ರಾಶಿ ಚಕ್ರಗಳಲ್ಲಿ ಬದಲಾವಣೆ, ಈ ವಾರ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

ಈ ಮೂರು ರಾಶಿಯ ಜನರು ಯಾವುದೇ ಕಾರಣಕ್ಕೂ ಮನೆಗೆ ಬರುವ ಲಕ್ಷ್ಮಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಒಮ್ಮೆ ಬರುವ ಈ ಅದೃಷ್ಟವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಹೌದು ಈ ವಾರದಿಂದ ದ್ವಾದಶ ರಾಶಿ ಚಕ್ರಗಳಲ್ಲಿ ಭಾರಿ ಬದಲಾವಣೆ ಆಗಲಿದ್ದು, ಈ ಮೂರು ರಾಶಿಯ ವ್ಯಕ್ತಿಗಳಿಗೆ ಬಂಪರ್ ಆಫರ್ ಸಿಗಲಿದೆಯಂತೆ. ದ್ವಾದಶ ರಾಶಿ ಫಲಾಫಲಗಳು ಆಯಾಯ ಜನ್ಮರಾಶಿಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ರಾಶಿ ಭವಿಷ್ಯದಲ್ಲಿ ತಿಳಿಸುವ ಭವಿಷ್ಯ ಬಹುತೇಕ ಜನರ ಜೀವನದಲ್ಲಿ ನಿಜವಾಗಿ ಬಹಳ ಉತ್ತಮ ಫಲಗಳನ್ನ ಅನುಭವಿಸಿದ್ದಾರೆ. ಅದರಂತೆ ಈ ವಾರದಲ್ಲಿ ಈ ಮೂರೇ ಮೂರು ರಾಶಿಯ ಜನರಿಗೆ ಹೇಳದೆ ಕೇಳದೆ ಧನಲಕ್ಷ್ಮಿ ಆಗಮನ ಆಗಲಿದೆಯಂತೆ. ಹಾಗಾದರೆ ಆ ಧನಲಕ್ಷ್ಮಿ ಕೃಪಾಕಟಾಕ್ಷ ಹೊಂದಿರುವ ರಾಶಿಗಳು ಯಾವ್ಯಾವು ಎಂದು ತಿಳಿಯೋಣ.

ದ್ವಾದಶ ರಾಶಿಗಳಲ್ಲಿ ಪ್ರಾರಂಭದ ರಾಶಿಯಾಗಿರುವ ಮೇಷ ರಾಶಿಯವರಿಗೆ ಈ ವಾರ ಅದೃಷ್ಟ ಲಕ್ಷ್ಮಿ ಒಮ್ಮೆಲೆ ಬರಲಿದ್ದಾಳೆ. ಮನೆಗೆ ಬರುವ ಲಕ್ಷ್ಮಿಯನ್ನ ಯಾವುದೇ ಕಾರಣಕ್ಕೂ ಹಿಂದಿರುಗಿ ಹೋಗುವಂತೆ ನಿರ್ಲಕ್ಷ್ಯ ಮಾಡಬೇಡಿ. ಆದಷ್ಟು ಎಚ್ಚರವಾಗಿರಿ. ಮೇಷ ರಾಶಿಯ ವ್ಯಕ್ತಿಗಳಿಗೆ ಈ ವಾರ ಪೂರ ಮನಸ್ಸಿಗೆ ತುಂಬಾ ನೆಮ್ಮದಿ ಆಗಿರುತ್ತದೆ. ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇರುತ್ತದೆ. ಪ್ರಯಾಣ ಸುಖಕರವಾಗಿರುತ್ತದೆ. ಪ್ರಯಾಣ ಮಾಡುವಾಗ ಅಸಹಾಯಕ ವ್ಯಕ್ತಿಗಳು ಸಿಕ್ಕರೆ ಅವರಿಗೆ ನಿಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿ. ವೃಷಭ ರಾಶಿಯ ಜನರಿಗೆ ಈ ವಾರ ಉತ್ತಮವಾಗಿದ್ದು, ಅಂದುಕೊಂಡ ಕೆಲಸ ಕಾರ್ಯಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಾಣಲಿದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೊಸ ಜವಬ್ದಾರಿ ಬರಲಿದೆ. ನಿಮ್ಮ ಸಾಮಾಜಿಕ ಸೇವಾ ಕಾರ್ಯಕ್ಕೆ ಸಮಾಜದಲ್ಲಿ ಸ್ದಾನ ಮಾನ ಗೌರವ ಲಭಿಸಲಿದೆ. ಮೂರನೇ ವ್ಯಕ್ತಿಯ ಜೊತೆ ಅನಗತ್ಯ ಚರ್ಚೆ ಮಾಡಲು ಹೋಗಬೇಡಿ.

ಮಿಥುನ ರಾಶಿ. ಈ ಮಿಥುನ ರಾಶಿಯ ಜನರಿಗೆ ಈ ವಾರದಲ್ಲಿ ಹಣಕಾಸಿನ ವಿಚಾರದಲ್ಲಿ ಅತ್ಯಂತ ಉತ್ತಮವಾಗಿದ್ದು, ಆದಾಯದ ಮೂಲಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ. ಸ್ವಯಂ ಉದ್ಯೋಗ ಮಾಡಲು ಇಚ್ಚಿಸುವಂತಹ ಯುವಕರು ಇದೀಗ ಹೊಸ ಉದ್ಯಮವನ್ನು ಆರಂಭಿಸಲು ಸೂಕ್ತ ಸಮಯವಾಗಿರುತ್ತದೆ. ಜೊತೆಗೆ ವ್ಯಾಪಾರ ವ್ಯವಹಾರಸ್ಥರಿಗೆ ಈ ವಾರ ಅಧಿಕ ಲಾಭ ಇರಲಿದೆ. ಇನ್ನು ಆರೋಗ್ಯದಲ್ಲಿ ಉತ್ತಮವಾಗಿರಲಿದೆ. ಕರ್ಕಾಟಕ ರಾಶಿ, ಈ ಕರ್ಕಾಟಕ ರಾಶಿಯವರು ಸರ್ಕಾರಿ ನೌಕರರಾಗಿದ್ದರೆ ಮೇಲಾಧಿಕಾರಿಗಳಿಂದ ಕೊಂಚ ಒತ್ತಡಗಳು ಒದಗಿಬರುತ್ತದೆ.

ಇದರಿಂದಾಗಿ ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡಚಣೆ ಉಂಟಾಗುತ್ತದೆ. ಆರ್ಥಿಕ ವಿಚಾರದಲ್ಲಿ ಅಸಮಾಧಾನ ಏರ್ಪಡುತ್ತದೆ. ಅಂದುಕೊಂಡ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಆಗದಿದ್ದರು ಕೂಡ ತಕ್ಕ ಮಟ್ಟಿಗೆ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಸಿಂಹ ರಾಶಿ, ಸಿಂಹ ರಾಶಿಯವರಿಗೆ ಈ ವಾರ ಒಂದಷ್ಟು ಸಂಬಂಧಗಳಲ್ಲಿ ಅಪನಂಬಿಕೆಗಳು ಹೆಚ್ಚಾಗುತ್ತದೆ. ಕುಟುಂಬದಲ್ಲಿ ಹೊಸದೊಂದು ಸಂಭ್ರಮ ವಿಚಾರ ನಡೆಯುತ್ತದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆಗಳು ಇರುತ್ತದೆ. ಹಣಕಾಸಿನ ವಿಚಾರವಾಗಿ ನಕರಾತ್ಮಕ ಅನುಭವಗಳನ್ನು ಪಡೆಯಬಹುದಾಗಿರುತ್ತದೆ. ಹೆಚ್ಚು ಸಂಬಂಧಿಕರ ಜೊತೆ ಹಣಕಾಸು ವ್ಯವಹಾರ ಮಾಡಲು ಯಾವುದೇ ಕಾರಣಕ್ಕೂ ಹೋಗಬೇಡಿ.

ಕನ್ಯಾ ರಾಶಿ. ಈ ಕನ್ಯಾರಾಶಿಯ ವ್ಯಕ್ತಿಗಳಿಗೆ ಈ ವಾರದಿಂದ ಎಲ್ಲಾ ವಿಚಾರದಲ್ಲಿಯೂ ಅತ್ಯುತ್ತಮವಾಗಿರುತ್ತದೆ. ಆದರೆ ವ್ಯಾಪಾರ ವ್ಯವಹಾರದಲ್ಲಿ ಕೊಂಚ ನಕರಾತ್ಮಕತೆ ಕಾಣುತ್ತದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಅವಸರ ಮಾಡಬೇಡಿ. ಇದರಿಂದ ನಷ್ಟವೇ ಹೆಚ್ಚು. ನಿಮ್ಮ ಕುಟುಂಬದಲ್ಲಿ ಸಂತೋಷದ ಸುದ್ದಿ ಕೇಳಿ ಬರುತ್ತದೆ. ಸಂಜೆ ನಂತರ ಯಾರಿಗೂ ಮನೆಯಿಂದ ಅಕ್ಕಿಯನ್ನ ನೀಡಬೇಡಿ. ತುಲಾ ರಾಶಿ, ತುಲಾ ರಾಶಿಯವರಿಗೆ ನಿಮ್ಮ ವ್ಯಕ್ತಿತ್ವ ಭಾವದಲ್ಲಿ ಕೊಂಚ ಬದಲಾವಣೆ ಕಂಡು ಬರುತ್ತದೆ. ಇದು ನಿಮ್ಮ ವೈಯಕ್ತಿಕ ಬೆಳವಣಿಗೆ ಕೂಡ ಸಕಾರಾತ್ಮಕ ವಾದಂತಹ ದಾರಿಯನ್ನು ತೋರಿಸುತ್ತದೆ. ಇನ್ನು ಆದಷ್ಟು ನಿಮ್ಮ ಕೋಪವನ್ನು ನಿಯಂತ್ರಿಸಿದರೆ ಆಗುವಂತಹ ತೊಂದರೆ ಗಳಿಂದ ದೂರ ಉಳಿಯಬಹುದಾಗಿರುತ್ತದೆ. ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಅನೀರಿಕ್ಷಿತ ಲಾಭಗಳು ಹೆಚ್ಚಾಗಿರುತ್ತವೆ.

ವೃಶ್ಚಿಕ ರಾಶಿಯವರಿಗೆ ಜೀವನದಲ್ಲಿ ಹೊಸದೊಂದು ತಿರುವು ನಿಮಗೆ ಕಂಡುಬರುತ್ತದೆ. ಇನ್ನು ಆರ್ಥಿಕವಾಗಿ ಕೂಡ ಅತ್ಯುತ್ತಮವಾಗಿದೆ. ಆರೋಗ್ಯದಲ್ಲಿ ಉತ್ತಮವಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಸಾಮಾಜಿಕ ಸ್ದಾನ ಮಾನ ಮತ್ತಷ್ಟು ವೃದ್ದಿಯಾಗಲಿದೆ. ವಿಧ್ಯಾರ್ಥಿಗಳಿಗೆ ಶುಭಸುದ್ದಿ ಸಿಗಲಿದೆ. ಉದ್ಯೋಗಸ್ಥರಿಗೆ ವೇತನದಲ್ಲಿ ಹೆಚ್ಚಳ ಕಾಣಬಹುದು. ಇನ್ನು ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಧನು ರಾಶಿಯ ಜನರಿಗೆ ಹೆಂಡತಿಯ ಮನೆಯವರಿಂದ ಆದಾಯ ಕಂಡು ಬರಲಿದೆ. ವ್ಯಾಪಾರ ವಾಣಿಜ್ಯ ಚಟುವಟಿಕೆಗಳು ಉತ್ತಮವಾಗಿರುತ್ತದೆ. ದೂರದ ಪ್ರಯಾಣ ಕಂಡು ಬರಲಿದೆ. ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳಿಗೆ ಆವೇಶಕ್ಕೊಳಕ್ಕಾಗಬೇಡಿ. ಸಮಾಧಾನವಾಗಿ ಧೈರ್ಯವಾಗಿ ಎದುರಿಸಿ ಒಳಿತಾಗುತ್ತದೆ. ಯಾವುದೇ ಕಾರಣಕ್ಕೂ ಪೂರ್ವಪರ ತಿಳಿಯದ ವ್ಯಕ್ತಿಗಳೊಂದಿಗೆ ಮುಕ್ತವಾಗಿ ಮಾತನಾಡಬೇಡಿ. ಅನಗತ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.

ಮಕರ : ಮಕರ ರಾಶಿಯ ಜನರಿಗೆ ಈ ವಾರ ಉತ್ತಮವಾಗಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಯೋಗವಿದೆ. ಆರ್ಥಿಕ ವಿಚಾರದಲ್ಲಿ ಬಹುತೇಕ ಸಕರಾತ್ಮಕವಾಗಿವೆ. ದಾಂಪತ್ಯ ಜೀವನದಲ್ಲಿ ವಿರಸ ಕಾಣಲಿದೆ. ಪಿತ್ರಾರ್ಜಿತ ಆಸ್ತಿಗಳಲ್ಲಿ ನಿಮ್ಮಪರ ನ್ಯಾಯ ಸಿಗಲಿದೆ. ಕುಟುಂಬದಲ್ಲಿ ಕೊಂಚ ಅಸಹಕಾರ ಕಾಣಲಿದೆ. ಮಾತಿನಲ್ಲಿ ಆದಷ್ಟು ನಿಯಂತ್ರಣ ಇಟ್ಟುಕೊಳ್ಳಿ. ಆರೋಗ್ಯದಲ್ಲಿ ಉತ್ತಮವಾಗಿದೆ. ಕುಂಭ ಈ ರಾಶಿಯ ಜನರಿಗೆ ಈ ವಾರದಿಂದ ಶುಕ್ರ ದೆಸೆ ಕಾಣ ಬಹುದಾಗಿರುತ್ತದೆ. ಉದ್ಯೋಗದಲ್ಲಿ ಹೊಸ ಜವಬ್ದಾರಿ ಸಿಗಲಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆ ಲಭಿಸಲಿದೆ. ಹಣಕಾಸು ಉತ್ತಮವಾಗಿದೆ. ದೂರ ಪ್ರಯಾಣ ಇರಲಿದೆ.

ಈ ವಾರದಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಸಾಲ ನೀಡಬೇಡಿ. ವಾಪಸ್ ಬರುವುದಿಲ್ಲ. ಆರೋಗ್ಯದಲ್ಲಿ ಕೊಂಚ ಏರು ಪೇರು. ದಂಪತಿಗಳಲ್ಲಿ ‌ಅನ್ಯುನ್ಯತೆ ಶುರುವಾಗಲಿದೆ. ವಿಧ್ಯಾರ್ಥಿಗಳು ಶ್ರಮ ಹಾಕದಿದ್ದಲ್ಲಿ ನಷ್ಟ ಕಟ್ಟಿಟ್ಟ ಬುತ್ತಿ. ಹೊಸ ವ್ಯಾಪಾರ ಆರಂಭ ಮಾಡಲು ಸೂಕ್ತವಾಗಿರುತ್ತದೆ. ಮೀನ ಈ ರಾಶಿಯ ಅವರಿಗೆ ಕುಟುಂಬದಿಂದ ಸಂಪೂರ್ಣ ಸಹಕಾರ ಸಿಗಲಿದೆ. ಕೆಲಸ ಕಾರ್ಯಗಳು ಸರಾಗವಾಗಿ ಈಡೇರಲಿವೆ. ಆರ್ಥಿಕವಾಗಿ ಅತ್ಯುತ್ತಮವಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಆರೋಗ್ಯದಲ್ಲಿ ಉತ್ತಮ. ವಿಧ್ಯಾರ್ಥಿಗಳಿಗೆ ಹೊರ ದೇಶಕ್ಕೆ ಹೋಗುವ ಅವಕಾಶ ಇರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ನೂತನ ವ್ಯವಹಾರ ಆರಂಭ ಮಾಡಲು ಸೂಕ್ತವಾಗಿದೆ.

%d bloggers like this: