ರಕ್ಷಿತ್ ಶೆಟ್ಟಿ ಅವರ ಜೊತೆ ಕೈ ಜೋಡಿಸಿದ ತೆಲುಗು ನಟ, 777 ಚಾರ್ಲಿಯನ್ನು ತೆಲುಗು ರಾಜ್ಯದಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿ ವಹಿಸಿಕೊಂಡ ಖ್ಯಾತ ತೆಲುಗು ನಟ

ಯಾವಾಗ ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ನೆರೆ ರಾಜ್ಯಗಳಲ್ಲಿ ಉತ್ತಮ ಹೆಸರು ಗಳಿಸ್ತೋ ಅಂದಿನಿಂದ ಮೊದಲಿಗಿಂತ ಹೆಚ್ಚು ಸ್ಟಾರ್ ನಟರಲ್ಲಿ ನಾವೆಲ್ಲಾ ಒಂದೇ ಎಂಬ ಮನೋಭಾವ ಮೂಡಿದಂತಿದೆ. ಅಕ್ಕ ಪಕ್ಕದ ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್ ನಲ್ಲಿ ನಮ್ಮ ಕನ್ನಡದ ನಟರು, ನಟಿಯರು ಅವಕಾಶ ಗಿಟ್ಟಿಸಿಕೊಂಡು ಮಿಂಚುತ್ತಿದ್ದಾರೆ. ಆಗ ಸಾಮಾನ್ಯವಾಗಿ ಪರಸ್ಪರ ಅಂತರ್ಭಾಷೆಯ ಕಲಾವಿದರಲ್ಲಿ ಉತ್ತಮ ಸ್ನೇಹ ಸಂಬಂಧ ಬೆಳೆಯುತ್ತದೆ. ಅದರಂತೆ ಭಾಷೆಯ ಅಂಗಿಲ್ಲದೆ ಗಡಿ ಮಿತಿ ಹಾಕಿಕೊಳ್ಳದೆ ಒಬ್ಬರ ಸಿನಿಮಾಗಳನ್ನ ಮತ್ತೊಬ್ಬರು ನೋಡಿ ಮೆಚ್ಚುಗೆಯ ನುಡಿಗಳನ್ನ ನುಡಿಯುತ್ತಾರೆ. ಚಿತ್ರದ ಬಗ್ಗೆ ಪ್ರೋತ್ಸಾಹದ ಮಾತುಗಳನ್ನ ತಿಳಿಸುತ್ತಾರೆ. ಅದೇ ರೀತಿಯಾಗಿ ಇದೀಗ ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರ ಅಭಿನಯ ಇರುವ 777 ಚಾರ್ಲಿ ಚಿತ್ರವನ್ನು ಟಾಲಿವುಡ್ ಬಾಹುಬಲಿ ಸಿನಿಮಾ ಖ್ಯಾತಿಯ ಜನಪ್ರಿಯ ನಟ ರಾಣಾ ದಗ್ಗುಬಾಟಿ ನೋಡಿ 777 ಚಾರ್ಲಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

777 ಚಾರ್ಲಿ ಚಿತ್ರವನ್ನ ಕಿರಣ್ ರಾಜ್ ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ತಮ್ಮ ಪರಮ್ವಾ ಸ್ಟೂಡಿಯೋ ಬ್ಯಾನರಡಿಯಲ್ಲಿ ಗುಪ್ತಾ ಅವರೊಟ್ಟಿಗೆ ಸೇರಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ 777 ಚಾರ್ಲಿ ಸಿನಿಮಾ ಇದೇ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಬ್ಜೆಕ್ಟ್ ಇರುವ ಕಾರಣ ಪಂಚ ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆಯಂತೆ. ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಅವರು 777 ಚಾರ್ಲಿ ಚಿತ್ರವನ್ನ ಪ್ರೆಸೆಂಟ್ ಮಾಡಲಿದ್ದಾರೆ. ಈ ಮೂಲಕ ರಾಣಾ ದಗ್ಗುಬಾಟಿ ಅವರು ರಕ್ಷಿತ್ ಶೆಟ್ಟಿ ಅವರಿಗೆ ಬೆಂಬಲ ನೀಡಿದ್ದಾರೆ. 777 ಚಾರ್ಲಿ ಚಿತ್ರ ನೋಡಿದ ರಾಣಾ ಅವರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು ಚಿತ್ರದ ಪೋಸ್ಟರ್ ಅನ್ನ ಶೇರ್ ಮಾಡಿದ್ದಾರೆ.

777 ಚಾರ್ಲಿ ಚಿತ್ರದ ತೆಲುಗು ಅವತರಣೆಕೆಯನ್ನ ತೆಲುಗು ಪ್ರೇಕ್ಷಕರಿಗೆ ತಲುಪಿಸುವ ಜವಾಬ್ದಾರಿಯನ್ನ ರಾಣಾ ದಗ್ಗುಬಾಟಿ ವಹಿಸಿಕೊಂಡಿದ್ದಾರೆ. ರಾಣಾ ಅವರು ತಮ್ಮ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದನ್ನ ರಕ್ಷಿತ್ ಶೆಟ್ಟಿ ಕೂಡ ನಾವಿಬ್ರೂ ಒಂದು ಸ್ಪಷ್ಟ ಉದ್ದೇಶಕ್ಕಾಗಿ ಜೊತೆಯಾಗಿದ್ದೇವೆ. ನಾವು ಅಸಾಧಾರಣ ಪ್ರಯಾಣಕ್ಕೆ ಸಾಗುತ್ತಿದ್ದೇವೆ. ರಾಣಾ ಮತ್ತು ಸುರೇಶ್ ಪ್ರೊಡಕ್ಷನ್ ಅವರ ಜೊತೆ ಕೈ ಜೋಡಿಸಿರುವುದು ನಮಗೆ ಸಂತೋಷ ತಂದಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಪ್ಯಾನ್ ಇಂಡಿಯಾ 777 ಚಾರ್ಲಿ ಸಿನಿಮಾ ಇದೇ ಜೂನ್ ತಿಂಗಳಲ್ಲಿ ದೇಶಾದ್ಯಂತ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಾಜ್.ಬಿ.ಶೆಟ್ಟಿ, ದಾನೀಶ್ ಸೇಠ್, ಬಾಬಿ ಸಿಂಹ ಸೇರಿದಂತೆ ಇನ್ನಿತರ ಒಂದಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ರಾಣಾ ಅವರು ಕನ್ನಡದ 777 ಚಾರ್ಲಿ ಚಿತ್ರ ನೋಡಿ ಇದು ಎಂತಹ ಅದ್ಬುತವಾದ ಚಿತ್ರ. ಭಿನ್ನವಾದ, ಮನ ಮಿಡಿಯುವ ಮನಮೋಹಕ ಸಿನಿಮಾ ನೋಡಲು ನನಗೆ ಅವಕಾಶ ನೀಡಿದ್ದಕ್ಕೆ ಚಿತ್ರತಂಡಕ್ಕೆ ನಿಜಕ್ಕೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

%d bloggers like this: