ರಾಜಸ್ತಾನ ತಂಡದಿಂದ ಕನ್ನಡಿಗ ರಾಬಿನ್ ಉತ್ತಪ್ಪ ಹೊರಕ್ಕೆ, ಈ ತಂಡ ಸೇರಿದ ಉತ್ತಪ್ಪ

ರಾಜಸ್ಥಾನ್ ರಾಯಲ್ಸ್ ತಂಡದಿಂದ ರಾಬಿನ್ ಉತ್ತಪ್ಪಗೆ ಗೇಟ್ ಪಾಸ್! 2020ರ ಐಪಿಎಲ್ ಕ್ರಿಕೆಟ್ ಪಂದ್ಯಗಳು ಮುಗಿದು ಕೆಲವೇ ತಿಂಗಳು ಕಳೆದಿವೆ. ಈಗಾಗಲೇ ಐಪಿಎಲ್ನ ವಿವಿಧ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲ ಪಡಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮತಂಡದ ಆಟಗಾರರಲ್ಲಿ ಭಾರಿ ಬದಲಾವಣೆ ಮಾಡುತ್ತಿವೆ. ಕರ್ನಾಟಕದ ಕರಾವಳಿ ಹುಡುಗ ರಾಬಿನ್ ಉತ್ತಪ್ಪ ಕಳೆದ ವರ್ಷ ಐಪಿಎಲ್ ಹರಾಜಿನಲ್ಲಿ ಮೂರು ಕೋಟಿಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಪಾಲಾಗಿದ್ದರು. ಅದಕ್ಕೂ ಮೊದವು ರಾಬಿನ್ ಆರ್ಸಿಬಿ ತಂಡ, ಪುಣೆ ವಾರಿಯರ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಟವಾಡಿದ್ದರು.

ಇದುವರೆಗೂ ಐಪಿಎಲ್ 13 ಆವೃತ್ತಿಗಳಲ್ಲಿ ಆಟವಾಡಿರುವ ರಾಬಿನ್ ಉತ್ತಪ್ಪ, 129.99ರ ಸ್ಟ್ರೈಟ್ ರೇಟ್ ಹೊಂದಿದ್ದಾರೆ. 4607 ರನ್ ಗಳಲ್ಲಿ 24 ಆಫ್ ಸೆಂಚುರಿ ಬಾರಿಸಿದ್ದಾರೆ. ರಾಬಿನ್ ಉತ್ತಪ್ಪ ಪ್ರಮುಖವಾಗಿ ಕೆಕೆಆರ್ ತಂಡ ಎರಡು ಬಾರಿ ಚಾಂಪಿಯನ್ ಪಟ್ಟ ಪಡೆದಿರುವುದರಲ್ಲಿ ಇವರ ಕೊಡುಗೆ ಅಪಾರವಾದ್ದದು ಎಂದು ಹೇಳಬಹುದು. 2014ರ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ತಂಡದ ಪರವಾಗಿ 660 ರನ್ ಬಾರಿಸುವುದರ ಮೂಲಕ ಆರೆಂಜ್ ಕ್ಯಾಪ್ ಪಡೆದಿದ್ದರು.

ಆದರೆ ಇದೀಗ ಐಪಿಎಲ್ ಹರಾಜಿನಲ್ಲಿ ರಾಬಿನ್ ಉತ್ತಪ್ಪ ಆಲ್ ಕ್ಯಾಷ್ ಡೀಲ್ ಮುಖಾಂತರ ಚೆನ್ನೈ ಸೂಪರ್ ಕಿಂಗ್ಸ್ ಪ್ರಾಂಚೈಸಿ ಪಾಲಾಗಿದ್ದಾರೆ. ಇದರ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಜೊತೆಗಿನ ಭಾಂಧವ್ಯ ಉತ್ತಮವಾಗಿತ್ತು, ಇದು ಮರೆಯಲಾಗದಂತಹ ಅವಿಸ್ಮರಣೀಯವಾದ ಅನುಭವ ಭಾಂಧವ್ಯ ಎಂದು ಬರೆದುಕೊಂಡಿದ್ದಾರೆ. ಜೊತೆಗೆ 2021ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅಟವಾಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

%d bloggers like this: