ರಾಧೆ ಶ್ಯಾಮ್ ಚಿತ್ರವನ್ನು ಓಟಿಟಿ ಅಲ್ಲಿ ಬಿಡುಗಡೆ ಮಾಡಲು ಬರೊಬ್ಬರಿ 400 ಕೋಟಿ ಕೊಡುತ್ತೇವೆ ಎಂದ ಕಂಪನಿ

ಟಾಲಿವುಡ್ ಸೂಪರ್ ಸ್ಟಾರ್ ನಟ ಪ್ರಭಾಸ್ ಸಿನಿಮಾಗೆ ಇದೀಗ ನೂರಾರು ಕೋಟಿಯ ಆಫರ್ ಹರಿದು ಬರುತ್ತಿದೆ. ಬಾಹುಬಲಿ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆದಂತಹ ನಟ ಪ್ರಭಾಸ್ ಅವರ ಮೇಲೆ ನಿರ್ಮಾಪಕರು ಸಾವಿರ ಕೋಟಿ ಬಂಡವಾಳ ಹೂಡಲು ಸಿದ್ದರಿರುತ್ತಾರೆ. ಸದ್ಯಕ್ಕೆ ನಟ ಪ್ರಭಾಸ್ ಅವರು ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರೊಟ್ಟಿಗೆ ಸಲಾರ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಸಿನಿಮಾ ತಂಡ ತೊಡಗಿಸಿಕೊಂಡಿದೆ. ಅಂತೆಯೇ ಇದೀಗ ಹಾಡೊಂದರ ಮೂಲಕ ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಹಿಂದಿಯ ರಾಧೆ ಶ್ಯಾಮ್ ಸಿನಿಮಾಗೆ ಓಟಿಟಿ ಸಂಸ್ಥೆಯೊಂದರಿಂದ ಬಂಪರ್ ಆಫರ್ ಸಿಕ್ಕಿದೆ.

ಬಾಲಿವುಡ್ ನಿರ್ದೇಶಕ ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಬರೋಬ್ಬರಿ ಮುನ್ನೂರೈವತ್ತು ಕೋಟಿ ಬಿಗ್ ಬಜೆಟ್ ನಲ್ಲಿ ಅದ್ದೂರಿಯಾಗಿ ಸಿದ್ದವಾಗುತ್ತಿರುವ ರಾಧೇ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈ ರಾಧೆ ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಕರ್ನಾಟಕ ಮೂಲದ ಕರಾವಳಿ ಬೆಡಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇದೀಗ ಇನ್ನು ಈ ಬಹುಕೋಟಿ ವೆಚ್ಚದ ರಾಧೆ ಶ್ಯಾಮ್ ಸಿನಿಮಾ ಇದೇ ಜನವರಿ 14. ರಂದು ಸಂಕ್ರಾಂತಿ ಹಬ್ಬಕ್ಕೆ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿತ್ತು. ಆದರೆ ಕೋವಿಡ್ ಮೂರನೆ ಅಲೆಯು ಆರಂಭವಾಗಿದ್ದು ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಇದರ ಬೆನ್ನಲ್ಲೇ ಓಮೈಕ್ರಾನ್ ವೈರಸ್ ಕೂಡ ಆತಂಕಕಾರಿಯಾಗಿ ಹರಡುತ್ತಿದ್ದು ಕಳವಳಕಾರಿ ವಾತಾವರಣ ನಿರ್ಮಾಣ ಮಾಡಿದೆ. ದೇಶದ ವಿವಿಧ ಆಯಾ ರಾಜ್ಯ ಸರ್ಕಾರಗಳು ಓಮೈಕ್ರಾನ್ ವೈರಸ್ ಮತ್ತು ಕೋವಿಡ್ ಪ್ರಕರಣಗಳನ್ನ ತಗ್ಗಿಸಲು ಲಾಕ್ ಡೌನ್ ಘೋಷಣೆ ಮಾಡಿವೆ. ಅದರಂತೆ ರಾಜ್ಯದಲ್ಲಿಯೂ ಕೂಡ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂವನ್ನು ಸಹ ಜಾರಿ ಮಾಡಿದೆ. ಇದರ ಜೊತೆಗೆ ಸಿನಿಮಾ ಮಂದಿರಗಳಿಗೆ ಶೇಕಡಾ 50 ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ರಾಧೆ ಶ್ಯಾಮ್ ಚಿತ್ರದ ರಿಲೀಸ್ ಡೇಟ್ ಮುಂದೂಡಲಾಗಿದೆ. ಇಂತಹ ಸಂಧರ್ಭದಲ್ಲಿ ರಾಧೇ ಶ್ಯಾಮ್ ಸಿನಿಮಾಗೆ ಬರೋಬ್ಬರಿ ನಾಲ್ಕು ನೂರು ಕೋಟಿ ನೀಡಲು ಮುಂದೆ ಬಂದಿದೆಯಂತೆ.

ಆದರೆ ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ‌. ಅವರ ಚಿತ್ರಗಳನ್ನು ದೇಶಾದ್ಯಂತ ಜೊತೆಗೆ ಹೊರ ದೇಶದಲ್ಲಿಯೂ ಕೂಡ ನೋಡುತ್ತಾರೆ. ಈ ಸಿನಿಮಾವನ್ನು ಥಿಯೇಟರ್ ನ ಲ್ಲಿಯೇ ರಿಲೀಸ್ ಮಾಡಬೇಕು ಎಂಬುದು ನಿರ್ದೇಶಕರ ಆಲೋಚನೆ. ಆದರೆ ಕೋವಿಡ್ ಲಾಕ್ ಡೌನ್ ಪರಿಣಾಮ ಚಿತ್ರ ಮಂದಿರಗಳಿಗೆ ಸಂಪೂರ್ಣ ಅವಕಾಶ ಇಲ್ಲದ ಕಾರಣ ರಾಧೆ ಶ್ಯಾಮ್ ಚಿತ್ರವನ್ನು ಓಟಿಟಿಗೆ ಮಾರಾಟ ಮಾಡುವುದು ಸೂಕ್ತ ಎಂಬುದು ಚಿತ್ರತಂಡದ ಅಭಿಪ್ರಾಯವೂ ಇದೆ. ಒಟ್ಟಾರೆಯಾಗಿ ಎಲ್ಲಿ ರಿಲೀಸ್ ಮಾಡಬೇಕು ಎಂದು ಚಿತ್ರತಂಡ ತಿಳಿಸಲಿದೆ. ಇನ್ನು ನಟ ಪ್ರಭಾಸ್ ಅವರು ಬಾಲಿವುಡ್ ಖ್ಯಾತ ನಿರ್ದೇಶಕ ಓಂ ರಾವುತ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸುತ್ತಿದ್ದಾರೆ.

%d bloggers like this: