ರಾಜ್ಯದಲ್ಲಿ ಶಾಲಾ ಕಾಲೇಜು ಬಂದ್, ಥಿಯೇಟರ್ ಅಲ್ಲಿ ಅರ್ಧ ಜನಕ್ಕೆ ಅಷ್ಟೇ ಅವಕಾಶ, ಹೊಸ ಮಾರ್ಗಸೂಚಿ ನೋಡಿ

ರಾಜ್ಯದಲ್ಲಿ ಕೊರೋನ ವೈರಸ್ ಜೊತೆಗೆ ಓಮೈಕ್ರಾನ್ ವೈರಸ್ ಸ್ಪೋಟ, ಇತ್ತೀಚೆಗೆ ಕಳೆದ ಹದಿನೈದು ದಿನಗಳಿಂದೀಚೆಗೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನ ಕಳೆದಂತೆ ಗಣನೀಯವಾಗಿ ಏರಿಕೆ ಕಂಡಿದೆ. ಇದರ ಜೊತೆಗೆ ಕೊರೋನ ವೈರಸ್ ಗಿಂತ ಮೂರು ಪಟ್ಟು ಓಮೈಕ್ರಾನ್ ವೈರಸ್ ಪ್ರಕರಣಗಳು ದಾಖಲಾಗುತ್ತಿದೆ. ಮಂಗಳವಾರದಂದು ರಾಜ್ಯದಲ್ಲಿ ಬರೋಬ್ಬರಿ 147 ಓಮೈಕ್ರಾನ್ ವೈರಸ್ ಪ್ರಕರಣಗಳು ದಾಖಲಾಗಿವೆ. ಕೋವಿಡ್ ಪ್ರಕರಣಗಳು ವಾರದಿಂದೀಚೆಗೆ ಎರಡರಷ್ಟಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಆತಂಕಕಾರಿ ವಾತಾವರಣ ಸೃಷ್ಟಿಯಾಗುತ್ತಿದೆ. ಓಮೈಕ್ರಾನ್ ವೈರಸ್ ಮತ್ತು ಕೋವಿಡ್ ಪ್ರಕರಣಗಳು ಏರಿಕೆ ಕಳವಳಕಾರಿಯಾದ ಕಾರಣ ರಾಜ್ಯ ಸರ್ಕಾರ ನೂತನ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಬಾರಿ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂವನ್ನು ಸಹ ಜಾರಿ ಮಾಡಿ ಆದೇಶ ಹೊರಡಿಸಿದೆ. ಜನವರಿ 6 ರಿಂದ ಮುಂದಿನ ಎರಡು ವಾರಗಳ ಕಾಲ ಶಾಲೆಗಳು ಬಂದ್ ಆಗಲಿದೆ. ಶಾಲೆಗಳ ಬಂದ್ ಆದೇಶ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು ಹತ್ತನೇ ತರಗತಿ ಮತ್ತು ಹನ್ನೋಂದನೇ ತರಗತಿ ಹೊರತು ಪಡಿಸಿ ಉಳಿದಂತೆ ಎಲ್ಲಾ ತರಗತಿಗಳು ಆನ್ಲೈನ್ ಕ್ಲಾಸ್ ಮುಖಾಂತರ ನಡೆಯಲಿದೆ. ರಾಜ್ಯ ಸರ್ಕಾರ ಹೊರಡಿಸಿದ ನೂತನ ಮಾರ್ಗಸೂಚಿಯು ಜನವರಿ 5 ರ ರಾತ್ರಿ 10 ಗಂಟೆಯಿಂದ ಜನವರಿ 19 ರ ಬೆಳಿಗ್ಗೆ 5 ಗಂಟೆಯವರೆಗೆ ಇರಲಿದೆ. ಈ ಕಠಿಣ ಮಾರ್ಗಸೂಚಿಯಲ್ಲಿ ನೈಟ್ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಇರಲಿದೆ.

ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ. ವಾರದಲ್ಲಿ ಐದು ದಿನಗಳ ಕಾಲ ಮಾತ್ರ ಕಛೇರಿಗಳು ಕಾರ್ಯ ನಿರ್ವಹಿಸಲಿವೆ. ಕಛೇರಿಗಳಲ್ಲಿ ಶೇಕಡಾ 50 ರಷ್ಟು ಸಿಬ್ಬಂದಿಗಳು ಮಾತ್ರ ಕೆಲಸ ಮಾಡಬಹುದಾಗಿರುತ್ತದೆ. ಶನಿವಾರ ಮತ್ತು ಭಾನುವಾರ ಅವಶ್ಯಕತೆಗಳಿಗೆ ತಕ್ಕಂತೆ ಸಾರಿಗೆ-ಸಂಪರ್ಕಗಳು ಇರಲಿದೆ. ಇನ್ನು ಶೈಕ್ಷಣಿಕವಾಗಿ ಹತ್ತನೇ, ಹನ್ನೊಂದನೇ, ಹನ್ನೆರಡನೇ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿಧ್ಯಾರ್ಥಿಗಳಿಗೆ ಆಫ್ ಲೈನ್ ತರಗತಿಗಳು ನಡೆಯಲಿದೆ.

ಇನ್ನು ಉಳಿದಂತೆ ಪಬ್ ಬಾರ್ ಅಂಡ್ ರೆಸ್ಟೋರೆಂಟ್, ಸಿನಿಮಾ ಮಂದಿರಗಳು, ರಂಗ ಮಂದಿರಗಳು, ಈಜುಕೊಳ ಗಳಲ್ಲ ಶೇಕಡಾ 50 ರಷ್ಟು ಮಾತ್ರ ಅವಕಾಶ ಕಲ್ಪಿಸಿದೆ. ಜೊತೆಗೆ ಇಲ್ಲಿ ಬರುವವರು ಕೋವಿಡ್ ಲಸಿಕೆ ಎರಡು ಡೋಸ್ ಅನ್ನು ಕೂಡ ಕಡ್ಡಾಯವಾಗಿ ಪಡೆದಿರಲೇಬೇಕಾಗಿರುತ್ತದೆ. ಮದುವೆಗೆ ನೂರು ಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ವೀಕೆಂಡ್ ಶಾಪಿಂಗ್ ಮಾಲ್ ಗಳಿಗೆ ನಿರ್ಬಂಧ ಏರಲಾಗಿದೆ. ಯಾವುದೇ ರ್ಯಾಲಿ ಸಮಾರಂಭ ಪ್ರತಿಭಟನೆಗೆ ಅವಕಾಶ ಇರುವುದಿಲ್ಲ‌.

%d bloggers like this: