ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಿಗ್ ಬ್ರೇಕ್ ನೀಡಿದ ರಾಮಾಚಾರಿ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಚಂದನವನಕ್ಕೆ ಭರವಸೆಯ ನಿರ್ದೇಶಕನಾಗಿ ಹೊರಹೊಮ್ಮಿದ ಸಂತೋಷ್ ಆನಂದ್ ರಾಮ್ ತಮ್ಮ ಸೃಜನಶೀಲ, ಸೃಜನಾತ್ಮಕ ಪ್ರತಿಭೆಯಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಸ್ಥಾನ ಗಳಿಸಿಕೊಂಡಿದ್ದಾರೆ. ರಾಮಾಚಾರಿ ಸಿನಿಮಾದ ನಂತರ ಸಂತೋಷ್ ಆನಂದ್ ರಾಮ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ರಾಜಕುಮಾರ ಸಿನಿಮಾ ಮಾಡಿ ಕನ್ನಡ ಚಿತ್ರೋದ್ಯಮದಲ್ಲಿ ದಾಖಲೆ ನಿರ್ಮಾಣ ಮಾಡಿದ್ದರು. ಈ ರಾಜಕುಮಾರ ಸಿನಿಮಾದಲ್ಲಿ ರಾಜ್ ಕುಮಾರ್ ಅವರ ಎವರ್ ಗ್ರೀನ್ ಸಾಂಗ್ ಆಗಿರುವ ಬೊಂಬೆ ಹೇಳುತೈತೆ ಗೀತೆಯನ್ನು ಹೊಸ ರೂಪದಲ್ಲಿ ಮತ್ತೆ ಸಿನಿರಸಿಕರಿಗೆ ಉಣಬಡಿಸಿದರು.

ಇನ್ನು ಸಂತೋಷ್ ಆನಂದ್ ರಾಮ್ ಮತ್ತೆ ಪವರ್ ಸ್ಟಾರ್ ಪುನೀತ್ ಜೊತೆ ಯುವರತ್ನ ಸಿನಿಮಾ ಮಾಡಿದ್ದಾರೆ ಈ ಚಿತ್ರವು ರಾಜಕುಮಾರ, ನಿನ್ನಿಂದಲೇ, ಮಾಸ್ಟರ್ ಪೀಸ್ ಚಿತ್ರ ನಿರ್ಮಾಣ ಸಂಸ್ದೆಯಾಗಿರುವ ಹೊಂಬಾಳೆ ಕಂಬೈನ್ಸ್ ಅಡಿಯಲ್ಲಿ ತಯಾರಾಗಿದ್ದು, ಈ ಯುವರತ್ನ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಯವರತ್ನ ಚಿತ್ರ ಇನ್ನು ಕೂಡ ಬಿಡುಗಡೆ ಆಗಿಲ್ಲ, ಅದಕ್ಕೂ ಮುನ್ನ ಸಂತೋಷ್ ಆನಂದ್ ರಾಮ್ ಅವರು ಮತ್ತೆ ಪುನೀತ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.

ಸಂತೋಷ್ ಆನಂದ್ ರಾಮ್ ಅವರು ಮತ್ತೆ ಪುನೀತ್ ಅವರೊಂದಿಗೆ ಈ ಚಿತ್ರ ಮಾಡುವುದಾದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಹ್ಯಾಟ್ರಿಕ್ ಜೋಡಿಯಾಗಲಿದೆ. ಇನ್ನು ದುನಿಯಾ ಸೂರಿ ಕೂಡ ಪುನೀತ್ ಅವರಿಗೆ ಮೂರು ಸಿನಿಮಾ ನಿರ್ದೇಶನ ಮಾಡಿ ಹ್ಯಾಟ್ರಿಕ್ ಜೋಡಿ ಆಗಿದ್ದರು. ಇದೀಗ ಸಂತೋಷ್ ಆನಂದ್ ರಾಮ್ ಅವರು ಕೂಡ ಪುನೀತ್ ರಾಜ್ ಕುಮಾರ್ ಅವರಿಗೆ ನಿರ್ದೇಶನ ಮಾಡುವುದಾಗಿ ತಿಳಿಸಿರುವುದರಿಂದ ಹ್ಯಾಟ್ರಿಕ್ ಬಾರಿಸಲಿದ್ದಾರೆ. ಇನ್ನು ಪುನೀತ್ ಅವರ ಜೊತೆಗಿನ ಮೂರನೇ ಚಿತ್ರದ ಬಗ್ಗೆ ಶೀಘ್ರದಲ್ಲೆ ಮಾಹಿತಿ ನೀಡುತ್ತೇನೆ ಎಂದು ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ.