ರಣವೀರ್ ಮತ್ತು ದೀಪಿಕಾ ಅವರಿಬ್ಬರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೇ

ಈ ಸ್ಟಾರ್ ದಂಪತಿಗಳ ನಿವ್ವಳ ಆದಾಯ ಕೇಳಿ ಹುಬ್ಬೇರಿಸಿದ ಬಾಲಿವುಡ್ ಮಂದಿ, ಭಾರತೀಯ ಚಿತ್ರರಂಗದ ಬಹುತೇಕ ನಟ-ನಟಿಯರು ಐಷಾರಾಮಿ ಬದುಕನ್ನ ನಡೆಸುತ್ತಿದ್ದಾರೆ. ಸಿನಿಮಾ ತಾರೆಯರು ಅಂದ ಮೇಲೆ ಅವರಿಗೆ ಹಣಕ್ಕೇನೂ ಕೊರತೆ ಇರುವುದಿಲ್ಲ. ಬಹುತೇಕ ಸ್ಟಾರ್ ನಟ-ನಟಿಯರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ತೊಡಗಿಕೊಂಡಿರದೇ ಅನೇಕ ಕಂಪನಿಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ರಿಯಲ್ ಜಾಹೀರಾತು, ಶೇರು ಮಾರುಕಟ್ಟೆ ಹೀಗೆ ಅನೇಕಾನೇಕ ಆದಾಯ ಬರುವ ಹಾಗೇ ಯೋಜನೆ ಮಾಡಿಕೊಂಡಿರುತ್ತಾರೆ. ಹೀಗೆ ವರ್ಷಕ್ಕೆ ಕೋಟಿ ಕೋಟಿ ಆದಾಯ ಗಳಿಸುವ ಈ ಸ್ಟಾರ್ಸ್ ಪ್ರತಿಷ್ಟಿತ ನಗರಗಳಲ್ಲಿ ದುಬಾರಿ ಬೆಲೆಯ ಐಷಾರಾಮಿ ಪ್ರಾಪರ್ಟಿಯನ್ನು ಖರೀದಿ ಮಾಡಿರುತ್ತಾರೆ.

ಅಂತೆಯೇ ಬಾಲಿವುಡ್ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಕೂಡ ವಾರ್ಷಿಕವಾಗಿ ಕೋಟಿ ಆದಾಯ ಗಳಿಸುತ್ತಾರೆ. ಇತ್ತೀಚೆಗೆ ತಾನೇ ಕೆಲವು ತಿಂಗಳ ಹಿಂದೆಯಷ್ಟೇ ದುಬಾರಿ ಬೆಲೆಯ ಆಕರ್ಷಕ ಉಡುಗೆ- ತೊಡುಗೆಗಳನ್ನು ತೊಟ್ಟು ಮೂಲಕ ಭಾರಿ ಸುದ್ದಿಯಾಗಿದ್ದರು. ಇನ್ನು ನಟಿ ದೀಪಿಕಾ ಪಡುಕೋಣೆ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರು ಭಾರತಕ್ಕೆ ವಿಶ್ವಕಪ್ ಗೆದ್ದು ತಂದಂತಹ ರೋಚಕ ಕಥೆಯನ್ನಾಧರಿಸಿದ 83 ಚಿತ್ರದಲ್ಲಿ ನಟಿಸಿ ಬಂಡವಾಳ ಸಹ ಹೂಡಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರು ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನದ ಐಶ್ವರ್ಯ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು.

2007 ರಲ್ಲಿ ಹಿಂದಿಯ ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟ ದೀಪಿಕಾ ಪಡುಕೋಣೆ ಅವರು ಹಿಂದಿರುಗಿದ್ದೇ ಇಲ್ಲ‌. ಸಾಲು ಸಾಲು ಸಿನಿಮಾಗಳ ಮೂಲಕ ನಟಿಸಿ ಯಶಸ್ಸುಗಳಿಸಿ ಬಾಲಿವುಡ್ ನಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರು ಕೆಲವು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಬರೋಬ್ಬರಿ ಏಳು ಕೋಟಿ ರೂಗಳ ಮೌಲ್ಯದ ಫ್ಲ್ಯಾಟ್ ವೊಂದನ್ನ ಖರೀದಿ ಮಾಡಿದ್ದಾರೆ. ಬೆಂಗಳೂರು ಮತ್ತು ಬಳ್ಳಾರಿ ಮುಖ್ಯರಸ್ತೆ ನ್ಯೂ ಏರ್ ಪೋರ್ಟ್ ರಸ್ತೆಯಲ್ಲಿರುವ ಗಂಗಾನಗರದ ಎಂಬೆಸ್ಸಿ ಗ್ರೂಫ್ ಅಪಾರ್ಟ್ಮೆಂಟ್ ಫೋರ್ ಸೀಸನ್ಸ್ ನ ಇಪ್ಪತ್ತೇಳು ಅಂತಸ್ತಿನ ಮಹಡಿಯಲ್ಲಿ 22 ನೇ ಮಹಡಿಯಲ್ಲಿ ಬರೋಬ್ಬರಿ 6.79 ಕೋಟಿ.ರೂ ಬೆಲೆಯ ಐಷಾರಾಮಿ ಫ್ಲ್ಯಾಟ್ ವೊಂದನ್ನ ಖರೀದಿಸಿದರು.

ಸಿನಿಮಾವೊಂದಕ್ಕೆ ಬರೋಬ್ಬರಿ 15-16 ಕೋಟಿ ಸಂಭಾವನೆ ಪಡೆಯುವ ದೀಪಿಕಾ ಪಡುಕೋಣೆ ಏಷಿಯನ್ ಪೇಂಟ್ಸ್, ಲೋರಿಯಲ್ ಪ್ಯಾರಿಸ್, ಟೆಟ್ಲಿ ಟೀ, ಓಪ್ಪೋ ಅಂತಹ ಪ್ರತಿಷ್ಟಿತ ಕಂಪನಿಗಳಿಗೆ ಅಂಬಾಸಿಡರ್ ಆಗಿದ್ದಾರೆ. ಜಾಹೀರಾತು ಒಂದಕ್ಕೆ ಎಂಟು ಕೋಟಿ ಸಂಭಾವನೆ ಪಡೆಯುತ್ತಾರೆ. ನಟಿ ದೀಪಿಕಾ ಪಡುಕೋಣೆ ಅವರು ಬರೋಬ್ಬರಿ ಮುನ್ನೂರು ಕೋಟಿ ಒಡತಿಯಾಗಿದ್ದಾರೆ. ಇವರ ಪತಿ ನಟ ರಣ್ ವೀರ್ ಸಿಂಗ್ ಅವರು ಕೂಡ ಸ್ಟಾರ್ ನಟರಾಗಿದ್ದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಈ ಇಬ್ಬರು ಸ್ಟಾರ್ ದಂಪತಿಗಳು ಒಟ್ಟು ಬರೋಬ್ಬರಿ 445 ಕೋಟಿ ಆಸ್ತಿ ಮೌಲ್ಯ ಹೊಂದಿದ್ದಾರೆ.

%d bloggers like this: