ಕನ್ನಡ ಚಿತ್ರರಂಗದ ಪ್ರಖ್ಯಾತ ನಟಿಯಾಗಿರುವ ಪ್ರಣಿತಾ ಅವರು ಕೇಂದ್ರಸರ್ಕಾರದ ಮಹತ್ವ ಯೋಜನೆ ಆಗಿರುವ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಅಯೋಧ್ಯೆ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಕೈ ಜೋಡಿಸುವುದರ ಜೊತೆಗೆ ಒಂದು ಲಕ್ಷ ರುಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಪ್ರಣಿತಾ ಅವರು ಈ ನಿಧಿಗೆ ದೇಣಿಗೆ ನೀಡುವುದಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ತಿಳಿಸಿ ತಮ್ಮ ಅಭಿಮಾನಿಗಳಲ್ಲಿ ಈ ಅಯೋಧ್ಯೆ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ಲಾಕ್ ಡೌನ್ ಸಂಧರ್ಭದಲ್ಲಿ ತಮ್ಮ ಪ್ರಣಿತಾ ಫೌಂಡೇಷನ್ ಸಂಸ್ಥೆಯ ಮುಖಾಂತರ ಬಡವರಿಗೆ, ಅಸಹಾಯಕರಿಗೆ ಆಹಾರ ಧಾನ್ಯ ಕಿಟ್ ನೀಡುವುದರ ಮೂಲಕ ಹಲವಾರು ಕುಟುಂಬಗಳಿಗೆ ನೆರವಾಗಿದ್ದರು.

ಇನ್ನು ಪೀಸ್ ಆಟೋ ಚಾಲಕರ ಅಸೋಸಿಯೇಷನ್ ಸಹಯೋಗದೊಂದಿಗೆ ತಮ್ಮ ಪ್ರಣಿತಾ ಫೌಂಡೇಷನ್ ಜೊತೆಗೂಡಿ ಪ್ರತಿ ಆಟೋ ಚಾಲಕರಿಗೆ 500ರೂ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದರು. ನಟಿ ಪ್ರಣಿತಾ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೊರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸುವುದರ ಮೂಲಕ ದಕ್ಷಿಣ ಭಾರತದಾದ್ಯಂತ ಖ್ಯಾತಿ ಪಡೆದಿದ್ದಾರೆ. ಇನ್ನು ನಟಿ ಪ್ರಣಿತಾ ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ದೇಣಿಗೆಯಾಗಿ ಒಂದು ಲಕ್ಷ ನೀಡಿದ್ದೀರಿ, ಆದರೆ ಉತ್ತರ ಕರ್ನಾಟಕ ಪ್ರವಾಹ ಬಂದಾಗ ಮಾತ್ರ ಸ್ಪಂದಿಸಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಹಾಕಿದ್ದಾರೆ.