ರೈತರ ಬೆಂಬಲಕ್ಕೆ ನಿಲ್ಲದ ಕನ್ನಡ ನಟರ ಬಗ್ಗೆ ಚೇತನ್ ಅವರು ಏನ್ ಹೇಳಿದ್ರು ಗೊತ್ತೇ

ಸಿನಿಮಾ ನಟ ನತಿಯರೆಂದರೆ ಅವರು ಜನರಿಂದಲೇ ಉತ್ತುಂಗದ ಸ್ಥಾನವನ್ನು ತಲುಪಿರುತ್ತಾರೆ, ಹಾಗಾಗಿ ಜನರು ಸಮಸ್ಯೆಗಳು ಎಂದು ನರಳುವಾಗ ಸಹಜವಾಗಿಯೇ ಜನರ ಕಷ್ಟಗಳಿಗೆ ಸ್ಪಂದಿಸುವುದು ಅವರ ಕರ್ತವ್ಯವಾಗಿದೆ. ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಹಿಂದೆ ಕೆಲವು ಬಾರಿ ಜನರ ಬೆನ್ನಿಗೆ ನಿಂತಿದ್ದಾರೆ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಆದರೆ ಇಡೀ ದೇಶದ ಬೆನ್ನೆಲುಬು ಆಗಿರುವಂತಹ ರೈತ ಈಗ ಸಂಕಷ್ಟಕ್ಕೆ ಸಿಲುಕಿ ದಾಗ ನಮ್ಮ ನಟರು ಅವರಿಗೆ ನೈತಿಕ ಬೆಂಬಲ ನೀಡಬೇಕಿತ್ತು. ಈಗ ಇದೇ ವಿಷಯಕ್ಕೆ ನಟ ಮತ್ತು ಸಾಮಾಜಿಕ ಕಾರ್ಯಕರತರಾಗಿ ಕಾರ್ಯನಿರ್ವಹಿಸುತ್ತಿರುವ ನಟ ಚೇತನ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ಬೀದಿಗೆ ಇಳಿದಿದ್ದಾರೆ.

ನಿನ್ನೆ ದೇಶದ ಎಲ್ಲ ರಾಜ್ಯಗಳಲ್ಲಿ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ರೈತರು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು ಹಾಗಾಗಿ ಭಾರತ ಬಂದ್ ಗೆ ಕರೆ ನೀಡಲಾಗಿತ್ತು. ಇದೇ ವಿಷಯವಾಗಿ ನಟ ಚೇತನ್ ಚಲನಚಿತ್ರ ನಟ ನಟಿಯರ ವಿರುದ್ಧ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮೂಲಕ ಮಾತನಾಡಿದ ಅವರು ರಾಜಕೀಯ ವ್ಯಕ್ತಿಗಳ ಪರ ಚುನಾವಣಾ ಪ್ರಚಾರಕ್ಕೆ ಕ್ಯಾರವಾನ್ ಮಾಡಲು ಬರುವ ನಮ್ಮ ನಟ ನಟಿಯರು, ರೈತ ಸಮಸ್ಯೆ ಎಂದು ಹೋರಾಟಕ್ಕಿಳಿದಾಗ ಯಾರೊಬ್ಬರೂ ಏಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ ಜೊತೆಗೆ ತಮ್ಮ ಶ್ರೀಮಂತ ಗಣ್ಯ ವ್ಯಕ್ತಿಗಳಿಗೆ ಸಂತುಷ್ಟ ಪಡಿಸುವ ಹೀರೋಗಳು ಜನಸಾಮಾನ್ಯರಿಗೆ ಸಹಾಯ ಮಾಡಲು ಏಕೆ ಮುಂದೆ ಬರುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

%d bloggers like this: