ರಾಜಸ್ತಾನ್ ರಾಯಲ್ಸ್ ತಂಡದಿಂದ ಹೊರಬರಲಿರುವ ಸ್ಟಾರ್ ಆಟಗಾರ, ಸಿಎಸ್ ಕೆ ತಂಡದ ನಾಯಕನಾಗುವ ಸಾಧ್ಯತೆ

ಐಪಿಎಲ್ ವಿವಿಧ ಫ್ರಾಂಚೈಸಿಗಳಲ್ಲಿ ಕ್ಯಾಪ್ಟನ್ ಬದಲಾವಣೆ, ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಿಂದ ಹೊಸದೊಂದು ಅಪ್ಡೇಟ್ಸ್ ಕೇಳಿ ಬರುತ್ತಿದೆ. ಜಗತ್ತಿನ ಪ್ರತಿಷ್ಠಿತ ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟಿನ ವಿವಿಧ ಪ್ರಾಂಚೈಸಿಗಳು ತಂಡದ ನಾಯಕತ್ವ ಬದಲಾವಣೆಗೆ ಆಲೋಚನೆ ನಡೆಸಿದೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ 15 ನೇ ಆವೃತ್ತಿಗೆ ಆಟಗಾರರನ್ನು ಹರಾಜಿನಲ್ಲಿ ಕೊಳ್ಳುವ ಪ್ರಕ್ರಿಯೆಯೂ ಕೂಡ ಆಗಿದ್ದು, ಇದರಲ್ಲಿ ಅನೇಕ ತಂಡಗಳ ನಾಯಕತ್ವ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಐಪಿಎಲ್ 14 ನೇ ಸೀಸನ್ನಲ್ಲಿ ವಿಜಯ ಪತಾಕೆ ಹಾರಿಸಿದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನದ ಬಗ್ಗೆಯೂ ಕೂಡ ಇದೀಗ ಅಪಸ್ವರ ಕೇಳಿ ಬಂದಿದೆ.

ಪಂಜಾಬ್ ಕಿಂಗ್ಸ್ ತಂಡದ ಕನ್ನಡಿಗ ಕೆ.ಎಲ್.ರಾಹುಲ್ ಅವರು ಈಗಾಗಲೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪಂಜಾಬ್ ತಂಡ ತೊರೆಯುವ ಬಗ್ಗೆ ಮಾಹಿತಿ ಹೊರ ಬಿಟ್ಟಿದ್ದರು. ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ರಾಜಸ್ಥಾನ್ ರಾಯಲ್ಸ್ ತಂಡದಿಂದ ಸಂಜು ಸ್ಯಾಮ್ಸನ್ ಕೂಡ ನಾಯಕ ಸ್ಥಾನ ತೊರೆಯುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಸಂಜು ಸ್ಯಾಮ್ಸನ್ ಅವರನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕರೆತರುವ ಪ್ರಯತ್ನ ಕೂಡ ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಉತ್ತಮ ಬ್ಯಾಟಿಂಗ್ ಆಟಗಾರನಾಗಿ ಸಂಜು ಸ್ಯಾಮ್ಸನ್ ಸೂಕ್ತವಾಗಿರುತ್ತಾರೆ ಎಂಬುದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಲೆಕ್ಕಾಚಾರವಾಗಿದೆ.

ಇದರ ನಡುವೆ ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಸಹ ತಮ್ಮ ತಂಡದಿಂದ ಹೊರ ಬರಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಸಂಜು ಸ್ಯಾಮ್ಸನ್ ಕಳೆದ ಒಂದಷ್ಟು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ನಾಯಕನಾಗಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಆದರೂ ಕೂಡ ಸಂಜು ಸ್ಯಾಮ್ಸನ್ ಉತ್ತಮ ವಿಕೆಟ್ ಕೀಪರ್, ಉತ್ತಮ ಬ್ಯಾಟರ್ ಎಂಬ ಹೆಸರನ್ನ ಹೊಂದಿದ್ದಾರೆ.

ಇದರಿಂದಾಗಿ ಸಂಜು ಸ್ಯಾಮ್ಸನ್ ತಮ್ಮ ಹೆಸರನ್ನ ಹರಾಜು ಪ್ರಕ್ರಿಯೆಯಲ್ಲಿ ನೋಂದಾಯಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ. ಒಂದು ವೇಳೆ ಸಂಜು ಸ್ಯಾಮ್ಸನ್ ಅವರು ಹರಾಜಿನಲ್ಲಿ ಖರೀದಿಗೆ ಸಿಕ್ಕರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕರೆ ತರುವ ಆಲೋಚನೆ ಸಿಎಸ್ ಕೆ ಫ್ರಾಂಚೈಸಿಗಿದೆಯಂತೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ ಅವರಿಗೆ ತಕ್ಕಂತೆ ಮತ್ತೊಬ್ಬ ಆಟಗಾರರನ್ನ ಸಿಎಸ್ ಕೆ ತಂಡದಲ್ಲಿ ತಯಾರು ಮಾಡುವ ಯೋಚನೆಯ ನಿಟ್ಟಿನಲ್ಲಿ ಸಂಜು ಸ್ಯಾಮ್ಸನ್ ಅವರನ್ನ ಆಯ್ಕೆ ಮಾಡಿಕೊಳ್ಳುವ ಇಚ್ಚೆಯನ್ನ ವ್ಯಕ್ತಪಡಿಸಿದೆ.

%d bloggers like this: