ಚಂದನವನದ ತ್ಯಾಗರಾಜ ಎಂದೇ ಕರೆಸಿಕೊಳ್ಳುವ ನಟ ರಮೇಶ್ ಅರವಿಂದ್ ಅವರಿಗೆ ಹಲವು ವರ್ಷಗಳ ನಂತರ ಬ್ರೇಕ್ ನೀಡಿದಂತಹ ಸಿನಿಮಾ ಅಂದರೆ ಅದು ಶಿವಾಜಿ ಸುರತ್ಕಲ್. ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಮೂಡಿಬಂದ ಶಿವಾಜಿ ಸುರತ್ಕಲ್ ಚಿತ್ರ ಕನ್ನಡ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿ ಸೂಪರ್ ಹಿಟ್ ಆಯಿತು. ಇದೀಗ ಈ ಶಿವಾಜಿ ಸುರತ್ಕಲ್ ಚಿತ್ರದ ಮುಂದುವರಿದ ಭಾಗವಾಗಿ ಶಿವಾಜಿ ಸುರತ್ಕಲ್ ಭಾಗ2 ಸಿನಿಮಾ ಸಿದ್ದಗೊಳ್ಳುತ್ತಿದೆ. ಶಿವಾಜಿ ಸುರತ್ಕಲ್ ಪಾರ್ಟ್ ಒಂದರಲ್ಲಿ ದಿ ಕೇಸ್ ಆಫ್ ರಣಗಿರಿ ರಹಸ್ಯ ಎಂಬ ಟ್ಯಾಗ್ ಲೈನ್ ನೀಡಲಾಗಿತ್ತು. ಡಿಟೆಕ್ಟಿವ್ ಆಫೀಸರ್ ಆಗಿ ಪಾತ್ರ ಮಾಡಿದ್ದ ನಟ ರಮೇಶ್ ಅರವಿಂದ್ ಅವರ ನಟನೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಈ ಶಿವಾಜಿ ಸುರತ್ಕಲ್ ಭಾಗ ಎರಡರ ಚಿತ್ರೀಕರಣ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ನಡೆದಿತ್ತು.

ಈ ಶಿವಾಜಿ ಸುರತ್ಕಲ್ ಪಾರ್ಟ್2 ಚಿತ್ರಕ್ಕೆ ಹೊಸ ಪಾತ್ರವಾಗಿ ನಟಿ ಮೇಘನಾ ಗಾಂವ್ಕರ್ ಕೂಡ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಎಂಟ್ರಿಯಾಗಿರುವ ವಿಚಾರ ಕೂಡ ತಿಳಿದು ಬಂದಿತ್ತು. ಇದೀಗ ಈ ಚಿತ್ರತಂಡದಿಂದ ಹೊರ ಬಿದ್ದಿರುವ ಹೊಸ ಸುದ್ದಿ ಏನಪ್ಪಾ ಅಂದರೆ ನಟ ರಮೇಶ್ ಅರವಿಂದ್ ಅವರ ತಂದೆಯ ಪಾತ್ರವೊಂದು ಈ ಭಾಗ2 ರಲ್ಲಿ ಪರಿಚಯವಾಗುತ್ತದೆ. ಈ ತಂದೆಯ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ನಾಸಿರ್ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ನಾಸಿರ್ ಅವರದ್ದು ನಿವೃತ್ತಿಯಾಗಿರುವ ಐಜಿಯ ಪಾತ್ರವಂತೆ. ಇನ್ನು ನಟ ರಮೇಶ್ ಅರವಿಂದ್ ಮತ್ತು ನಾಸಿರ್ ಇವರಿಬ್ಬರದ್ದು ಬರೋಬ್ಬರಿ ಮೂವತ್ತು ವರ್ಷಗಳ ಸ್ನೇಹ ಸಂಬಂಧವಂತೆ. ಆದರೆ ಇದೇ ಮೊದಲ ಬಾರಿಗೆ ಇವರಿಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ.



ಶಿವಾಜಿ ಸುರತ್ಕಲ್ ಭಾಗ2 ಚಿತ್ರಕ್ಕೆ ರೇಖಾ ಕೆಎನ್ ಮತ್ತು ಅನೂಪ್ ಗೌಡ ಜೊತೆಯಾಗಿ ಬಂಡವಾಳ ಹೂಡಿದ್ದಾರೆ. ಇನ್ನು ಶಿವಾಜಿ ಸುರತ್ಕಲ್ ಭಾಗ1 ರಲ್ಲಿ ನಟಿಸಿದಂತಹ ನಟಿ ರಾಧಿಕಾ ನಾರಾಯಣ್, ರಾಘು ರಾಮನಕೊಪ್ಪ, ವಿಧ್ಯಾಮೂರ್ತಿ ಎಲ್ಲಾ ಕಲಾವಿದರು ಕೂಡ ಈ ಶಿವಾಜಿ ಸುರತ್ಕಲ್ ಪಾರ್ಟ್2 ಚಿತ್ರದಲ್ಲಿ ಇರಲಿದ್ದಾರೆ. ಜೊತೆಗೆ ಹೊಸ ಎಂಟ್ರಿಯಾಗಿ ಸ್ಯಾಂಡಲ್ ವುಡ್ ಜನಪ್ರಿಯ ನಟಿ ಮೇಘನಾ ಗಾಂವ್ಕರ್ ಡಿಸಿಪಿ ದೀಪಾ ಕಾಮತ್ ಎಂಬ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಶಿವಾಜಿ ಸುರತ್ಕಲ್ ಭಾಗ2 ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.