ಮುದ್ದು ಮುಖದ ಸುಂದರಿ ಶ್ರೀಲೀಲಾ ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಬಂದ ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ತನ್ನ ಮುಗ್ದತೆಯ ನಟನೆಯಿಂದ ಪ್ರೇಕ್ಷಕರಿಗೆ ಇಷ್ಟವಾದರು. ಈ ಕಿಸ್ ಚಿತ್ರದ ಮೂಲಕ ಶ್ರೀಲೀಲಾ ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದರು. ನಂತರ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರ ಭರಾಟೆ ಸಿನಿಮಾದಲ್ಲಿ ನಾಯಕಿಯಾದರು. ಭರಾಟೆ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರು ಸಹ ನಟಿ ಶ್ರೀಲೀಲಾ ಅವರ ಬೇಡಿಕೆ ಹೆಚ್ಚಾಯಿತು, ಇದಾದ ನಂತರ ಜಯಣ್ಣ ಅವರ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿದ್ದ ಲೆಟ್ಸ್ ಬ್ರೇಕಪ್ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು, ಈ ಚಿತ್ರದಲ್ಲಿ ಪಂಚತಂತ್ರ ಸಿನಿಮಾದ ನಾಯಕ ವಿಹಾನ್ ಅವರೊಂದಿಗೆ ಲೆಟ್ಸ್ ಬ್ರೇಕಪ್ ಚಿತ್ರದಲ್ಲಿ ಇಬ್ಬರೂ ಶಾಲಾ ವಿಧ್ಯಾರ್ಥಿಗಳ ಪಾತ್ರ ನಿರ್ವಹಿಸಲು ತಯಾರಿ ಮಾಡಿಕೊಂಡಿದ್ದರು.

ಆದರೆ ಚಿತ್ರದ ಡೇಟ್ ಸಮಸ್ಯೆ ಆದುದ್ದರಿಂದ ನಟ ವಿಹಾನ್ ಮತ್ತು ಶ್ರೀ ಲೀಲಾ ಇಬ್ಬರೂ ಕೂಡ ಲೆಟ್ಸ್ ಬ್ರೇಕಪ್ ಸಿನಿಮಾದಿಂದ ಹೊರ ಬಂದರು, ಇನ್ನು ನಟ ವಿಹಾನ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ನಟಿ ಶ್ರೀಲೀಲಾ ಅವರಿಗೆ ಮಾತ್ರ ಕೈಯಲ್ಲಿ ಇನ್ನು ಎರಡು ಮೂರು ಪ್ರಾಜೆಕ್ಟ್ ಗಳಿವೆ. ಇದರ ಜೊತೆಗೆ ಅದೃಷ್ಟ ಎಂಬಂತೆ ಟಾಲಿವುಡ್ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ಗೌರಿ ರೋನಕಿ ಅವರ ನಿರ್ದೇಶನದಲ್ಲಿ ರೆಡಿಯಾಗುತ್ತಿರುವ ಪೆಳ್ಳಿಸಂದ ಡಿ ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ.

ಇನ್ನು ಈ ಪೆಳ್ಳಸಂದ ಡಿ ಚಿತ್ರಕ್ಕೆ ರೋಷನ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಮೊದಲನೇಯ ಸಿನಿಮಾವನ್ನು ಸ್ಟಾರ್ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ ಎಂದು ತಮ್ಮ ಟಾಲಿವುಡ್ ಎಂಟ್ರಿಯ ಬಗ್ಗೆ
ನಟಿ ಶ್ರೀಲೀಲಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಕನ್ನಡದಲ್ಲಿ ಆಕ್ಷನ್ ಪ್ರಿನ್ಸ್ ದೃವಸರ್ಜಾ ಅವರ ಮುಂದಿನ ಚಿತ್ರ ದುಬಾರಿ ಚಿತ್ರದಲ್ಲಿ ಶ್ರೀಲೀಲಾ ಅವಕಾಶ ಪಡೆದಿದ್ದಾರೆ. ಇದರ ಬಗ್ಗೆ ದುಬಾರಿ ಚಿತ್ರದ ನಿರ್ದೇಶಕ ನಂದಕಿಶೋರ್ ಮಾಹಿತಿ ನೀಡಿದ್ದರು, ಒಟ್ಟಾರೆಯಾಗಿ ಕನ್ನಡ ಚಿತ್ರರಂಗದಿಂದ ಪರಭಾಷೆಯಲ್ಲಿ ಮಿಂಚುತ್ತಿರುವ ನಟಿಯರ ಸಾಲಿಗೆ ಈಗ ಶ್ರೀಲೀಲಾ ಕೂಡ ಸೇರಿಕೊಳ್ಳುತ್ತಿದ್ದಾರೆ. ಈ ಮೂಲಕ ಲೀಲಾ ಅವರು ರಶ್ಮಿಕಾ ಅವರಂತೆ ಟಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.