ರಾಜಮೌಳಿ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ RRR ಚಿತ್ರದಲ್ಲಿ ಕನ್ನಡದ ಹೆಸರಾಂತ ನಟ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ರಾಜಮೌಳಿ ನಿರ್ದೇಶನದ ಆರ್.ಆರ್ ಆರ್ ಚಿತ್ರದಲ್ಲಿ ಕನ್ನಡದ ಖ್ಯಾತ ನಟರೊಬ್ಬರು ನಟಿಸಿ ಸುದ್ದಿಯಾಗುತ್ತಿದ್ದಾರೆ .ಹೌದು ಈಗಾಗಲೇ ತೆಲುಗಿನ ಸೂಪರ್ ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಚಿತ್ರದಲ್ಲಿ ಸ್ಯಾಂಡಲ್ ವುಡ್ ಬಾದ್ಶಾ ಕಿಚ್ಚ ಸುದೀಪ್ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಎಸ್ಎಸ್ ರಾಜಮೌಳಿ ನಿರ್ದೇಶನದ ಈಗ ಚಿತ್ರದಲ್ಲಿ ಸುದೀಪ್ ಅವರ ನಟನೆ ಕಂಡು ಇಡೀ ಭಾರತೀಯ ಚಿತ್ರರಂಗವೇ ಕಣ್ಣರಳಿಸಿ ನೋಡಿತು. ಇದೀಗ ರಾಜಮೌಳಿ ನಿರ್ದೇಶನದ ಮಲ್ಟಿಸ್ಟಾರರ್ ಸಿನಿಮಾ ಆರ್.ಆರ್.ಆರ್ ಚಿತ್ರದಲ್ಲಿ ಕನ್ನಡದ ಖ್ಯಾತ ಕಲಾ ನಿರ್ದೇಶಕ ನಟ ಅರುಣ್ ಸಾಗರ್ ಕೂಡ ನಟಿಸಿದ್ದಾರೆ.

ತೆಲುಗಿನ ಸ್ಟಾರ್ ನಿರ್ದೇಶಕರಾದ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ, ಬಾಲಿವುಡ್ ಸುಪ್ರಸಿದ್ದ ನಟಿ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ಈ ಆರ್.ಆರ್.ಆರ್ ಚಿತ್ರದಲ್ಲಿ ನಟ ಅರುಣ್ ಸಾಗರ್ ನಟಿಸಿದ್ದಾರೆ. ಅದೂ ಕೂಡ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಇವರಿಬ್ಬರಲ್ಲಿ ಒಂದು ಪಾತ್ರಕ್ಕೆ ಅರುಣ್ ಸಾಗರ್ ಹೆಸರನ್ನು ಇಡುವಂತಹ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಈ ಆರ್‌.ಆರ್.ಆರ್ ಚಿತ್ರದಲ್ಲಿನ ಪಾತ್ರ ಅರುಣ್ ಸಾಗರ್ ಅವರಿಗೆ ಹೊಸದೊಂದು ತಿರುವನ್ನು ನೀಡ‌ಬಹುದು ಎಂದು ಗಾಂಧಿನಗರ ಮಾತಾಡಿಕೊಳ್ಳುತ್ತಿದೆ.

ಇನ್ನು ಈ ಆರ್.ಆರ್.ಆರ್ ಚಿತ್ರದಲ್ಲಿ ಬಾಲಿವುಡ್ ನಟರಾದ ಸ್ಟಾರ್ಸ್ಸ್ ಆದಂತಹ ನಟ ಅಜಯ್ ದೇವಗನ್ ನಟಿ ಆಲಿಯಾ ಭಟ್, ಶ್ರೀಯಾ ಶರಣ್,ರಾಹುಲ್ ರಾಮಕೃಷ್ಣ ಸೇರಿದಂತೆ ಹಾಲಿವುಡ್ ನಟರು ಕೂಡ ನಟಿಸಿದ್ದಾರೆ. ಮುಂದಿನ ವರ್ಷ 2022ರ ಜನವರಿ 7ರಂದು ದೇಶಾದ್ಯಂತ ಬಿಡುಗಡೆಯಾಗುತ್ತದೆ ಎಂದು ತಿಳಿದು ಬಂದಿದೆ. ಡಿವಿವಿ ಎಂಟರ್ಟೈನ್ ಮೆಂಟ್ ಅಡಿಯಲ್ಲಿ ಡಿವಿವಿ ದಾನಯ್ಯ ಅವರು ನಿರ್ಮಾಣ ಮಾಡಿರುವ ಈ ಬಹುಕೋಟಿ ವೆಚ್ಚದ ಆರ್.ಆರ್.ಆರ್ ಸಿನಿಮಾಗೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದು, ಕೆವಿ ವಿಜಯೆಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಈಗಾಗಾಲೇ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಹೇಳಿದಂತೆ ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿಯೂ ಪ್ರಮೋಶನ್ ಗ್ರ್ಯಾಂಡ್ ಆಗಿ ಇರಲಿದ್ದು, ಪ್ರೀಮಿಯರ್ ಇವೆಂಟ್ ಕೂಡ ನಡೆಯಲಿದೆ.

%d bloggers like this: