚಿರುವ ಸಂಧರ್ಭದಲ್ಲಿ ಹೀಗೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವೊಂದು ಕನ್ನಡದಲ್ಲಿ ಸಿದ್ದವಾಗಿದೆ. ಈ ರೊಮ್ಯಾಂಟಕ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದ ಹೆಸರು ಲವ್ ಯೂ ರಚ್ಚು. ಲವ್ ಯೂ ರಚ್ಚು ಎಂಬ ಚಿತ್ರದ ಟೈಟಲ್ ತಿಳಿಸುವಂತೆ ಈ ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿಚಾ ರಾಮ್ ನಾಯಕಿ ನಟಿ‌.

ನಾಯಕ ನಟರಾಗಿ ಕೃಷ್ಣ ಅಜಯ್ ರಾವ್ ಇದೇ ಮೊದಲ ಬಾರಿಗೆ ರಚ್ಚು ಜೊತೆ ಅಜಯ್ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಈ ಲವ್ ಯೂ ರಚ್ಚು ಚಿತ್ರದ ಮುದ್ದು ನೀನು ಎಂಬ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಈ ಹಾಡು ಇದೀಗ ಸೂಪರ್ ಹಿಟ್ ಆಗಿದ್ದು, ಈ ಹಾಡನ್ನು ಬಹುತೇಕ ಯುವ ಪ್ರೇಮಿಗಳು ರಿಂಗ್ ಟೋನ್ ಆಗಿ ಆಯ್ಕೆಮಾಡಿಕೊಂಡಿದ್ದಾರೆ. ಇನ್ನು ಇದೀಗ ಲವ್ ಯೂ ರಚ್ಚು ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ನಲ್ಲಿ ಅಜಯ್ ಮತ್ತು ರಚಿತಾ ರಾಮ್ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಟ್ರೇಲರ್ ನಲ್ಲಿ ರಚಿತಾ ರಾಮ್ ಮತ್ತೂ ಅಜಯ್ ರಾವ್ ಅವರು ಪ್ರೀತಿಸಿ ಮದುವೆಯಾಗಿ ಸುಂದರ ಸಾಂಸಾರಿಕ ಜೀವನ ನಡೆಸುತ್ತಿರುವಾಗ ಡ್ರೈವರ್ ರಚ್ಚು ಮೇಲೆ ಕಣ್ಣಿಟ್ಟಾಗ ಅವನಿಂದ ರಕ್ಷಣೆಗೆ ರಚ್ಚು ಅವನ ತಲೆ ಹೊಡೆಯುತ್ತಾಳೆ. ಇದರಿಂದ ಡ್ರೈವರ್ ಸವನ್ನಪ್ಪುತ್ತಾನೆ. ಆಕಸ್ಮಿಕವಾಗಿ ಕೊಲೆ ಮಾಡಿದ ನಾಯಕಿ ರಚ್ಚು ಈ ವಿಷಯವನ್ನು ನಾಯಕ ನಟನಿಗೆ ತಿಳಿಸಿ ಈ ಕೊಲೆಯಿಂದ ರಚಿತಾ ರಾಮ್ ಹೇಗೆ ಸೇಫ್ ಆಗುತ್ತಾರೆ ಎಂಬು ಕಥೆಯ ಎಳೆಯನ್ನ ಟ್ರೇಲರ್ ಬಿಚ್ಚಿಟ್ಟದೆ. ಲವ್ ಯೂ ರಚ್ಚು ಚಿತ್ರದ ಟ್ರೇಲರ್ ನೋಡಿದ ಸಿನಿ ಪ್ರೇಕ್ಷಕರಿಗೆ ಕುತೂಹಲ ಮೂಡಿದ್ದು, ಚಿತ್ರವನ್ನು ನೋಡಲೇಬೇಕು ಎಂಬ ರೀತಿಯಲ್ಲಿ ಟ್ರೇಲರ್ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ.

ಇನ್ನು ಲವ್ ಯೂ ರಚ್ಚು ಸಿನಿಮಾ ಇದೇ ಡಿಸೆಂಬರ್ 31 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ‌. ಲವ್ ಯೂ ರಚ್ಚು ಸಿನಿಮಾಗೆ ನಿರ್ದೇಶಕ ಶಶಾಂಕ್ ಕಥೆ ಬರೆದಿದ್ದು, ಶಂಕರ್.ಎಸ್ ರಾಜ್ ಎಂಬುವವರು ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಜಿ ಸಿನೆಮಾಸ್ ಬ್ಯಾನರಡಿಯಲ್ಲಿ ರಾಜಾಹುಲಿ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದೇಶ್ ಪಾಂಡೆ ಬಂಡವಾಳ ಹೂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ರಾಗ ಸಂಯೋಜನೆ ಮಾಡಿದ್ದಾರೆ. ಇನ್ನು ತಾರಾಗಣದಲ್ಲಿ ಕೃಷ್ಣ ಅಜಯ್ ರಾವ್, ರಚಿತಾ ರಾಮ್, ಅಚ್ಯುತ್ ಕುಮಾರ್, ಬಿ.ಸುರೇಶ, ಅರುಣ್ ಗೌಡ ಮತ್ತು ನಿರ್ದೇಶಕ ರಾಘು ಶಿವಮೊಗ್ಗ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

%d bloggers like this: