ರಶ್ಮಿಕಾ ಅವರ ಮನೆಗೆ ಬಂತು ಹೊಚ್ಚ ಹೊಸ ದುಬಾರಿ ಬೆಲೆಯ ಬ್ರಿಟಿಷ್ ಕಾರು

ನ್ಯಾಷನಲ್ ಕ್ರಷ್ ಮತ್ತು ಬಹುಭಾಷಾ ನಟಿಯಾಗಿ ಹೊರ ಹೊಮ್ಮಿರುವ ರಶ್ಮಿಕಾ ಮಂದಣ್ಢ ಇದೀಗ ಹೊಸ ವರ್ಷಕ್ಕೆ ಕೋಟಿ ಬೆಲೆಯ ನೂತನ ಕಾರು ಖರೀದಿ, ಹೌದು ಕನ್ನಡದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಹಿಂತಿರುಗಿ ನೋಡಿದ್ದೇ ಇಲ್ಲ ಸಾಲು ಸಾಲಾಗಿ ಹಿಟ್ ಮೇಲೆ ಹಿಟ್ ಚಿತ್ರ ಗಳನ್ನು ನೀಡುತ್ತಾ ನಾಲ್ಕೈದು ವರ್ಷಗಳು ಕಳೆಯುವ ಹೊತ್ತಿಗೆ ದಕ್ಷಿಣ ಭಾರತದ ಖ್ಯಾತ ನಟಿಯರನ್ನ ಸರಿಸಿ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಇತ್ತೀದಿನ ದಿನಗಳಲ್ಲಿ ಸುದ್ದಿಯಾಗುತ್ತಿರುವುದು ಸ್ಟಾರ್ ನಟರೊಂದಿಗೆ ಸಿನಿಮಾ ಮಾಡುತ್ತಿರುವುದಕ್ಕೆ ಅದರಲ್ಲೂ ಬಾಲಿವುಡ್ ಬಿಗ್ಬಿ ಅಮಿತಾಬ್ ಬಚ್ಚನ್ ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದರಿಂದ ಭಾರಿ ಸುದ್ದಿಯಾಗಿದ್ದರು.

ನಟ ಸಿದ್ದಾರ್ಥ್ ಮಲ್ಹೋತ್ರ ಅವರ ಜೊತೆ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಇದೀಗ ಮತ್ತೆ ಸುದ್ದಿಯಾಗಿರುವುದು ಅವರು ರೇಂಜ್ ರೋವರ್ ಸ್ಪೋರ್ಟ್ಸ್ ಕಾರು ಖರೀದಿ ಮಾಡುವುದರ ಮೂಲಕ ಎಂಬುದು ವಿಶೇಷವಾಗಿದೆ. ಹೌದು ರಶ್ಮಿಕಾ ಮಂದಣ್ಣಗೆ ಮೊದಲಿನಿಂದಲೂ ಕಾರ್ ಕ್ರೇಜ಼್ ಇತ್ತು.

ಕಳೆದ ಮೂರು ವರ್ಷದ ಹಿಂದೆ (2017) ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥವಾಗಿದ್ದಾಗ ಕೆಂಪು ಬಣ್ಣದ ಆಡಿ ಕಾರು ಕೊಂಡಿದ್ದರು, ಆ ಕಾರು ಇವರ ಮೊದಲ ಕಾರ್ ಆಗಿತ್ತು. ಇದೀಗ ನೂತನ ರೇಂಜ್ ರೋವರ್ ಸ್ಪೋರ್ಟ್ಸ್ ಕಾರು ಕೊಂಡುಕೊಂಡಿದ್ದಾರೆ. ಈ ಕಾರಿನ ಮೌಲ್ಯ ಬರೋಬ್ಬರಿ ಒಂದು ಕೋಟಿಯಷ್ಟಿದೆ ಎಂದು ತಿಳಿದುಬಂದಿದೆ. ಈ ಕಾರು ಖರೀದಿ ಮಾಡಿರುವ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ರಶ್ಮಿಕಾ ಮಂದಣ್ಣ ಸಾರ್ವಜನಿಕ ವಲಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ, ಆದರೆ ಅವರು ಕಾರು ಖರೀದಿ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನೂತನ ರೇಂಜ್ ರೋವರ್ ಕಾರ್ ಪೋಸ್ಟ್ ಜೊತೆಗೆ “ನಾನು ನನ್ನ ಬಗ್ಗೆ ಹೆಚ್ಚಾಗಿ ಹೇಳಿಕೊಂಡಿಲ್ಲ ಆದರೆ ಈ ಈ ವಿಷಯವನ್ನು ಹಂಚಿಕೊಳ್ಳಲೇ ಬೇಕು ಏಕೆಂದರೆ ನೀವು ನನ್ನ ಜೀವನದ ಯಶಸ್ಸಿಗೆ ಪ್ರಮುಖ ಕಾರಣ ಕರ್ತರಾಗಿದ್ದೀರಿ. ನನ್ನನ್ನು ನಿಮ್ಮ ಮನೆಯವಯಳಂತೆ ಪ್ರೀತಿಸಿದ್ದೀರಿ ಆಶೀರ್ವದಿಸಿದ್ದೀರಿ ಅದಕ್ಕಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು” ಎಂದು ತನ್ನ ವೃತ್ತಿಜೀವನ ಸಿನಿ ಪಯಣದಲ್ಲಿ ನೆರವಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಇನ್ನೂ ರಶ್ಮಿಕಾ ತೆಲುಗು ಸ್ಟಾರ್ ನಟ ಅಲ್ಲುಅರ್ಜುನ್ ಅವರೊಂದಿಗೆ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಲು ಹೈದರ್ ಬಾದ್ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ, ಇಲ್ಲಿನ ಇವರ ಪೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಇನ್ನು ತಮಿಳಿನಲ್ಲಿ ಕಾರ್ತಿಕ್ ಅಭಿನಯದ ಸುಲ್ತಾನ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

%d bloggers like this: