ರಶ್ಮಿಕಾ ಅವರ ನಂತರ ತೆಲುಗು ಚಿತ್ರರಂಗದಲ್ಲಿ ಹಲವಾರು ಅವಕಾಶ ಗಿಟ್ಟಿಸಿಕೊಂಡ ಕನ್ನಡ ನಟಿ

ಕಿಸ್ ಚಿತ್ರದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕ್ಯೂಟ್ ಅಂಡ್ ಬ್ಯೂಟಿಫುಲ್ ನಟಿ ಎಂದರೆ ಶ್ರೀಲೀಲಾ. ತಮ್ಮ ಮೊದಲ ಚಿತ್ರದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಶ್ರೀಲೀಲಾ ಅವರು ಗಳಿಸಿಕೊಂಡಿದ್ದಾರೆ. ಮೊದಲ ಚಿತ್ರದಿಂದಲೇ ಭರವಸೆಯ ನಟಿ ಎಂಬ ಹೊಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಭಾಷೆಗಳಲ್ಲೂ ಕೂಡ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿರುವ ನಟಿ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳಲ್ಲಿ ಬಿಸಿಯಾಗಿದ್ದಾರೆ. ಕನ್ನಡದಲ್ಲಿ ಕಿಸ್, ಭರಾಟೆ ಮತ್ತು ರಿಲೀಸ್ ಗೆ ರೆಡಿಯಾಗಿರುವ ಬೈ ಟು ಲವ್ ಹಾಗೂ ತೆಲಗುದಲ್ಲಿ ಪೆಳ್ಳಿ ಸಂದಡಿಯಲ್ಲಿ ನಟಿಸಿ ಶ್ರೀಲೀಲಾ ಸೈ ಎನಿಸಿಕೊಂಡಿದ್ದಾರೆ.

ಪೆಳ್ಳಿ ಸಂದಡಿ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಶ್ರೀಲೀಲಾ ಅವರ ಕ್ಯೂಟ್ ಆಕ್ಟಿಂಗ್ ಮತ್ತು ಡಾನ್ಸ್ ಗೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದರು. ಕನ್ನಡದಲ್ಲಿ ಆಫರ್ಸ್ ಗಳು ಹೆಚ್ಚಾಗಿರುವಾಗಲೇ ಟಾಲಿವುಡ್ ನಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ ಶ್ರೀಲೀಲಾ. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿಯರು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ಕನ್ನಡದ ಪ್ರತಿಭೆಗಳು ಎಲ್ಲೆಡೆ ಮಿಂಚುತ್ತಿದ್ದಾರೆ.

ಈಗಾಗಲೇ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ನಭಾ ನಟೇಶ್ ಅವರು ಟಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಶ್ರೀಲೀಲಾ ಅವರ ಸರದಿ. ಹೌದು ಟಾಲಿವುಡ್ ನ ಖ್ಯಾತ ನಟನಿಗೆ ನಾಯಕಿಯಾಗಿ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ದೊರೆತಿದೆ. ಕ್ರ್ಯಾಕ್ ಸಿನಿಮಾದ ಸಕ್ಸಸ್ ನಲ್ಲಿರುವ ಮಾಸ್ ಮಹಾರಾಜ ರವಿತೇಜ ಅವರು ತಮ್ಮ 68 ನೇ ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಧಮಾಕ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ರವಿತೇಜ ಅವರಿಗೆ ನಾಯಕಿಯಾಗಿ ಪ್ರನ್ವಿ ಎಂಬ ಪಾತ್ರವನ್ನು ಶ್ರೀಲೀಲಾ ಅವರು ನಿರ್ವಹಿಸುತ್ತಿದ್ದಾರೆ.

ತ್ರೀನಂದ ರಾವ್ ನಕ್ಕಿನ ನಿರ್ದೇಶನ ಮಾಡುತ್ತಿರುವ ಈ ಚಿತ್ರ, ಮೇ ತಿಂಗಳಿನಿಂದ ಶೂಟಿಂಗ್ ಶುರು ಮಾಡಲಿದೆ. ಪ್ರೇಮಿಗಳ ದಿನದ ಪ್ರಯುಕ್ತ ರವಿತೇಜ ಹಾಗೂ ಶ್ರೀಲೀಲಾ ನಟನೆಯ ಧಮಾಕ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಅಷ್ಟೇ ಅಲ್ಲದೇ ಟಾಲಿವುಡ್ ನ ಕ್ಯೂಟ್ ಹೀರೋ ಮಹೇಶ್ ಬಾಬು ಅವರ ಮುಂದಿನ ಚಿತ್ರಕ್ಕೆ ಎರಡನೇ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಅದೇನೇ ಇರಲಿ ಕನ್ನಡದ ನಟಿಯರು ಬೇರೆ ಭಾಷೆಯಲ್ಲಿ ಮಿಂಚುತ್ತಿರುವುದು ಹೆಮ್ಮೆಯ ಸಂಗತಿ.

%d bloggers like this: