ಯಾವುದಾದರೂ ಒಂದು ವಿಶೇಷ ಸಂದರ್ಭ ಬಂದರೆ ಸಾಕು ಕೆಲವು ಜನರು ತಮ್ಮಿಷ್ಟದ ವ್ಯಕ್ತಿಗಳಿಗೆ ಅವರಿಗೆ ಇಷ್ಟವಾದ ತಿನಿಸುಗಳನ್ನು ಕೆಲವು ಸಿಹಿ ತಿಂಡಿಗಳನ್ನು ಮಾಡಿ ಉಡುಗೊರೆಯಾಗಿ ಕಳಿಸುತ್ತಾರೆ. ಅದರಲ್ಲೂ ಸೆಲೆಬ್ರಿಟಿ ಜನರಲ್ಲಿ ಈ ತರಹದ ಉಡುಗೊರೆ ಗಿಫ್ಟ್ ತರಹದ ವಿಷಯಗಳು ಬಹಳ. ನಾವು ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಬಳಸುವಾಗ ಸಿನಿಮಾ ನಟ ನಟಿಯರು ಹಾಕುವ ಪೋಸ್ಟ್ ಗಳಲ್ಲಿ ಪದೇ ಪದೇ ಈ ತರಹ ಉಡುಗೊರೆ ಬಂದ ವಿಷಗಳನ್ನು ಹಾಕಿದ್ದನ್ನು ನೋಡುತ್ತಲೇ ಇರುತ್ತೇವೆ ಮತ್ತು ಉಡುಗರೇ ಕಳುಹಿಸಿಕೊಟ್ಟ ಸ್ನೇಹಿತ ಅಥವಾ ಸ್ನೇಹಿತರಿಗೆ ಧನ್ಯವಾದ ಹೇಳಿರುತ್ತಾರೆ ನಟ ನಟಿಯರು.

ಆದರೆ ಇಲ್ಲೊಬ್ಬರು ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಜಿ ಸಂಸದೆ ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ಅವರಿಗೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಕ್ಕೆ ವಿಶೇಷವಾಗಿ ದೇಸಿ ಶೈಲಿಯಲ್ಲಿ ರವೆ ಉಂಡೆ ಮತ್ತು ಚಕ್ಕಲಿಗಳನ್ನು ಮಾಡಿ ಉಡುಗೊರೆ ಕಳಿಸಿದ್ದಾರೆ. ಹೌದು ಕನ್ನಿಕಾ ಅರಸ್ ಎಂಬ ರಮ್ಯ ಅವರ ಸ್ನೇಹಿತೆ ತಮ್ಮ ಗೆಳತಿಗಾಗಿ ತುಂಬಾ ಪ್ರೀತಿಯಿಂದ ತಯಾರಿಸಿದ ರವೆ ಉಂಡೆ ಮತ್ತು ಚಕ್ಕುಲಿ ಮಾಡಿ ಕಳಿಸಿದ್ದಾರೆ.



ಈ ಕನ್ನಿಕಾ ಅರಸ್ ಅವರು ಆರ್ ಜೆ ಆಗಿ, ಹಾಡುಗರ್ತಿಯಗಿ, ಸೆಲೆಬ್ರಿಟಿ ಗಳ ಮ್ಯಾನೇಜರ್ ಆಗಿ, ರಾಕ್ಲೈನ್ ಎಂಟ್ಟೈನ್ಮೆಂಟ್ ಎಂಬ ಸಂಸ್ಥೆಯ ಸಿ ಇ ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಿಕಾ ಅವರ ವಿಶೇಷ ಉಡುಗರೆಯಿಂದ ಸಂತಸಪಟ್ಟ ರಮ್ಯ ಇದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯ ಸ್ಟೋರಿ ಯಲ್ಲಿ ಹಾಕಿ ಕನ್ನಿಕಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಚಿತ್ರರಂಗ ಹಾಗೂ ರಾಜಕೀಯದಿಂದ ಸದ್ಯಕ್ಕೆ ದೂರವೇ ಉಳಿದ ಮೋಹಕ ತಾರೆ ರಮ್ಯಾ ತಮ್ಮ ಹಳೆಯ ಹಾಗೂ ಹೊಸ ಗೆಳೆಯ ಗೆಳತಿಯರೊಡನೆ ಸಾಮಾಜಿಕ ಜಾಲತಾಣಗಳಲ್ಲಿ ಚಾಟ್ ಮಾಡುತ್ತ ಕಾಲಕಳೆದು ರಿಲ್ಯಾಕ್ಸ್ ಮೂಡ ನಲ್ಲಿ ಇದ್ದರೆ.